Cinema : ಕೆಲವು ಸಿನಿಮಾಗಳು(Cinemas) ಜನಮಾನಸದಲ್ಲಿ ಎಂದಿಗೂ ಅಚ್ಚಳಿಯದೆ ಉಳಿದಿರುತ್ತವೆ. ಇಂತಹ ಸಿನಿಮಾಗಳಲ್ಲಿ ಒಂದು, ಪವರ್ ಸ್ಟಾರ್(Powerstar)
ಪುನೀತ್ ರಾಜಕುಮಾರ್(Puneeth Rajkumar) ಅಭಿನಯದ ‘ಮಿಲನ’(Milana). ಮಿಲನ ಚಿತ್ರ ಜನರನ್ನು ಯಾವ ಮಟ್ಟಿಗೆ ಮೋಡಿ ಮಾಡಿತ್ತು ಎನ್ನುವುದು, ಪ್ರತಿಯೊಬ್ಬರಿಗೂ ತಿಳಿದಿದೆ.

‘ಮಿಲನ’ ಚಿತ್ರದಲ್ಲಿ ಅಪ್ಪು ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿ ನಟಿಸಿದ್ದರು.
ಆರ್.ಜೆ ಪಾತ್ರದಲ್ಲಿ ನಟಿಸಿ ಅಭಿಮಾನಿಗಳ ಮನ ಗೆದ್ದಿದ್ದರು, ಮಲಯಾಳಿ ಚೆಲುವೆ ಪಾರ್ವತಿ ಅಭಿನಯವೂ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿತ್ತು.
ಮುಖ್ಯಮಂತ್ರಿ ಚಂದ್ರು, ಸುಮಿತ್ರಾ, ರಂಗಾಯಣ ರಘು, ಸಿಹಿಕಹಿ ಚಂದ್ರು ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು.
ಇದನ್ನೂ ಓದಿ : https://vijayatimes.com/elephants-to-look-out-cheetahs/
‘ಇಷ್ಟಂ ಎನಿಕ್ಕಿಷ್ಟಂ’ ಹೆಸರಿನಲ್ಲಿ ಚಿತ್ರ ಮಲಯಾಳಂಗೂ ಡಬ್ ಆಗಿ ರಿಲೀಸ್ ಆಗಿತ್ತು. ಅದು ಮಲ್ಟಿಪ್ಲೆಕ್ಸ್ಗಳ(Multiplex) ಜಮಾನ ಶುರುವಾಗುತ್ತಿದ್ದ ಕಾಲ, ಅಂತಹ ಸಮಯದಲ್ಲೇ ‘ಮಿಲನ’ ಚಿತ್ರ ಮಲ್ಟಿಪ್ಲೆಕ್ಸ್ನಲ್ಲಿ 500 ದಿನ ಪ್ರದರ್ಶನ ಕಂಡಿತ್ತು.
ಹೌದು, ಮೊದಲು ಮಿಲನ ಚಿತ್ರಕ್ಕೆ ಸಾಧಾರಣ ಓಪನಿಂಗ್ ಸಿಕ್ಕಿತ್ತು. ಆದರೆ ನೋಡ್ತಾ ನೋಡ್ತಾ ಈ ಸಿನಿಮಾ ಥಿಯೇಟರ್ಗಳಲ್ಲಿ ಧೂಳೆಬ್ಬಿಸಿತ್ತು.

ಪ್ರೇಕ್ಷಕರು ಫ್ಯಾಮಿಲಿ ಸಮೇತ ಆಕಾಶ್ ಹಾಗೂ ಅಂಜಲಿ ಜೋಡಿಯ ಪ್ರೇಮ್ ಕಹಾನಿ ನೋಡಲು ಮುಗಿಬಿದ್ದರು. ಅದಕ್ಕೆ ಮನೋಮೂರ್ತಿ ಸಂಗೀತದ ಬಲವೂ ಸಿಕ್ಕಿತ್ತು, ಮುಂದೆ ಸತತ 500 ದಿನಗಳ ಕಾಲ ಪ್ರದರ್ಶನ ಕಂಡ ಸಿನಿಮಾ ಇತಿಹಾಸ ಸೃಷ್ಟಿಸಿತ್ತು.
https://youtu.be/ysine_00WIo : ಸಿಕ್ಕಿ ಬಿದ್ರು ಶಿಕ್ಷಕರು !
ಈ ಚಿತ್ರದ ಬಗ್ಗೆ ಇನ್ನೂ ಹಲವಾರು ಕುತೂಹಲಕಾರಿ ಅಂಶಗಳಿವೆ.
ಈ ಚಿತ್ರ 137 ಸೆಂಟರ್ ಗಳಲ್ಲಿ 50 ದಿನಗಳನ್ನು, 50 ಸೆಂಟರ್ ಗಳಲ್ಲಿ 100 ದಿನಗಳನ್ನು ಹಾಗೂ 15 ಸೆಂಟರ್ ಗಳಲ್ಲಿ 200 ದಿನಗಳನ್ನು ಪೂರೈಸಿದೆ.
ಒಂದು ವರ್ಷ ಪೂರೈಸಿದ ಈ ಸಿನಿಮಾ 600 ದಿನ ಬೆಂಗಳೂರಿನ(Bengaluru) ಪಿವಿಆರ್(PVR) ಮಲ್ಟಿಪ್ಲೆಕ್ಸ್ ಗಳಲ್ಲಿ ಯಶಸ್ಸಿಯಾಗಿ ಪ್ರದರ್ಶನ ಕಂಡಿತ್ತು.

‘ಮಿಲನ’ ಚಿತ್ರವನ್ನು ಹೊರತು ಪಡಿಸಿ ಬೇರೆ ಯಾವ ಸಿನಿಮಾ ಕೂಡ ಮಲ್ಟಿಪ್ಲೆಕ್ಸ್ ನಲ್ಲಿ ಅಷ್ಟೊಂದು ದಿನ ಸತತ ಪ್ರದರ್ಶನ ಕಂಡಿಲ್ಲ.
ಇನ್ನು, ‘ಮಿಲನ’ ಸಿನಿಮಾಗೆ ಹಾಕಿದ ಬಂಡವಾಳ, 5 ಕೋಟಿ. ಆದರೆ, ಗಳಿಕೆ ಬರೋಬ್ಬರಿ 30 ಕೋಟಿ. ಹೌದು, ಪಕ್ಕಾ ಫ್ಯಾಮಿಲಿ ಸಿನಿಮಾವಾಗಿದ್ದ ‘ಮಿಲನ’ ದೊಡ್ಡ ಕಲೆಕ್ಷನ್ ಮಾಡಿತು. ಕನ್ನಡ ಚಿತ್ರಗಳ ಪೈಕಿ ಅತಿ ಹೆಚ್ಚು ಹಣ ಮಾಡಿದ ಸಿನಿಮಾಗಳಲ್ಲಿ ಇದು ಕೂಡ ಒಂದು.
- ಪವಿತ್ರ