ಬೆಂಗಳೂರು ನ 9 : ರಾಜ್ಯದ ವಿಧಾನಪರಿಷತ್ನ 25 ಸ್ಥಾನಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ. ಎಂದು ಚುನಾವಣಾ ಆಯೋಗ ತಿಳಿಸಿದೆ.
ಈ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಿದ್ದು, ಸ್ಥಳೀಯ ಸಂಸ್ಥೆಗಳಿಂದ ಕರ್ನಾಟಕ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದ 25 ವಿಧಾನ ಪರಿಷತ್ ಸದಸ್ಯರ ಅವಧಿ ಮುಂದಿನ ಜನವರಿಗೆ ಅಂತ್ಯವಾಗಲಿದ್ದು, ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ.
ಬೀದರ್ 01, ಕಲಬುರಗಿ 01, ಬಿಜಾಪುರ 02, ಬೆಳಗಾವಿ 02, ಉತ್ತರ ಕನ್ನಡ 01, ಧಾರವಾಡ 02, ರಾಯಚೂರು 01, ಬಳ್ಳಾರಿ 01, ಚಿತ್ರದುರ್ಗ 01, ಶಿವಮೊಗ್ಗ 01, ದಕ್ಷಿಣ ಕನ್ನಡ 02, ಚಿಕ್ಕಮಗಳೂರು 01, ಹಾಸನ 01, ತುಮಕೂರು 01, ಮಂಡ್ಯ 01, ಬೆಂಗಳೂರು 01, ಬೆಂಗಳೂರು ಗ್ರಾಮಾಂತರ 01, ಕೋಲಾರ 01, ಕೊಡಗು 01, ಮೈಸೂರು 02 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಎಂದು ಚುನಾವಣಾ ಆಯೋಗ ತಿಳಿಸಿದೆ.