ದೇಶದ ಪ್ರತಿಯೊಬ್ಬರ ಫೋನ್ ಗೂ ಮೋದಿ ಪೆಗಾಸಸ್ ಹಾಕಿದ್ದಾರೆ: ರಾಹುಲ್ ಗಾಂಧಿ

ನವದೆಹಲಿ, ಆ. 08: ವಿರೋಧ ಪಕ್ಷದ ನಾಯಕರುಗಳ ಜೊತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟಿಸುತ್ತಿರುವ ರೈತರನ್ನು ಭೇಟಿಯಾಗಲು ತೆರಳಿದರು. ಅವರ ಜೊತೆ ಮಲ್ಲಿಕಾರ್ಜುನ ಖರ್ಗೆ, ಶಿವಸೇನೆಯ ಸಂಜಯ್ ರಾವತ್, ಡಿ ಎಂ ಕೆಯ ಟಿ ಸಿವ, ಇನ್ನಿತರರೂ ಭಾಗಿಯಾದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್, “ಕೇಂದ್ರದ ಉದ್ದೇಶ ಕಾಲೇಜು ಯುನಿವರ್ಸಿಟಿಗಳಲ್ಲಿ ವಿದ್ಯಾರ್ಥಿಗಳ ದನಿಯನ್ನು ಹತ್ತಿಕ್ಕುವುದು, ದೇಶದ ದನಿಯನ್ನು ಹತ್ತಿಕ್ಕುವುದು. ಯುವಕರು ದನಿಯೆತ್ತಿದಾಗ ನರೇಂದ್ರ ಮೋದಿ ಸರಕಾರ ಹೆಚ್ಚು ಕಾಲ ಬಾಳಲು ಸಾಧ್ಯವಿಲ್ಲ. ಪೆಗಾಸಸ್ ನಂತಹ ಚಿಕ್ಕ ವಿಚಾರಕ್ಕೆ ಯಾಕೆ ಕಾಂಗ್ರೆಸ್ ಇಷ್ಟೊಂದು ಮಾತನಾಡುತ್ತಿದೆಯೆಂದು ಕೆಲವರು ಪ್ರಶ್ನಿಸಿದರು. ಆದರೆ ಇದು ಮಾಮೂಲಿ ವಿಚಾರವಲ್ಲ, ಮೋದಿ ಎಲ್ಲರ ಫೋನ್ ನಲ್ಲೂ ಪೆಗಾಸಸ್ ಬಿಟ್ಟಿದ್ದಾರೆ. ಇದು ನಮ್ಮೆಲ್ಲರ ಮಾತುಗಳನ್ನು ದಮನಿಸುವ ಪ್ರಯತ್ನ. ಕೇವಲ ತಮ್ಮ ಬೆರಳೆಣಿಕೆಯ ಉದ್ಯಮಿ ಮಿತ್ರರನ್ನು ಸಂತೈಸಲು, ಕೇಂದ್ರ ಚಿಕ್ಕ ವ್ಯಾಪಾರಿಗಳು, ಯುವಕರು ಮತ್ತು ರೈತರ ಕೈಬಿಟ್ಟಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು

Latest News

ಪ್ರಮುಖ ಸುದ್ದಿ

ತಾಜುದ್ದೀನ್ಜುನೈದೀ ಮತ್ತು  ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಗಣ್ಯರ ಸಂತಾಪ

ಪ್ರಖ್ಯಾತ ಗಾಯಕರು, ತಮ್ಮ ಸುಸ್ವರದ ಮೂಲಕ ಕವಿ ಗೀತೆಗಳಿಗೆ ಮೆರುಗು ತಂದುಕೊಟ್ಟಿದ್ದ ಶ್ರೀ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಗಿದೆ.

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.