- ವಿಶ್ವಸಂಸ್ಥೆ ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಅಪ್ರಸ್ತುತ (Modi expressed deep dissatisfaction)
- ಕಾನೂನು, ನಿಯಮ ಪಾಲಿಸದವರೇ ಜಗತ್ತಿನ ದುಸ್ಥಿತಿಗೆ ಕಾರಣ
- ಅಂತರರಾಷ್ಟ್ರೀಯ ಸಂಸ್ಥೆಗಳು ಯಾವುದೇ ಸುಧಾರಣೆಗೆ ಅವಕಾಶ ಉಳಿದಿಲ್ಲ
New delhi: ಅಮೆರಿಕದ ಪಾಡ್ಕ್ಯಾಸ್ಟರ್ (Podcaster) ಮತ್ತು ಕಂಪ್ಯೂಟರ್ ವಿಜ್ಞಾನಿ ಲೆಕ್ಸ್ ಫ್ರಿಡ್ಮನ್ (Lex Friedman) ಅವರೊಂದಿಗಿನ ಸಂವಾದದಲ್ಲಿ, ಜಾಗತಿಕ ಉಪಕ್ರಮಗಳನ್ನು ಮುಂದಕ್ಕೆ ಕರೆದೊಯ್ಯಲು ಸಿಂಕ್ರೊನೈಸೇಶನ್ (Synchronization) ಮತ್ತು ಸಹಯೋಗದ ಅಗತ್ಯವನ್ನು ಮೋದಿ ಒತ್ತಿ ಹೇಳಿದ್ದರು.
ವಿಶ್ವಸಂಸ್ಥೆಯಂತಹ (United Nations) ಜಾಗತಿಕ ಸಂಸ್ಥೆಗಳ ಪ್ರಸ್ತುತತೆಯನ್ನು ಉಲ್ಲೇಖಿಸಿದ ಪ್ರಧಾನಿ (Prime Minister), ಕಾಲಕ್ಕೆ ತಕ್ಕಂತೆ ವಿಕಸನಗೊಳ್ಳಲು ಅವುಗಳ ಪ್ರಸ್ತುತತೆಯ ಕುರಿತು ಜಾಗತಿಕ ಚರ್ಚೆಯನ್ನು ಹುಟ್ಟುಹಾಕಿದೆ ಎಂದಿದ್ದಾರೆ.
ವಿಶ್ವಸಂಸ್ಥೆಯ ಕ್ಷೀಣಿಸಿರುವ ಸಾಮರ್ಥ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಜಾಗತಿಕ ಸಂಘರ್ಷಗಳು, ಮಧ್ಯಪ್ರಾಚ್ಯ ಯುದ್ಧಗಳು ಮತ್ತು ಚೀನಾ – ಅಮೆರಿಕದ (China – America) ಉದ್ವಿಗ್ನತೆಗಳನ್ನು ಉಲ್ಲೇಖಿಸಿ – ವಿಶ್ವಸಂಸ್ಥೆ ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳನ್ನು (International organizations) ಅಪ್ರಸ್ತುತ ಎಂದು ಮೋದಿ ಟೀಕಿಸಿದ್ದಾರೆ.
ಪ್ರಧಾನಿ ಮೋದಿಯವರ (Prime Minister Modi) ಪ್ರಕಾರ, ಈ ಸಂಸ್ಥೆಗಳಲ್ಲಿ ಯಾವುದೇ ಸುಧಾರಣೆಗೆ ಅವಕಾಶ ಉಳಿದಿಲ್ಲವಾದ್ದರಿಂದ ಅವು ಬಹುತೇಕ ಅಪ್ರಸ್ತುತವಾಗಿವೆ.ಅಂತರರಾಷ್ಟ್ರೀಯ ಸಂಸ್ಥೆಗಳು ಬಹುತೇಕ ಅಪ್ರಸ್ತುತವಾಗಿವೆ, ಅವುಗಳಲ್ಲಿ ಯಾವುದೇ ಸುಧಾರಣೆ ಇಲ್ಲ.

