ಗ್ಯಾಸ್ ಮುಂದೆ ಕ್ಯೂ ನಿಲ್ಲಬೇಡಿ, ಮನೆಗೆ ಬರುತ್ತೆ ಗ್ಯಾಸ್
ಗ್ಯಾಸ್ ಏಜೇನ್ಸಿಗಳು ಜಾಸ್ತಿ ಹಣ ವಸೂಲಿ ಮಾಡಿದ್ರೆ ಶಿಕ್ಷೆ, ಲೈಸೆನ್ಸ್ ರದ್ದು
ಯುದ್ಧ ಪರಿಸ್ಥಿತಿ ಹಿನ್ನೆಲೆ ಗ್ಯಾಸ್ ಬಳಕೆಯಲ್ಲಿ ಮಿತಿ: ನಗರ, ಗ್ರಾಮಗಳಿಗೆ ವಿಭಿನ್ನ ಮಾರ್ಗಸೂಚಿ
Bengaluru : ಯುದ್ಧ ಪರಿಸ್ಥಿತಿಯಿಂದ ಉಂಟಾದ ಇಂಧನ ಹಾಗೂ ಎಲ್‌ಪಿಜಿ ಗ್ಯಾಸ್ (Minister Muniyappa appeals for moderate use of LPG) ಪೂರೈಕೆ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ (K.H. Muniyappa) ಮನವಿ ಮಾಡಿದ್ದಾರೆ.
ಎಲ್‌ಪಿಜಿ ಗ್ಯಾಸ್ ಅನ್ನು ಮಿತವಾಗಿ ಬಳಸುವಂತೆ ಅವರು ಸಲಹೆ ನೀಡಿದ್ದು, ನಗರ ಪ್ರದೇಶದ ಜನರು ಎಲೆಕ್ಟ್ರಿಕ್ ಸ್ಟವ್ (Electric Stove) ಬಳಸಬೇಕು ಹಾಗೂ ಗ್ರಾಮೀಣ ಭಾಗದ ಜನರು ಸೌದೆ ಒಲೆ ಮೂಲಕ ಅಡುಗೆ ಮಾಡಬಹುದು ಎಂದು ತಿಳಿಸಿದ್ದಾರೆ.

ಈ ಮೂಲಕ ಗ್ಯಾಸ್ ಬಳಕೆಯನ್ನು ಕಡಿಮೆ ಮಾಡಿ ಎಲ್ಲರಿಗೂ ಸರಬರಾಜು ಸಮರ್ಪಕವಾಗಿ ಆಗುವಂತೆ ಸಹಕರಿಸಬೇಕು ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈಗಾಗಲೇ ಗೃಹ ಬಳಕೆ ಸಿಲಿಂಡರ್ ಬುಕ್ಕಿಂಗ್ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹೇಳಿದರು.
ನಗರ ಪ್ರದೇಶದ ಜನರು ಪ್ರತಿ 25 ದಿನಗಳಿಗೆ ಒಮ್ಮೆ ಮಾತ್ರ ಗೃಹ ಬಳಕೆ ಸಿಲಿಂಡರ್ (Cylinder) ಬುಕ್ ಮಾಡಲು ಅವಕಾಶ ನೀಡಲಾಗಿದೆ.
ಗ್ರಾಮೀಣ ಭಾಗದಲ್ಲಿ ಪ್ರತಿ 45 ದಿನಗಳಿಗೆ ಒಮ್ಮೆ (Minister Muniyappa appeals for moderate use of LPG) ಸಿಲಿಂಡರ್ ಬುಕ್ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
ಈ ನಿಯಮವನ್ನು ಅನುಸರಿಸುವ ಮೂಲಕ ಗ್ಯಾಸ್ ಸರಬರಾಜನ್ನು ಸಮತೋಲನದಲ್ಲಿಡಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ವಿವರಿಸಿದರು.
