ಬೆಂಗಳೂರು: ಗುತ್ತಿಗೆದಾರರ ಸಂಘದ ವಿರುದ್ದ 50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯನ್ನು ಸಚಿವ (Minister) ಮುನಿರತ್ನ (Munirathna) ದಾಖಲಿಸಲು ಸಿದ್ದತೆ ನಡೆಸಿದ್ದಾರೆ.

ತಮ್ಮ ಮೇಲೆ ಕಮಿಷನ್(Commission) ಆರೋಪ ಮಾಡಿರುವ ಕರ್ನಾಟಕ (Karnataka)ರಾಜ್ಯ ಗುತ್ತಿಗೆದಾರರ ಸಂಘದ ವಿರುದ್ಧ 50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹಾಗೂ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ತೋಟಗಾರಿಕಾ ಸಚಿವ ಮುನಿರತ್ನ ಈ ಹಿಂದೆ ಹೇಳಿದ್ದರು.
ಅದರಂತೆ ನ್ಯಾಯಾಲಯದಲ್ಲಿ ತಮ್ಮ ವಕೀಲರ ಮೂಲಕ ಮೊಕದ್ದಮೆ ದಾಖಲಿಸಲು ಸಿದ್ದತೆ ನಡೆಸಿದ್ದಾರೆ.
ಇದನ್ನೂ ಓದಿ : https://vijayatimes.com/hd-kumarswamy-statement-over-devanalli-land/
ಈ ಕುರಿತು ಮಾತನಾಡಿರುವ ಸಚಿವ ಮುನಿರತ್ನ, ನಾನು ಗುತ್ತಿಗೆದಾರನಾಗಿದ್ದವನು, ಆದರೆ ಇಂದು ನಾನು ಸದಸ್ಯನಾಗಿದ್ದ ಗುತ್ತಿಗೆದಾರರ ಸಂಘದ ವಿರುದ್ಧವೇ ಮಾನನಷ್ಟ ಮೊಕದ್ದಮೆ ಹೂಡುವ ಪರಿಸ್ಥಿತಿ ಬಂದಿದೆ. ಈ ಆರೋಪದ ಬಗ್ಗೆ ಕ್ರಮ ಕೈಗೊಳ್ಳದೆ ಬಿಟ್ಟರೆ, ರಾಜ್ಯದ ಜನತೆಗೆ ತಪ್ಪು ಸಂದೇಶ ರವಾನೆಯಾಗುತ್ತದೆ.

ಜನರಿಗೆ ತಪ್ಪು ಸಂದೇಶ ಹೋಗಬಾರದು ಎಂಬ ಉದ್ದೇಶದಿಂದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಹಾಗೂ ಅದರ ಎಲ್ಲಾ ಪದಾಧಿಕಾರಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಸಿದ್ದತೆ ನಡೆಸಿದ್ದೇನೆ. ನನ್ನ ವಿರುದ್ದ ಮಾಡಿರುವ ಆರೋಪಕ್ಕೆ ಅವರು ನ್ಯಾಯಾಲಯದ ಮುಂದೆ ಬಂದು ಸಾಕ್ಷ್ಯ ನೀಡಬೇಕು.
ಒಂದು ವೇಳೆ ನ್ಯಾಯಾಲಯಕ್ಕೆ ಸಾಕ್ಷ್ಯ ಒದಗಿಸಲು ಸಾಧ್ಯವಾಗದಿದ್ದರೆ ಕಾನೂನು ತನ್ನ ಹಾದಿ ಹಿಡಿಯುತ್ತದೆ. ನಾನು ತಪ್ಪು ಮಾಡಿದ್ದರೆ ನನಗೆ ಶಿಕ್ಷೆಯಾಗಲಿ, ಆದರೆ ಆರೋಪಗಳ ಮೂಲಕ ಮಾನಹಾನಿ ಮಾಡುವುದನ್ನು ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಮುಂದಿನ ಏಳು ದಿನಗಳಲ್ಲಿ ಲೋಕಾಯುಕ್ತರ ಮುಂದೆ ದೂರು ಸಲ್ಲಿಸಬೇಕು.

ಲೋಕಾಯುಕ್ತರ ಮುಂದೆ ದೂರು ದಾಖಲಿಸಲು ಅಥವಾ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಲು ಯಾವುದೇ ಸಾಕ್ಷ್ಯಾಧಾರಗಳಿಲ್ಲದಿದ್ದಲ್ಲಿ, ಅವರು ಮಾಡಿದ ಆರೋಪಗಳಿಗೆ ಕ್ಷಮೆಯಾಚಿಸಿ ಪತ್ರಿಕಾ ಪ್ರಕಟಣೆ ನೀಡಬೇಕು. ಏಳು ದಿನಗಳ ನಂತರವೂ ಕ್ಷಮೆಯಾಚನೆ ಮಾಡದಿದ್ದಲ್ಲಿ,
ಇದನ್ನೂ ಓದಿ : https://vijayatimes.com/chocolate-is-a-beauty-product/