Muniratna used me in Vikasasaudha and government car: Explosive statement of the victim
Bengaluru: ಕಳೆದ ಕೆಲ ದಿನಗಳಿಂದ ತಣ್ಣಗಾಗಿದ್ದ ಮುನಿರತ್ನ ಪ್ರಕರಣ ಇದೀಗ ಮತ್ತೊಮ್ಮೆ ಎಲ್ಲರ ಗಮನ ಸೆಳೆಯುತ್ತಿದೆ. ಬಿಬಿಎಂಪಿ ಗುತ್ತಿಗೆದಾರನಿಗೆ ಬೆದರಿಕೆ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದನೆ ಪ್ರಕರಣದಲ್ಲಿ ಆರ್ಆರ್ ನಗರ ಬಿಜೆಪಿ ಶಾಸಕ ಮುನಿರತ್ನಗೆ (Muniratna) ಷರತ್ತುಬದ್ಧ ಜಾಮೀನು ಮಂಜೂರಾಗಿತ್ತು. ಇದರೆ ಬೆನ್ನಲ್ಲೇ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಮತ್ತೆ ಬಂಧಿಸಿದ್ದರು. ಇನ್ನೂ ಇದೀಗ ಪೊಲೀಸರ ವಿಚಾರಣೆ ವೇಳೆ ಸಂತ್ರಸ್ತ ಮಹಿಳೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮುನಿರತ್ನ ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು ವಿಚಾರಣೆಯಲ್ಲಿ ಕೇವಲ ವಿಧಾನಸೌಧ ಮತ್ತು ವಿಕಾಸಸೌಧ (Vidhanasoudha And Vikasasoudha) ಅಷ್ಟೇ ಅಲ್ಲದೆ, ಸರ್ಕಾರಿ ಕಾರಿನಲ್ಲೂ ಹಾಗೂ ಮತ್ತೀಕೆರೆಯ ಬಳಿಯ ಗೋದಾಮಿ ಕೂಡ ಅತ್ಯಾಚಾರ ಎಸಗಿದ್ದಾರೆ ಎಂದು ಆರ್ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಸಂತ್ರಸ್ತ ಮಹಿಳೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಆದರೆ ಈ ಹೇಳಿಕೆಯನ್ನು ತಳ್ಳಿ ಹಾಕಿರುವ ಶಾಸಕ ಮುನಿರತ್ನ ದೂರುದಾರೆ ನನಗೆ ತುಂಬಾ ಪರಿಚಯ, ಆಕೆಯ ವೃತ್ತಿಯ ಹನಿಟ್ರ್ಯಾಪ್ (Honeytrap) ಮಾಡುವುದಾಗಿದೆ. ನಿಮಗೆ ಯಾರ ವಿಡಿಯೋ ಬೇಕು ಹೇಳಿ, ನಿಮಗೆ ದುಷ್ಮನ್ ಯಾರಿದ್ದಾರೆ ಹೇಳಿ. ಅಂತಹವರ ವಿಡಿಯೋ ಮಾಡಿಕೊಡುತ್ತೇನೆ ಎಂದು ಆಫರ್ ಕೊಟ್ಟಿದ್ದಳು. ಇದಕ್ಕೆ ನಾನು ಒಪ್ಪಿರಲಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಎಸ್ಐಟಿ ಅಧಿಕಾರಿಗಳು (SIT Officers) ಮುನಿರತ್ನ ವಿರುದ್ಧದ ಲಂಚಕ್ಕೆ ಬೇಡಿಕೆ, ಜೀವ ಬೆದರಿಕೆ, ಜಾತಿ ನಿಂದನೆ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವು ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ. ಈ ಪ್ರಕರಣಗಳ ಸಂಬಂಧ ಮುನಿರತ್ನ ಅವರನ್ನು ಪ್ರತ್ಯೇಕ ವಿಚಾರಣೆ ನಡೆಸುತ್ತಿದ್ದಾರೆ.
ಮುನಿರತ್ನ ಅವರು ತಮ್ಮ ಮೊಬೈಲ್ನಿಂದಲೇ ವಿಡಿಯೊ ಕರೆ ಮಾಡಿದ್ದರು ಮತ್ತು ಬೆತ್ತಲಾಗುವಂತೆ ಒತ್ತಾಯಿಸಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದರು. ಹೀಗಾಗಿ, ಪ್ರಕರಣದ ಪ್ರಮುಖ ಸಾಕ್ಷ್ಯಾಧಾರವಾಗಿರುವ ಮುನಿರತ್ನರ ಮೊಬೈಲ್ (Mobile) ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕೋಲಾರದ ಬಳಿ ತಮ್ಮ ಮೊಬೈಲ್ ಕಳೆದು ಹೋಗಿರುವುದಾಗಿ ಮುನಿರತ್ನ ಹೇಳಿದ್ದಾರೆ. ಹೀಗಾಗಿ, ಪೊಲೀಸರು ಅವರ ಮೊಬೈಲ್ನ ಐಎಂಇಐ ನಂಬರ್ ವಿವರ ಆಧರಿಸಿ ಪತ್ತೆ ಕಾರ್ಯ ಮುಂದುವರಿಸಿದ್ದಾರೆ.