- ಸುಂಕ ವಿವಾದ ಬಗೆಹರಿಯುವವರೆಗೆ ಭಾರದೊಂದಿಗೆ ವ್ಯಾಪಾರ ಚರ್ಚೆ ಬಂದ್ (Modi hits back at Trump)
- ಭಾರತೀಯ ಆಮದುಗಳ ಮೇಲೆ ಸುಂಕ ವಿದಿಸಿದ ಬೆನ್ನಲ್ಲೇ ಟ್ರಂಪ್ ಮತೊಂದು ವಿವಾದ
- ಶ್ವೇತಭವನದ ಓವಲ್ ಕಚೇರಿಯಲ್ಲಿ ಪ್ರತಿನಿದಿಗಳು ಕೇಳಿದ ಪ್ರಶ್ನೆಗಳಿಗೆ ಟ್ರಂಪ್ ಉತ್ತರ
Washington: ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದ ಸರಕುಗಳ ಮೇಲೆ ಶೇಕಡ 50ರಷ್ಟು ಸುಂಕ ಹೆಚ್ಚಳ ಮಾಡಿದ ನಂತರ,
ಶ್ವೇತಭವನದ ಓವಲ್ ಕಚೇರಿಯಲ್ಲಿ(Oval Office) ಸುದ್ದಿಸಂಸ್ಥೆಯ ಪ್ರತಿನಿದಿಗಳು ಕೇಳಿದ ಪ್ರಶ್ನೆಗೆ ಭಾರತದೊಂದಿಗೆ ವ್ಯಾಪಾರ ಚರ್ಚೆ ಬಗೆಹರಿಯುವವರೆಗೆ ಯಾವುದೇ ಚರ್ಚೆ ನಡೆಯದು,
ವಿವಾದ ಬಗೆಹರಿಸಿಕೊಂಡ ನಂತರವೇ ಚರ್ಚೆ ನಡೆಯಲಿದೆ ಎಂದು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ರಷ್ಯಾದಿಂದ ತೈಲ ರಫ್ತು ಮಾಡಿಕೊಳ್ಳುವ ವಿಚಾರವಾಗಿ ಅಮೆರಿಕವು ಭಾರತದ ಸರಕುಗಳ ಮೇಲೆ ಹೆಚ್ಚುವರಿ ತೆರಿಗೆ ದಾಳಿಗೆ ಮುಂದಾಗಿದ್ದು ಮಾತ್ರವಲ್ಲದೆ ಅದನ್ನು ಸಮರ್ಥಿಸಿಕೊಡಿರುವ ಅಮೆರಿಕಾ(America) ,
ಈ ನಿರ್ಧಾರದ ಹಿಂದೆ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಯ ಕಾಳಜಿ ಇದೆ ಅದರಲ್ಲೂ ನಿರ್ದಿಷ್ಟವಾಗಿ ಭಾರತ ನಿರಂತರವಾಗಿ ರಷ್ಯಾದ ತೈಲ ಆಮದು ಮಾಡಿಕೊಳ್ಳುವುದರಿಂದ ಈ ಕ್ರಮ ಕೈಗೊಂಡಿದೆ ಎಂದು ಹೇಳಿದ್ದರು.
ಅಮೆರಿಕಾದ ಈ ನಡೆಗೆ ಪ್ರದಾನಿ ನರೆಂದ್ರ ಮೋದಿ(PM Modi) ಭರ್ಜರಿ ತಿರುಗೇಟು ನೀಡಿದ್ದಾರೆ, ಟ್ರಂಪ್(Trump) ಹೇಳಿಕೆಗೆ ವ್ಯಾಪಾರ ಅಥವಾ ಆರ್ಥಿಕ ಒತ್ತಡಕ್ಕೆ ಭಾರತ(India) ಯಾವುದೇ ಕಾರಣಕ್ಕೂ ತಲೆ ಬಾಗುವುದಿಲ್ಲವೆಂದು ದಿಟ್ಟ ಸಂದೇಶ ನೀಡಿದ್ದಾರೆ.
