Bengaluru, (ಜುಲೈ 25): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Assembly Election) ಕಾಂಗ್ರೆಸ್ (MLAs complained against ministers) ಪಕ್ಷವು ಅಪ್ರತಿಮ ಜಯಭೇರಿ ಬಾರಿಸಿದ್ದು,
135 ಸ್ಥಾನಗಳನ್ನು ಪಡೆದುಕೊಂಡಿದೆ. ಚುನಾವಣಾ ಪ್ರಚಾರದ ವೇಳೆ ನೀಡಿದ ಭರವಸೆಗಳನ್ನು ಯಶಸ್ವಿಯಾಗಿ ಈಡೇರಿಸಿದ್ದೇವೆ ಎಂದು ಪಕ್ಷವೂ ಪ್ರತಿಪಾದಿಸುತ್ತಿದೆ. ಅದೇನೇ ಇದ್ದರೂ,
ಈ ಗೆಲುವಿನ ನಡುವೆ ಕಾಂಗ್ರೆಸ್ ಸರ್ಕಾರದೊಳಗೆ ಅಸಮಾಧಾನ (MLAs complained against ministers) ಹೊರಹೊಮ್ಮಿದೆ.
ತಮ್ಮ ಪಕ್ಷದಲ್ಲೇ ಇರುವ ಸಚಿವ ಹಾಗೂ ಕಾಂಗ್ರೆಸ್ ಶಾಸಕರ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಸಚಿವರ ದುರಹಂಕಾರವನ್ನು ಹೋಗಲಾಡಿಸಬೇಕು ಎಂದು ಒತ್ತಾಯಿಸಿ ಶಾಸಕರು ಮುಖ್ಯಮಂತ್ರಿ
ಸಿದ್ದರಾಮಯ್ಯ (Siddaramaiah) ಅವರಿಗೆ ದೂರು ನೀಡಿದ್ದಾರೆ. ಹೆಚ್ಚುವರಿಯಾಗಿ, ಹಿರಿಯ ಕಾಂಗ್ರೆಸ್ ಶಾಸಕರು ತಕ್ಷಣವೇ ಶಾಸಕಾಂಗ ಸಭೆಯನ್ನು ಕರೆಯುವಂತೆ ಒತ್ತಾಯಿಸಿದ್ದಾರೆ.

ಹಿಂದಿನ ಶಾಸಕಾಂಗ ಸಭೆಯಲ್ಲೇ ಉಂಟಾದ ಅಸಮಾಧಾನ ಇದೀಗ ಕುದಿಯುವ ಹಂತ ತಲುಪಿದೆ. ಶಾಸಕಾಂಗ ಸಭೆಯಲ್ಲೇ ವರ್ಗಾವಣೆ ಹಗರಣದಲ್ಲಿ ಸಚಿವರ ಕೈವಾಡವಿದೆ ಎಂದು ಆರಂಭದಲ್ಲಿ ಅಸಮಾಧಾನ
ವ್ಯಕ್ತಪಡಿಸಿದ್ದ ಶಾಸಕರು ಇದೀಗ ನೇರವಾಗಿ ಮುಖ್ಯಮಂತ್ರಿ ಬಳಿ ದೂರು ಕೊಂಡೊಯ್ದಿದ್ದಾರೆ. ಅವರ ಪ್ರಯತ್ನದ ಹೊರತಾಗಿಯೂ ಸಚಿವರ ವರ್ತನೆ ಬದಲಾಗಿಲ್ಲ. ಬಸವರಾಜ ರಾಯರೆಡ್ಡಿ (Basavaraja Raya Reddy)
ನೇತೃತ್ವದಲ್ಲಿ ಪತ್ರ ಬರೆದು ಶಾಸಕಾಂಗ ಸಭೆಗೆ ಸಲ್ಲಿಸಲಾಗಿದ್ದು, 20ಕ್ಕೂ ಹೆಚ್ಚು ಹಿರಿಯ ಶಾಸಕರು ಅನುಮೋದಿಸಿದ್ದಾರೆ. ಸಚಿವರ ದುರಹಂಕಾರ ಹಾಗೂ ಸಚಿವರು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸದಿರುವ
ಬಗ್ಗೆ ಶಾಸಕರ ಅಸಮಾಧಾನವನ್ನು ಪತ್ರದಲ್ಲಿ ಎತ್ತಿ ತೋರಿಸಲಾಗಿದೆ.
