ಮನ್ ಮುಲ್ ಎಂಡಿ ರೈತರ ಹಾಲಿನ ಖರೀದಿ ದರದಲ್ಲಿ 2 ರೂಪಾಯಿ ಹೆಚ್ಚಳ ಮಾಡಿರುವುದಾಗಿ ತಿಳಿಸಿದ್ದಾರೆ. ಹೈನುಗಾರಿಕೆ ನಂಬಿಕೊಂಡು ಅನೇಕ ಬಡ ಕುಟುಂಬಗಳು ವ್ಯವಸಾಯ ಮಾಡುತ್ತೀವೆ. ಅದೇ ರೀತಿ ಎಷ್ಟೋ ಕುಟುಂಬಗಳು ಬೆಳಂಬೆಳಿಗ್ಗೆ ಹಸು, ಎಮ್ಮೆಯ ಹಾಲು ಕರೆದು ಅದನ್ನು ಡೈರಿಗೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ರೈತರ ದೈನಂದಿನ ಜೀವನ ಹೈನುಗಾರಿಕೆ ಮೇಲೆ ಅವಲಂಬಿತವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಜೊತೆಗೆ ಬೇಸಿಗೆ ಕಾಲ ಹತ್ತಿರವಾಗುತ್ತಿರುವ ಹಿನ್ನಲೆ ಮನ್ ಮುಲ್ ಎಂಡಿ ಅವರು ರೈತರಿಗೆ ಬೇಸಿಗೆ ಸಮಯದಲ್ಲಿ ಅತೀ ಅಗತ್ಯವಾಗಿ ಆರ್ಥಿಕ ಶಕ್ತಿ ತುಂಬಲು ಹಿಂದಿನ ದರಕ್ಕಿಂತ 2 ಹೆಚ್ಚಳ ಮಾಡಿ ಪ್ರೋತ್ಸಾಹ ಮಾಡಿದ್ದೇವೆ.

ಈ ಮೂಲಕ ರೈತರಿಗೆ ಸಹಾಯವಾಗಲಿ ಅವರ ಕೆಲಸಕ್ಕೆ ಮತ್ತಷ್ಟು ಪುಷ್ಟಿ ನೀಡಲಿ ಎಂಬ ಉದ್ದೇಶದಿಂದ ಮಾಡಿದ್ದೇವೆ ಎಂದು ಹೇಳಿದ್ದಾರೆ. ಮನ್ಮುಲ್ ಅವರಿಗೆ 11 ಕೋಟಿ ರೂಪಾಯಿ ಲಾಭ ಬಂದಿದೆ. ಈ ಲಾಭದಲ್ಲಿ ಒಂದಿಷ್ಟು ಭಾಗವನ್ನು ರೈತರಿಗೆ ಹಂಚುವ ಉದ್ದೇಶದಿಂದ 2 ರೂಪಾಯಿ ದರ ಹೆಚ್ಚಳ ಮಾಡಿರುವುದು ಎಂದು ಸಂತಸದಿಂದ ಹಂಚಿಕೊಂಡಿದ್ದಾರೆ.