Mumbai : ಮಾಹಾರಾಷ್ಟ್ರ ವಿಧಾನಸಭಾ ಚುನಾವಣೆಯ (Maharashtra assembly elections) ಕಣ ರಂಗೇರಿದ್ದು, ಬಿಜೆಪಿ (BJP) ನೇತೃತ್ವದ ಮಹಾಯುತಿ ಮೈತ್ರಿಕೂಟ ಪ್ರಣಾಳಿಕೆ ಬಿಡುಗಡೆ ಮಾಡಿರುವ ಬೆನ್ನಲ್ಲೇ ಕಾಂಗ್ರೆಸ್ (Congress) ನೇತೃತ್ವದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟವು ಕೂಡಾ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಮಹಾ ವಿಕಾಸ್ ಅಘಾಡಿ ಮೈತ್ರಿಕೂಟವು ಕರ್ನಾಟಕದ (Karnataka) ಮಾದರಿಯಲ್ಲೇ ಅನೇಕ ಗ್ಯಾರಂಟಿಗಳನ್ನು ಮಹಾರಾಷ್ಟ್ರದಲ್ಲಿಯೂ (Maharashtra) ಘೋಷಣೆ ಮಾಡಿದೆ. ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ (Mallikarjuna) ಖರ್ಗೆ ಅವರು ಮೈತ್ರಿಕೂಟದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು, ನಮ್ಮ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ ಮೊದಲ 100 ದಿನಗಳ ಕಾರ್ಯಸೂಚಿಯನ್ನು ಹಾಕಿಕೊಂಡಿದೆ ಎಂದು ತಿಳಿಸಿದ್ದಾರೆ.
ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ಘೋಷಿಸಿರುವ ಗ್ಯಾರಂಟಿಗಳು : Guarantees announced by the Maha Vikas Aghadi Alliance
• ʻಮಹಾಲಕ್ಷ್ಮಿʼ ಯೋಜನೆಯಡಿ (Mahalakshmi” scheme) ಮಹಿಳೆಯರಿಗೆ ಪ್ರತಿ ತಿಂಗಳು 3,000 ರೂಪಾಯಿ.
• ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಬಸ್ (Free bus) ಸೇವೆ
• ವಾರ್ಷಿಕ 6 ಸಿಲಿಂಡರ್ ಉಚಿತವಾಗಿ (Cylinder for free) ವಿತರಣೆ
• ಮಹಿಳೆಯರ ಸುರಕ್ಷತೆಗಾಗಿ ಬಲವಾದ ಕಾನೂನುಗಳನ್ನು (Strong laws) ರೂಪಿಸುವುದು
• 9 ರಿಂದ 16 ವರ್ಷ ವಯಸ್ಸಿನ ಹುಡುಗಿಯರಿಗೆ ಉಚಿತ ಗರ್ಭಕಂಠದ ಕ್ಯಾನ್ಸರ್ ಲಸಿಕೆ (Cervical cancer vaccine)
• ಮಹಿಳೆಯರಿಗೆ ಪ್ರತಿ ತಿಂಗಳು 2 ದಿನಗಳ ಮುಟ್ಟಿನ ರಜೆ (Menstrual leave) ನೀಡಲಾಗುವುದು.
• ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ (Farmer families) ಸೂಕ್ತ ಪರಿಹಾರ
• ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ (Support price) ನೀಡಲಾಗುವುದು
• ಬೆಳೆ ವಿಮೆ ಯೋಜನೆಯನ್ನೂ (Crop insurance scheme too) ಜಾರಿಗೆ ತರಲಾಗುವುದು
• ನಿರುದ್ಯೋಗಿ ಯುವಕರಿಗೆ (Unemployed youth) ಮಾಸಿಕ 4,000 ರೂ. ಭತ್ಯೆ
• ರಾಜ್ಯ ವಿದ್ಯಾರ್ಥಿವೇತನ ಯೋಜನೆಗಳನ್ನು (Scholarship Schemes) ವಿಸ್ತರಿಸಲಾಗುವುದು.
• ಆರೋಗ್ಯ ವಿಮಾ ಪಾಲಿಸಿಯನ್ನು (Health insurance policy) ವಿಸ್ತರಿಸಲಾಗುವುದು.
• ಜಾತಿ ಜನಗಣತಿ (Caste Census) ಅನುಷ್ಠಾನಕ್ಕೆ ತರಲಾಗುವುದು
ಇದೇ ನವೆಂಬರ್ 20ರಂದು ಮಹಾರಾಷ್ಟ್ರ ವಿಧಾನಸಭೆಗೆ (Maharashtra Legislative Assembly) ಮತದಾನ ನಡೆಯಲಿದೆ.