ಪ್ರಸ್ತುತ ಎಲ್‌ಪಿಜಿ ಪೂರೈಕೆ ಸ್ಥಿತಿ ಸುಧಾರಣೆಯಲ್ಲಿದ್ದು, ಯಾವುದೇ ಪ್ರದೇಶದಲ್ಲಿ ಗ್ಯಾಸ್ ಕೊರತೆ ಉಂಟಾಗದಂತೆ ಸರಬರಾಜು ವ್ಯವಸ್ಥೆಯನ್ನು ಬಲಪಡಿಸಲಾಗಿದೆ ಎಂದು
ಸಚಿವರು ತಿಳಿಸಿದ್ದಾರೆ. ಕೆಲವು ಕಡೆಗಳಲ್ಲಿ ಗ್ಯಾಸ್ ಕೊರತೆ ಬಗ್ಗೆ ದೂರುಗಳು ಬಂದಿದ್ದರೂ, ಅವುಗಳನ್ನು ತಕ್ಷಣ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸಾರ್ವಜನಿಕರು ಅನಗತ್ಯವಾಗಿ ಸಿಲಿಂಡರ್ ಸಂಗ್ರಹಿಸಿಡಬಾರದು, ಅಗತ್ಯವಿದ್ದಾಗ ಮಾತ್ರ ಬುಕ್ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಗ್ರಾಮೀಣ ಪ್ರದೇಶದ ಜನರು ಸೌದೆ ಬಳಸಿ ಅಡುಗೆ ಮಾಡುವುದು ಹೊಸ ವಿಷಯವಲ್ಲ ಎಂದು ಸಚಿವರು ಹೇಳಿದರು. ಹಳ್ಳಿಗಳಲ್ಲಿ ಶತಮಾನಗಳಿಂದಲೂ ಸೌದೆ ಒಲೆ ಬಳಸುವ ಪದ್ಧತಿ ಇದೆ. ಆದ್ದರಿಂದ ಗ್ಯಾಸ್ ಅಭಾವದ ಸಂದರ್ಭಗಳಲ್ಲಿ ಗ್ರಾಮೀಣ ಜನರು ಸೌದೆ ಬಳಸಿ ಅಡುಗೆ ಮಾಡಬಹುದು.
ಬೆಂಗಳೂರು ನಗರದಿಂದ ಸುಮಾರು 40 ಕಿಲೋಮೀಟರ್ ದೂರ ಹೋಗಿದರೆ ಸೌದೆ ಸುಲಭವಾಗಿ ದೊರೆಯುತ್ತದೆ. ಅರಣ್ಯ ಪ್ರದೇಶಗಳಲ್ಲಿ ಹಸಿ ಮರಗಳನ್ನು ಕಡಿದು ಬಳಸಬಾರದು, ಬದಲಾಗಿ ಒಣ ಸೌದೆ ಬಳಸಿ ಅಡುಗೆ ಮಾಡಬೇಕು ಎಂದು ಸಲಹೆ ನೀಡಿದರು.
ಒಟ್ಟಿನಲ್ಲಿ ಯುದ್ಧ ಪರಿಸ್ಥಿತಿ ಹಾಗೂ ಇಂಧನ ಸಂಕಷ್ಟದ ಸಂದರ್ಭದಲ್ಲಿ ಸಾರ್ವಜನಿಕರು ಸರ್ಕಾರದೊಂದಿಗೆ ಸಹಕರಿಸುವುದು ಅತ್ಯಂತ ಮುಖ್ಯವಾಗಿದೆ.
ಗ್ಯಾಸ್ ಬಳಕೆಯನ್ನು ಮಿತಗೊಳಿಸುವುದು, ಪರ್ಯಾಯ ವ್ಯವಸ್ಥೆಗಳಾದ ಎಲೆಕ್ಟ್ರಿಕ್ ಸ್ಟವ್ ಹಾಗೂ ಸೌದೆ ಒಲೆಗಳನ್ನು ಬಳಸುವುದು ಮೂಲಕ ಈ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಬಹುದು ಎಂದು ಸಚಿವ ಮುನಿಯಪ್ಪ ತಿಳಿಸಿದ್ದಾರೆ.
ಸಾರ್ವಜನಿಕರ ಸಹಕಾರದಿಂದ ಗ್ಯಾಸ್ ಸರಬರಾಜು ವ್ಯವಸ್ಥೆಯನ್ನು ಸುಗಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸವನ್ನು ಸರ್ಕಾರ ವ್ಯಕ್ತಪಡಿಸಿದೆ.
ಇದನ್ನು ಓದಿ : https://vijayatimes.com/rbi-introducing-e-cheques/