ಶಾಸಕರ ಪತ್ರಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಶಾಸಕರ ಕಳವಳವನ್ನು ಪರಿಹರಿಸಲು ಜುಲೈ 27 ರಂದು ಕಾಂಗ್ರೆಸ್ ಶಾಸಕಾಂಗ ಸಭೆಯನ್ನು (Legislative Assembly)
ನಿಗದಿಪಡಿಸಿದ್ದಾರೆ. ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ್ (Mallikarjun Kharge) ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಮತ್ತು ಸಿಎಲ್ಪಿ(CLP)
ನಾಯಕ ಸಿದ್ದರಾಮಯ್ಯ ಅವರು ಸಿಎಲ್ಪಿ ಸಭೆ ಕರೆಯಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಸಚಿವರ ವಿರುದ್ದ ಕೇವಲ ಶಾಸಕರ ಮಾತ್ರವೇ ಅಲ್ಲದೆ ಎಂಎಲ್ಸಿಗಳು(MLC) ಸಹ ಅಸಮಾಧನಗೊಂಡಿದ್ದಾರೆ, ಇದರಿಂದ ವಿಧಾನ ಪರಿಷತ್ ಸದಸ್ಯರು ಶಾಸಕರ ಜೊತೆ ಜೋಡಿಸಿದ್ದಾರೆ. ಶಾಸಕರಿಗೆ ಮತ್ತು ವಿಧಾನಪರಿಷತ್
ಸದಸ್ಯರಿಗೆ ಸಚಿವರು ಸಹಕಾರ ಕೊಡುತ್ತಿಲ್ಲ. ಅಭಿವೃದ್ಧಿ ಯೋಜನೆಗಳಿಗೆ ಹಣ ಲಭ್ಯವಿಲ್ಲ ಎಂದು ಹೇಳಿಕೊಂಡು ಸಚಿವರು, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರಿಬ್ಬರಿಗೂ ಸಹಕಾರ ನೀಡಲು ನಿರಾಕರಿಸುತ್ತಿದ್ದಾರೆ.
ಇದನ್ನೂ ಓದಿ : ಶಾಲಾ- ಕಾಲೇಜು ವಾಹನಗಳ ಟ್ಯಾಕ್ಸ್ ಏರಿಕೆ: ಕ್ಯಾಬ್ಗಳಿಗೆ ಜೀವಿತಾವಧಿ ಮೋಟಾರು ವಾಹನ ತೆರಿಗೆ
ಅಲ್ಲದೇ ಬಿಜೆಪಿಗೆ ಅನುಕೂಲವಾಗುವ ಅಧಿಕಾರಿಗಳ ನಿಯೋಜನೆಯನ್ನು ನಮ್ಮ ಕ್ಷೇತ್ರದಲ್ಲಿ ಮಾಡಲಾಗಿದೆ. ಪಕ್ಷ ಅಧಿಕಾರ ಬರುವಾಗ ಇವರು ಯಾರು ಇರಲಿಲ್ಲ ಎಂದು ಆರೋಪಿಸಿದ್ದಾರೆ. ಶಾಸಕರು ಮತ್ತು ವಿಧಾನ ಪರಿಷತ್
ಸದಸ್ಯರು ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು ಶಾಸಕಾಂಗ ಸಭೆ ಕರೆದಿದ್ದಾರೆ. ಇಂಡಿಯಾ ಮೀಟಿಂಗ್(India Meeting) ದಿನವೇ ಈ ಸಭೆಯು ಗುರುವಾರ ನಡೆಯಲಿದೆ.
ರಶ್ಮಿತಾ ಅನೀಶ್