New Delhi : ಭಾರತದ ಪ್ರಧಾನಿಯಾಗಿ ತಮ್ಮ ಒಂಭತ್ತು ವರ್ಷಗಳ ಅಧಿಕಾರಾವಧಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು (Modi attended 3000 program) ಇಲ್ಲಿಯವರೆಗೆ ಒಂದು

ದಿನವೂ ರಜೆ ತೆಗೆದುಕೊಂಡಿಲ್ಲ ಎಂದು ಮಾಹಿತಿ ಹಕ್ಕು (ಆರ್‌ಟಿಐ) ಪ್ರಶ್ನೆಗೆ ಪ್ರಧಾನಿ ಕಚೇರಿ (ಪಿಎಂಒ) ಅಧಿಕೃತ ಉತ್ತರ ನೀಡಿದೆ.
ಪುಣೆ ಮೂಲದ ವಾಣಿಜ್ಯೋದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಫುಲ್ ಪಿ ಸರ್ದಾ (Praful P Sarda) ಸಲ್ಲಿಸಿದ ಆರ್ಟಿಐ ಅರ್ಜಿಯಲ್ಲಿ ಎರಡು ಪ್ರಶ್ನೆಗಳನ್ನು ಕೇಳಲಾಗಿದೆ. 2014 ರಲ್ಲಿ ಭಾರತದ
ಪ್ರಧಾನಿಯಾದ ನಂತರ ಪಿಎಂ ಮೋದಿ ಅವರು ಎಷ್ಟು ದಿನ ಕಚೇರಿಗೆ ಹಾಜರಾಗಿದ್ದರು ಎಂಬ ಮೊದಲ ಪ್ರಶ್ನೆಗೆ ಉತ್ತರಿಸಿರುವ ಪಿಎಂಒ ಕಚೇರಿ “ಪ್ರಧಾನಿ ಸದಾ ಕರ್ತವ್ಯದಲ್ಲಿರುತ್ತಾರೆ. ಪ್ರಧಾನಿ ನರೇಂದ್ರ
ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರ ಯಾವುದೇ ರಜೆಯನ್ನು (Modi attended 3000 program) ಪಡೆದಿಲ್ಲ”ಎಂದು ಹೇಳಿದೆ.
ಸನಾತನ ಧರ್ಮ ಹೇಳಿಕೆ : ಪ್ರಿಯಾಂಕ್ ಖರ್ಗೆ – ಬಿ.ಎಲ್.ಸಂತೋಷ್ ನಡುವೆ ಟ್ವೀಟ್ ಸಮರ
ಎರಡನೇ ಪ್ರಶ್ನೆಯಲ್ಲಿ, ಪ್ರಫುಲ್ ಪಿ ಸರ್ದಾ ಅವರು “ಭಾರತದ ಪ್ರಧಾನಮಂತ್ರಿಯಾದ ನಂತರ ಇಲ್ಲಿಯವರೆಗೆ ನರೇಂದ್ರ ಮೋದಿಯವರು (Nagendra Modi) ಎಷ್ಟು ಕಾರ್ಯಕ್ರಮಗಳು ಮತ್ತು
ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ ಎಂಬ ವಿವರಗಳನ್ನು ಕೇಳಿದ್ದರು. ಇದಕ್ಕೆ ಉತ್ತರಿಸಿರುವ ಪಿಎಂಒ ಕಚೇರಿ “ಮೇ 2014 ರಲ್ಲಿ ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ
ನರೇಂದ್ರ ಮೋದಿ ಅವರು ಭಾಗಿಯಾಗಿರುವ ಕಾರ್ಯಕ್ರಮ ಮತ್ತು ಸಮಾರಂಭಗಳ ಸಂಖ್ಯೆ 3000ಕ್ಕೂ (ಭಾರತ ಮತ್ತು ವಿದೇಶ ಸೇರಿದಂತೆ) ಮೀರಿದೆ ಎಂದು ಹೇಳಿದೆ.

ಪ್ರಫುಲ್ ಪಿ ಸರ್ದಾ ಅವರು ಸಲ್ಲಿಸಿರುವ RTI ಯ ಅರ್ಜಿ ಮತ್ತು PMO ಯಿಂದ ಪಡೆದ ಈ ಉತ್ತರಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು
ಟ್ವೀಟರ್ನಲ್ಲಿ RTI ನ ಪ್ರತಿಯನ್ನು ಹಂಚಿಕೊಂಡು, #MyPmMyPride ಎಂದು ಹೇಳಿದ್ದಾರೆ.
ಇನ್ನು ಇತ್ತೀಚೆಗಷ್ಟೇ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಕೂಡ ಪ್ರಧಾನಿ ಮೋದಿ ಹೇಗೆ ಕೆಲಸ ಮಾಡುತ್ತಾರೆ ಎಂಬುದರ ಬಗ್ಗೆ ಬೆಳಕು ಚೆಲ್ಲಿದ್ದರು. ಬ್ಯಾಂಕಾಕ್ನಲ್ಲಿ ಭಾರತೀಯ
ಸಮುದಾಯದೊಂದಿಗಿನಸಂವಾದದ ಸಂದರ್ಭದಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವರು, “ಈ ಸಮಯದಲ್ಲಿ ಮೋದಿಯಂತಹ ವ್ಯಕ್ತಿಯನ್ನು ಪ್ರಧಾನಿಯಾಗಿ ಹೊಂದಿರುವುದು ದೇಶದ ಅಗಾಧ
ಅದೃಷ್ಟ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದರು.