Maharashtra: ಉದ್ಧವ್ ಠಾಕ್ರೆ (Uddhav Thackeray) ಬಣದ ಶಿವ ಸೇನೆಯು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ (Maharashtra assembly elections) ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ (Education) ಭರವಸೆ, ಅಗತ್ಯ ವಸ್ತುಗಳ ಬೆಲೆಗಳನ್ನು ಸ್ಥಿರಗೊಳಿಸುವುದು ಮತ್ತು ಧಾರಾವಿ ಪುನರಾಭಿವೃದ್ಧಿ ಯೋಜನೆಯನ್ನು ರದ್ದುಗೊಳಿಸುವುದು ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ.
ಅಷ್ಟಕ್ಕೂ ಮಹಾರಾಷ್ಟ್ರದ (Maharashtra) 288 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 20 ರಂದು ಮತದಾನ ನಡೆಯುತ್ತಿದೆ. ಈ ಸೀಟುಗಳ ಫಲಿತಾಂಶ ನವೆಂಬರ್ 23 ರಂದು ಪ್ರಕಟವಾಗಲಿದೆ.
UBT ಬಣ ಪ್ರಣಾಳಿಕೆಯ ವಿವರಗಳು ಇಲ್ಲಿವೆ-
- ಶಿಕ್ಷಣ ಮಹಾರಾಷ್ಟ್ರದಲ್ಲಿ ಜನಿಸಿದ ಎಲ್ಲ ವಿದ್ಯಾರ್ಥಿಗಳಿಗೆ (Students) ಉಚಿತ ಶಿಕ್ಷಣ ವ್ಯವಸ್ಥೆ.
- ಪಿಂಚಣಿ ಸರ್ಕಾರಿ ನೌಕರರಿಗೆ (Pension for Govt Employees) ಹಳೆಯ ಪಿಂಚಣಿ ಯೋಜನೆ ಆರಂಭಿಸಲಾಗುವುದು.
- ಆಹಾರ ಭದ್ರತೆ (Food security) ನೀಡಲಾಗುತ್ತದೆ ಅಲ್ಲದೆ ಇನ್ನು ಮುಂದೆ ರೈತರಿಗೆ ನಷ್ಟವಾಗದಂತೆ ಗೋಧಿ, ಅಕ್ಕಿ, ಎಣ್ಣೆ, ಬೇಳೆಕಾಳುಗಳು ಮತ್ತು ಸಕ್ಕರೆಯಂತಹ ಐದು ಅಗತ್ಯ ವಸ್ತುಗಳ ಬೆಲೆಗಳನ್ನು ಸ್ಥಿರವಾಗಿ ಇರಿಸಲಾಗುವುದು.
- ಸಂಸ್ಕೃತಿ ಪ್ರತಿ ಜಿಲ್ಲೆಯಲ್ಲೂ ಶಿವಾಜಿ ಮಹಾರಾಜರ (Shivaji Maharaja) ಸ್ಫೂರ್ತಿದಾಯಕ ಮಂದಿರ ನಿರ್ಮಿಸಲಾಗುತ್ತದೆ.
- ಆರೋಗ್ಯ ಪ್ರತಿ (Health) ಕುಟುಂಬಕ್ಕೆ 25 ಲಕ್ಷ ರೂ.ವರೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು.
- ಮಹಿಳೆಯರು ಮಹಿಳೆಯರಿಗೆ ನೀಡುವ ಆರ್ಥಿಕ ಸಹಾಯವನ್ನು ಹೆಚ್ಚಿಸಲಾಗುವುದು. ಅಂಗನವಾಡಿ ಕಾರ್ಯಕರ್ತೆಯರು (Anganwadi workers) ಮತ್ತು ಆಶಾ ಕಾರ್ಯಕರ್ತೆಯರ (Asha workers) ವೇತನ ಹೆಚ್ಚಿಸಲಾಗುವುದು.
- ಮಹಾರಾಷ್ಟ್ರದ ಮಣ್ಣಿನ ಪುತ್ರರಿಗಾಗಿ ಅಂತಾರಾಷ್ಟ್ರೀಯ ಮಟ್ಟದ ಹಣಕಾಸು ಮತ್ತು ಕೈಗಾರಿಕಾ ಕೇಂದ್ರವನ್ನು ರಚಿಸಲಾಗುವುದು.
ಪ್ರತಿಪಕ್ಷಗಳ ರಾಜಕೀಯ (Opposition politics) ಪಿತೂರಿಗಳು ಮತ್ತು ವದಂತಿಗಳನ್ನು ಹರಡುತ್ತಿರುವ ಕುರಿತು ಮಾತನಾಡಿ, ನಾನು ಚುನಾವಣಾ ಪ್ರಚಾರಕ್ಕಾಗಿ (election campaign) ಮುಂಬೈನಿಂದ ಹೊರಗೆ ಹೋಗುತ್ತಿದ್ದೇನೆ, ಹಾಗಾಗಿ ಮುಂಬೈನಲ್ಲಿ ಮಹಾ ವಿಕಾಸ್ (Maha Vikas in Mumbai) ಅಘಾಡಿಯ ಮುಂಬರುವ ಪತ್ರಿಕಾಗೋಷ್ಠಿಯಲ್ಲಿ ನಾನು ಭಾಗವಹಿಸದಿದ್ದರೆ, ಮೈತ್ರಿ ಮುರಿದುಹೋಗಿದೆ (Alliance is broken) ಎಂದು ಭಾವಿಸಬೇಡಿ ನಾವು ಸಾರ್ವಜನಿಕರಿಗೆ ಹೇಗೆ ಸೇವೆ ಸಲ್ಲಿಸುತ್ತೇವೆ ಎಂಬ ಭರವಸೆಯನ್ನು ನಾವು ನೀಡಿದ್ದೇವೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.