ನವದೆಹಲಿಯ ಎಂ ಎಸ್ ಸ್ವಾಮಿನಾಥನ್(M. S. Swaminathan) ಶತಮಾನೋತ್ಸವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಷಣ ಮಾಡುವಾಗ ಪ್ರದಾನಿ ನರೇದ್ರ ಮೋದಿ ದಿಟ್ಟವಾಗಿ ಟ್ರಂಪ್ ಗೆ ಉತ್ತರಿಸಿದರು,
ಆರ್ಥಿಕ ಒತ್ತಡದ ನಡುವೆಯೂ ನಾವು ನಮ್ಮ ಹಿತಾಸಕ್ತಿಯಿಂದ ಹಿಂದೆ ಸರಿಯುವುದಿಲ್ಲ ಹಾಗು ನಮಗೆ ನಮ್ಮ ರೈತರ(Farmer) ಹಿತಾಸಕ್ತಿಗೆ ಪ್ರಮುಖ ಆದ್ಯತೆ ನೀಡುತ್ತೇವೆ,
ಭಾರತವು ರೈತರು , ಮೀನುಗಾರರು, ಮತ್ತು ಹೈನುಗಾಗರ ಹಿತಾಸಕ್ತಿಗಳಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ, ಇದಕ್ಕಾಗಿ ನಾವು ಭಾರಿ ಬೆಲೆ ತೆರಬೇಕಾಗುವುದು ಎಂದು ನಮಗೆ ತಿಳಿದಿದೆ ಅದಕ್ಕೆ ನಾನು ಮತ್ತು ಭಾರತ ಕೂಡ ಸಿದ್ದವಾಗಿದ್ದೇವೆ ಎಂದು ಸಿಡಿದರು.
ಕೃಷಿ ಮತ್ತು ಹೈನುಗಾರಿಕೆಯಂತಹ ಸೂಕ್ಷ್ಮ ವಲಯಗಳನ್ನು ಅಂತರಾಷ್ಟ್ರೀಯ ಸ್ಪರ್ದೆಗೆ(International competition) ಒಡ್ಡುವುದನ್ನು ಭಾರತ ಮೊದಲಿನಿಂದಲೂ ನಿರಂತರವಾಗಿ ವಿರೋದಿಸುತ್ತಾ ಬಂದಿದೆ.
ಇದಕ್ಕೆ ಕಾರಣವನ್ನೂ ನೀಡಿರುವ ಭಾರತ . ಇದು ಲಕ್ಷಾಂತರ ಗ್ರಾಮೀಣ ಜೀವನೋಪಾಯದ ಮೇಲೆ ಪರಿಣಾಮವನ್ನು ಬೀರುತ್ತದೆ,
ಇದನ್ನು ಓದಿ : ಭಾರತದ ಆರ್ಥಿಕತೆ ಬಗ್ಗೆ ಟ್ರಂಪ್ ಹೇಳಿಕೆ: ಭಾರತ ಸತ್ತಿಲ್ಲ, ಬೆಳೆಯುತ್ತಿದೆ ಎಂದು ಎಚ್.ಡಿ. ದೇವೇಗೌಡ ಕಿಡಿ
ಇನ್ನು ಉಭಯ ದೇಶಗಳು ತಮ್ಮ ಆರ್ಥಿಕ ನೀತಿ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳ ಬಗ್ಗೆ ತೀರಾ ತಲೆಕೆಡಿಸಿಕೊಳ್ಳುತ್ತಿರುವುದರಿಂದ ಈ ಬಿಕ್ಕಟ್ಟು ಎರಡೂ ದೇಶಗಳ ನಡುವಿನ ವ್ಯಾಪಾರ ಉದ್ವಗ್ನತೆಯಲ್ಲಿ ತೀವ್ರ ಏರಿಕೆಯನ್ನು ಕಾಣಬಹುದು ಆದ್ದರಿಂದ ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ ಎಂದು ಹೇಳಿದರು. (Modi hits back at Trump)