Visit Channel

ಭಾರತದ ಪಾಲಿಗೆ ಸುವರ್ಣ ಗಳಿಗೆಯಾದ 2022ರ ಕಾಮನ್ ವೆಲ್ತ್ ಗೇಮ್ಸ್ ; ಪದಕ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ ಭಾರತ!

Mirabai Chanu

ಪ್ರತಿಷ್ಠಿತ ಕಾಮನ್ ವೆಲ್ತ್ ಕ್ರೀಡಾಕೂಟ(Commonwealth Games 2022) ಈ ಬಾರಿ ಇಂಗ್ಲೆಂಡ್‌ನ(England) ಬರ್ಮಿಂಗ್ಹ್ಯಾಮ್‌ನಲ್ಲಿ ಜರುಗುತ್ತಿದೆ. ಜುಲೈ 28ರ ಗುರುವಾರದಂದು ಭರ್ಜರಿಯಾಗಿ ಉದ್ಘಾಟನೆಯಾದ ಈ ಕ್ರೀಡಾಕೂಟದ ಸ್ಪರ್ಧೆಗಳು ಹಾಗೂ ಪಂದ್ಯಗಳು ಜುಲೈ 29ರ ಶುಕ್ರವಾರದಿಂದ ಆರಂಭಗೊಂಡಿವೆ. ಕ್ರೀಡಾಕೂಟದ ಮೊದಲ ದಿನ ಭಾರತದ ಹಲವಾರು ಕ್ರೀಡಾಪಟುಗಳು ಗ್ರೂಪ್ ಹಂತದ ಹಣಾಹಣಿಯಲ್ಲಿ ಗೆದ್ದರೂ, ಯಾವುದೇ ಪದಕದ ಬೇಟೆಯಾಡಿರಲಿಲ್ಲ. ಆದರೆ ಎರಡನೇ ದಿನದಂದು ಭಾರತೀಯ ಕ್ರೀಡಾಪಟುಗಳು ಪದಕದ ಬೇಟೆಯನ್ನು ಆರಂಭಿಸಿದ್ದು, ಪದಕ ಪಟ್ಟಿಯಲ್ಲಿ ಖಾತೆಯನ್ನು ತೆರೆದರು.

Mirabhai Chanu


ಹೌದು, 2022ನೇ ಕಾಮನ್ ವೆಲ್ತ್ ಕ್ರೀಡಾಕೂಟವು ಭಾರತದ(India) ಪಾಲಿಗೆ ಸುವರ್ಣ ಗಳಿಗೆ ಎಂದೇ ಹೇಳಬಹುದು. ವೇಟ್ ಲಿಫ್ಟಿಂಗ್ ನಲ್ಲಿ(Weight Lifting) 49 ಕೆಜಿ ಮಹಿಳೆಯರ ವಿಭಾಗದಲ್ಲಿ ಮೀರಾಬಾಯಿ ಚಾನು(Mirabhai Chanu) ಅವರು ಚಿನ್ನದ ಪದಕ(Gold Medal) ಗೆದ್ದಿದ್ದಾರೆ. ಚಿನ್ನದ ಹುಡುಗಿ ಎಂದೇ ಖ್ಯಾತಿಯನ್ನು ಪಡೆದಿರುವ ಮೀರಾಬಾಯಿ ಚಾನು ಈ ಬಾರಿಯ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಮೂಲಕ ಚಿನ್ನದ ಪದಕ ಬೇಟೆಯನ್ನು ಮುಂದುವರೆಸಿದ್ದಾರೆ. 49 ಕೆಜಿ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ 201 ಕೆಜಿ ಎತ್ತುವುದರ ಮೂಲಕ ಮೀರಾಬಾಯಿ ಚಾನು ಫೈನಲ್ ಸ್ಪರ್ಧೆಯಲ್ಲಿ ಜಯ ಸಾಧಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿ ಭಾರತಕ್ಕೆ ಈ ಬಾರಿಯ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟರು.

ನಂತರ, ಜೆರೆಮಿ ಲಾಲ್ರಿನುಂಗ ಅವರು 22ನೇ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ 2ನೇ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. ಪುರುಷರ 67 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ 19 ವರ್ಷದ ಜೆರೆಮಿ ಒಟ್ಟು 300 ಕೆ.ಜಿ. ಭಾರ ಎತ್ತಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಹಾಗೆಯೇ, ಪುರುಷರ 55 ಕೆಜಿ ವೇಟ್ ಲಿಫ್ಟಿಂಗ್ ನಲ್ಲಿ ಸಂಕೇತ್ ಸರ್ಗರ್(Sanketh Sargar) ಅವರು ಬೆಳ್ಳಿ ಪದಕವನ್ನು(Silver Medal) ಗೆದ್ದಿದ್ದಾರೆ. ಅದೇ ರೀತಿ, 61 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ 269 ಕೆಜಿ ಭಾರ ಎತ್ತಿದ ಕನ್ನಡಿಗ ಗುರುರಾಜ್ ಪೂಜಾರಿ(Gururaj Poojary) ಕಂಚಿನ ಪದಕವನ್ನು ಗೆದ್ದರು.

Medal

ಕಳೆದ ಬಾರಿಯ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಗುರುರಾಜ್ ಪೂಜಾರಿ ಈ ಬಾರಿ ಕಂಚಿನ ಪದಕವನ್ನು ಗೆಲ್ಲುವುದರ ಮೂಲಕ ಸತತವಾಗಿ ಎರಡು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಭಾರತದ ಮತ್ತೋರ್ವ ಕ್ರೀಡಾಪಟು ಬಿಂದ್ಯಾರಾಣಿ(Bindya Rani) 55 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಇಂದೂ ಕೂಡ ಭಾರತದ ಪದಕ ಬೇಟೆ ಮುಂದುವರೆದಿದ್ದು, ಭಾರತದ ವೇಟ್ ಲಿಫ್ಟರ್ ಅಚಿಂತಾ ಶೆಯುಲಿ ಅವರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

20 ವರ್ಷದ ಅಚಿಂತಾ ಶೆಯುಲಿ ಅವರು 73 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಮೊದಲ ಬಾರಿಗೆ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಅಚಿಂತಾ, ಒಟ್ಟು 313 ಕೆಜಿ ಭಾರ ಎತ್ತಿ ಚಿನ್ನದ ಹುಡುಗ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಸದ್ಯ 3 ಚಿನ್ನ, 2 ಬೆಳ್ಳಿ, 1 ಕಂಚಿನ ಸಮೇತ ಮುನ್ನುಗ್ಗುತ್ತಿರುವ ಭಾರತ ಪದಕ ಪಟ್ಟಿಯಲ್ಲಿ 6 ನೇ ಸ್ಥಾನದಲ್ಲಿದೆ. ಇಂದಿನ ನಾಲ್ಕನೇ ದಿನದ ಕ್ರೀಡಾಕೂಟದಲ್ಲೂ ಭಾರತೀಯರು ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಟೇಬಲ್ ಟೆನಿಸ್ ಮತ್ತು ಬ್ಯಾಡ್ಮಿಂಟನ್ನ ಸೆಮಿಫೈನಲ್ ಪಂದ್ಯಗಳ ನಡೆಯಲಿದ್ದು, ಮತ್ತಷ್ಟು ಪದಕಗಳು ಭಾರತದ ಮುಡಿಗೇರುವ ನಿರೀಕ್ಷೆಯಿದೆ.

  • ಪವಿತ್ರ

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.