ರಾಜಸ್ಥಾನದ ಸಚಿವ ಶಾಂತಿ ಕುಮಾರ್ ಧರಿವಾಲ್ ಅವರು ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತು ಸಭೆಯಲ್ಲಿ ಬುಧವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಭೆಯಲ್ಲಿ ಮಾತನಾಡಿದ ಶಾಂತಿ ಕುಮಾರ್ ಧರಿವಾಲ್ ತಮ್ಮ ಹೇಳಿಕೆಯಿಂದ ಎಲ್ಲರನ್ನು ಕೆಣಕಿದ್ದಾರೆ. ಈ ಹಿಂದೆಯೂ ಸಾಕಷ್ಟು ರೇಪ್ ಕೇಸ್ ಗಳು ನಡೆದಿದೆ. ರೇಪ್ ಕೇಸ್ ಗಳು ಹೆಚ್ಚುತ್ತಲೇ ಇದೆ ವಿನಃ ಅದಕ್ಕೆ ವಿನಾಶವಿಲ್ಲ ಎಂಬಂತೆ ಗೋಚರಿಸುತ್ತಿದೆ. ಸದ್ಯ ಇದೇ ವಿಚಾರದ ಕುರಿತು ಸಭೆಯಲ್ಲಿ ಮಾತನಾಡಿ, ರಾಜಸ್ಥಾನದಲ್ಲಿ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ.
ಇದಕ್ಕೆ ನಾವೇನು ಮಾಡಬೇಕು? ರಾಜಸ್ಥಾನವು ಪುರುಷರ ನಾಡು ಎಂದು ವಿವಾದಾತ್ಮಕ ಹೇಳಿಕೆ ನೀಡಿದರು. ಈ ಹೇಳಿಕೆಯ ಬಳಿಕ ಪ್ರತಿಯೊಬ್ಬರು ಈ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತ್ಯಾಚಾರ ಪ್ರಕರಣಗಳಲ್ಲಿ ನಾವು ನಂಬರ್ 1 ಆಗಿದ್ದೇವೆ. ಅದು ಏಕೆ? ರಾಜಸ್ಥಾನವು ಪುರುಷರ ನಾಡು. ಅದಕ್ಕೆ ನಾವೇನು ಮಾಡಬಹುದು? ಏನಾದರೂ ಪರಿಹಾರ ನೀಡಿ ಎಂದು ಹೇಳಿದರು. ಹೇಳಿಕೆ ನೀಡಿದ ಮರುಕ್ಷಣವೇ ನಗುತ ಅದೆಲ್ಲಾ ಸುಮ್ಮನೆ ಹೇಳಿದ್ದು, ಎನ್ನುವ ರೀತಿ ಬಿಂಬಿಸಿದ್ದಾರೆ. ಇದು ಅಲ್ಲಿದ್ದವರ ಕೆಂಗಣ್ಣಿಗೆ ಗುರಿಯಾಗಿದೆ.
ತಾನು ನೀಡಿದ ಹೇಳಿಕೆ ತಪ್ಪು ಎಂಬುದು ತಿಳಿಯುತ್ತಿದ್ದಂತೆ ನಗುತ ನಾನು ಸುಮ್ಮನೇ ಹೇಳಿದೆ ಎಂದು ಮುಚ್ಚಾಕಲು ಶಾಂತಿ ಕುಮಾರ್ ನಾಟಕವಾಡಿದ್ದಾರೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಭೆಯಲ್ಲಿ ಮಾತನಾಡಿರುವ ದೃಶ್ಯವನ್ನು ಎಎನ್‌ಐ ಪೋಸ್ಟ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.