Washington: ಫ್ಲೋರಿಡಾದ ಕಾಂಗ್ರೆಸ್ ಮ್ಯಾನ್ (Congressman from Florida) ಎಂದೇ ಹೆಸರಾಗಿರುವ ಮೈಕ್ ವಾಲ್ಡ್ಜ್ ಅವರನ್ನು ಡೊನಾಲ್ಡ್ ಟ್ರಂಪ್, ರಾಷ್ಟ್ರೀಯ ಭದ್ರತಾ (National security) ಸಲಹೆಗಾರರನ್ನಾಗಿ ( National Security Advisor ) ನೇಮಕ ಮಾಡಿದ್ದಾರೆ. ಅಮೆರಿಕಾದಲ್ಲಿ ಭಾರತ ಕಾಕಸ್ ನಾಯಕರೂ ಆಗಿರುವ ಮೈಕ್ ವಾಲ್ಡ್ಜ್, ಅಮೆರಿಕಾ (Mike Waldge, America) – ಭಾರತ ನಡುವಿನ ಭದ್ರತಾ ಮತ್ತು ರಕ್ಷಣಾ ವಿಚಾರಕ್ಕೆ ಸಂಬಂಧಿಸಿದಂತೆ, ಸಕಾರಾತ್ಮಕ ಚಿಂತನೆಯನ್ನು ಹೊಂದಿದವರಾಗಿದ್ದಾರೆ.
ಅಮೆರಿಕಾದಲ್ಲಿ ಭಾರತ ಕಾಕಸ್ ನಾಯಕರೂ (Caucus leaders too) ಆಗಿರುವ ಮೈಕ್ ವಾಲ್ಡ್ಜ್, ಅಮೆರಿಕಾ – ಭಾರತ ನಡುವಿನ ಭದ್ರತಾ ಮತ್ತು ರಕ್ಷಣಾ ವಿಚಾರಕ್ಕೆ ಸಂಬಂಧಿಸಿದಂತೆ, ಸಕಾರಾತ್ಮಕ ಚಿಂತನೆಯನ್ನು ಹೊಂದಿವರಾಗಿದ್ದಾರೆ. ಅಫ್ಘಾನಿಸ್ತಾನ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ (Nations) ಕೆಲಸ ಮಾಡಿರುವ ಅನುಭವವನ್ನೂ ಇವರು ಹೊಂದಿದ್ದಾರೆ. ಈ ಹಿಂದೆ, ಡೊನಾಲ್ಡ್ ರಮ್ಸ್ಫೀಲ್ಡ್ ಅವರು ರಕ್ಷಣಾ ಕಾರ್ಯದರ್ಶಿಯಾಗಿದ್ದ (Defense Secretary) ವೇಳೆ, ಪೆಂಟಗಾನ್ ನಲ್ಲಿ ಅಫ್ಘಾನಿಸ್ತಾನದ ನೀತಿ ಸಲಹೆಗಾರರಾಗಿಯೂ ಮೈಕ್ ವಾಲ್ಡ್ಜ್, ಕೆಲಸ ನಿರ್ವಹಿಸಿದ್ದಾರೆ. ನಿವೃತ್ತ ಮಿಲಿಟರಿಯೂ ಅಧಿಕಾರಿಯಾಗಿರುವ ಮೈಕ್ ವಾಲ್ಡ್ಜ್, ಚೀನಾದ ಕಡುವಿರೋಧಿಯಾಗಿ ಗುರುತಿಸಿಕೊಂಡವರು. ಚೀನಾದ ಕಮ್ಯೂನಿಸ್ಟ್ ಸರ್ಕಾರಕ್ಕೆ (Chinese communist government) ಮೈಕ್ ವಾಲ್ಡ್ಜ್ ಅವರ ನೇಮಕ, ಎಚ್ಚರಿಕೆಯ ಗಂಟೆ ಎಂದು ವಿಶ್ಲೇಷಿಸಲಾಗುತ್ತಿದೆ. ತೈವಾನ್ ದೇಶದ ಮೇಲೆ ಚೀನಾದ ಹಿಡಿತವನ್ನು ಕಮ್ಮಿಗೊಳಿಸುವ ವಿಚಾರದಲ್ಲೂ ಮೈಕ್ ವಾಲ್ಡ್ಜ್ ತಮ್ಮ ನಿಲುವನ್ನು ಪ್ರಕಟಿಸಿದ್ದರು.
ಟ್ರಂಪ್ (Trump) ಅವರ ಬೆಂಬಲಿಗರೂ ಆಗಿರುವ ಮೈಕ್ ವಾಲ್ಡ್ಜ್, ಚೀನಾ (China) ಉತ್ಪಾದನೆಯ ಯಾವುದೇ ವಸ್ತುಗಳ ಮೇಲೆ ಅಮೆರಿಕಾ ಅವಲಂಬಿತವಾಗಬಾರದು ಎನ್ನುವ ನಿಲುವನ್ನು ಹಲವು ಬಾರಿ ಪ್ರತಿಪಾದಿಸಿದ್ದರು. ಕೋವಿಡ್ 19ನಲ್ಲಿ ಚೀನಾದ ಪಾತ್ರವನ್ನು ಪ್ರತಿಭಟಿಸಲು, ಬೀಜಿಂಗ್ (Beijing) ನಲ್ಲಿ ನಡೆದ 2022ರ ಚಳಿಗಾಲದ ಓಲಂಪಿಕ್ಸ್ ಅನ್ನು ಬಹಿಷ್ಕರಿಸಬೇಕೆಂದು ಒತ್ತಾಯಿಸಿದ್ದರು.2023ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾಗೆ ಭೇಟಿ ನೀಡಿದ ಸಂದರ್ಭದಲ್ಲಿ, ಕ್ಯಾಪಿಟಲ್ ಹಿಲ್ ಭಾಷಣದಲ್ಲಿ ವಾಲ್ಡ್ಜ್ ಪ್ರಮುಖ ಪಾತ್ರವನ್ನು ವಹಿಸಿದ್ದರು.ಈಗಾಗಲೇ, ಇಂಡಿಯಾ ಕ್ಯಾಕಸ್ ಕಾಂಗ್ರೆಸ್ (India Caucus Congress) ಜವಾಬ್ದಾರಿಯನ್ನೂ ಹೊತ್ತಿರುವ ವಾಲ್ಡ್ಜ್ , ವಾಷಿಂಗ್ಟನ್ – ನವದೆಹಲಿ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಗೊಳಿಸುತ್ತಾರೆ ಎಂಬ ಭರವಸೆ ಮೂಡಿದೆ.