ವಿಶ್ವಸಂಸ್ಥೆಯಂತಹ ಸಂಸ್ಥೆಗಳು ತಮ್ಮ ಪಾತ್ರವನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಕಾನೂನುಗಳು (Laws) ಮತ್ತು ನಿಯಮಗಳ ಬಗ್ಗೆ ಕಾಳಜಿ ವಹಿಸದ ಜಗತ್ತಿನಲ್ಲಿ ಜನರು ಎಲ್ಲವನ್ನೂ ಮಾಡುತ್ತಿದ್ದಾರೆ. ಆದರೆ ಇಂತಹವರನ್ನು ಯಾವ ಅಂತಾರಾಷ್ಟ್ರೀಯ ಸಂಸ್ಥೆಗಳಿಗೂ ತಡೆಯಲು ಸಾಧ್ಯವಾಗುತ್ತಿಲ್ಲಎಂದು ಪ್ರಧಾನಿ ಹೇಳಿದ್ದಾರೆ.
ಪ್ರತಿಯೊಂದು ರಾಷ್ಟ್ರದ ದುರ್ಬಲತೆಗಳನ್ನು (Nation’s weaknesses) ಬಹಿರಂಗಪಡಿಸಿದ ಕೋವಿಡ್ -19 ಸಾಂಕ್ರಾಮಿಕ ರೋಗ (Infectious disease) ಕಲಿಸಿದ ಪಾಠಗಳನ್ನು ಪ್ರಧಾನಿ ಉಲ್ಲೇಖಿಸಿದರು ಮತ್ತು ಉಲ್ಬಣಗೊಳ್ಳುತ್ತಿರುವ ಜಾಗತಿಕ ಉದ್ವಿಗ್ನತೆಗಳ (Global tensions) ನಡುವೆ ಏಕತೆಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ಇದನ್ನೂ ಓದಿ: ಅಡುಗೆ ಎಣ್ಣೆ ಬಳಕೆ ಶೇ.10 ರಷ್ಟು ಕಡಿಮೆ ಮಾಡಿ :ಮನದ ಮಾತು ರೇಡಿಯೋ ಕಾರ್ಯಕ್ರಮದಲ್ಲಿ ಮೋದಿ ಕರೆ
ದೇಶಕ್ಕೆ ಗ್ರಹಣ ಕವಿದಂತೆ ವಕ್ಕರಿಸಿದ್ದ ಕೋವಿಡ್ -19 (Covid-19) ನಮ್ಮೆಲ್ಲರ ಮಿತಿಗಳನ್ನು ಬಹಿರಂಗಪಡಿಸಿದೆ. ನಾವು ನಮ್ಮನ್ನು ನಾವು ಶ್ರೇಷ್ಠ ರಾಷ್ಟ್ರವೆಂದು (great nation) ಎಷ್ಟೇ ಪರಿಗಣಿಸಿದರೂ, ಬಹಳ ಪ್ರಗತಿಪರರು, ವೈಜ್ಞಾನಿಕವಾಗಿ ಬಹಳ ಮುಂದುವರಿದವರು, ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಏನೇ ಇರಲಿ, ಆದರೆ ಕೋವಿಡ್ -19 ರ ಕಾಲದಲ್ಲಿ, ನಾವೆಲ್ಲರೂ ಭೂಮಿಗೆ ಕುಸಿದಿದ್ದೆವು.
ಪ್ರಪಂಚದ ಪ್ರತಿಯೊಂದು ದೇಶವೂ ಸಂಕಷ್ಟದಲ್ಲಿ ಸಿಲುಕಿತ್ತು.ನಂತರ ಜಗತ್ತು ಅದರಿಂದ ಏನನ್ನಾದರೂ ಕಲಿಯುತ್ತದೆ ಮತ್ತು ನಾವು ಹೊಸ ವಿಶ್ವ ಕ್ರಮದತ್ತ ಸಾಗುತ್ತೇವೆ ಎಂಬ ನಿರೀಕ್ಷೆ ಇತ್ತು.
ಆದರೆ ದುರದೃಷ್ಟವಶಾತ್, ಪರಿಸ್ಥಿತಿ ಏನಾಯಿತು ಎಂದರೆ ಶಾಂತಿಯತ್ತ ಸಾಗುವ ಬದಲು, (Modi expressed deep dissatisfaction) ಜಗತ್ತು ವಿಭಜನೆಯಾಯಿತು, ಅನಿಶ್ಚಿತತೆಯ ಅವಧಿ ಬಂದಿತು ಮತ್ತು ಯುದ್ಧವು ಜಗತ್ತನ್ನು ಹೆಚ್ಚು ತೊಂದರೆಗೆ ಸಿಲುಕಿಸಿತು,ಎಂದು ಪ್ರಧಾನಿ ಮೋದಿ ಫ್ರಿಡ್ಮನ್ ನೊಂದಿಗಿನ ಪಾಡ್ಕ್ಯಾಸ್ಟ್ನಲ್ಲಿ (Podcast) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.