Bengaluru : ಟೆಕ್ ಹಬ್ ಆಗಿರುವ ಕರ್ನಾಟಕದಲ್ಲಿ ಏರ್‌ಶೋ(Air Show) ನಡೆಯುತ್ತಿರುವುದು ಇಲ್ಲಿನ ಯುವ ಸಮುದಾಯಕ್ಕೆ ಹೊಸ ಅವಕಾಶಗಳನ್ನು (Modi inauguration the airshow) ತೆರೆಯುತ್ತದೆ.
ಯುವ ಸಮುದಾಯ ತಮ್ಮ ತಾಂತ್ರಿಕ ಜ್ಞಾನಕೌಶಲ್ಯಗಳನ್ನು ರಕ್ಷಣಾ ವಲಯಕ್ಕಾಗಿ ಸದ್ವಿನಿಯೋಗಪಡಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಯುವ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಬೆಂಗಳೂರು ಏರ್‌ಶೋ(Bengaluru Air show) ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಇದು ಕೇವಲ ಒಂದು ಪ್ರದರ್ಶನವಾಗಿತ್ತು.
ಆದರೆ ಕಳೆದ ಕೆಲವು ವರ್ಷಗಳಿಂದ ಈ ದೃಷ್ಟಿಕೋನ ಬದಲಾಗಿದೆ. ಇಂದು ಇದು ಕೇವಲ ವೈಮಾನಿಕ ಪ್ರದರ್ಶನವಲ್ಲ, ನಮ್ಮ ರಕ್ಷಣಾ ವಲಯದ ಶಕ್ತಿಯೂ ಹೌದು,
ಶಕ್ತಿ ಪ್ರದರ್ಶನವೂ ಹೌದು ಮತ್ತು ಆತ್ಮಸ್ಥೈರ್ಯದ ವಿಷಯವೂ ಹೌದು. ಪ್ರತ್ಯಕ್ಷ ಕಾಣುವುದನ್ನು ಪ್ರಮಾಣೀಕರಿಸಬೇಕಿಲ್ಲ. ಭಾರತದ ಅಭಿವೃದ್ಧಿಗೆ ರಕ್ಷಣಾ ವಲಯದಲ್ಲಿನ ನಮ್ಮ ಸಾಧನೆಯೇ ಪ್ರತ್ಯಕ್ಷ ಸಾಕ್ಷಿ.

ತೇಜಸ್(Tejas) ಯುದ್ಧವಿಮಾನ ಹಾಗೂ ಐಎನ್‌ಎಸ್ ವಿಕ್ರಾಂತ್ ನೌಕೆ ಮೇಕ್ ಇನ್ ಇಂಡಿಯಾ ಯೋಜನೆಯ ಯಶಸ್ಸಿಗೆ ಪ್ರಮಾಣೀಕೃತ ಸಾಕ್ಷಿ. ನಾವು ಎಲ್ಲಾ ಕ್ಷೇತ್ರಗಳಲ್ಲೂ (Modi inauguration the airshow) ಕ್ರಾಂತಿ ಮಾಡುತ್ತಿದ್ದೇವೆ.
ಈ ಹಿಂದೆ ನಮ್ಮ ದೇಶ ಯುದ್ಧೋಪಕರಣ ಆಮದುದಾರನಾಗಿತ್ತು. ಕಳೆದ 8-9 ವರ್ಷಗಳಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಈಗ ನಾವು 75 ದೇಶಗಳಿಗೆ ರಕ್ಷಣಾ ಸಾಮಗ್ರಿ ರಫ್ತು ಮಾಡುತ್ತಿದ್ದೇವೆ ಎಂದರು.
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿನಲ್ಲಿ ಏರೋ ಇಂಡಿಯಾ 2023(Aero India 2023) ಕ್ಕೆ ಚಾಲನೆ ನೀಡಿ, ಇದರ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದರು.
ಇದನ್ನೂ ಓದಿ: ಕಳ್ಳತನವಾದ ಕಾರನ್ನು ಕೇವಲ 2 ಗಂಟೆಗಳಲ್ಲಿ ಹುಡುಕಿಕೊಟ್ಟ ಆಪಲ್ ಏರ್‌ಟ್ಯಾಗ್!
ಈ ಸಂದರ್ಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ(Basavaraj Bommai), ಕೇಂದ್ರ ರಕ್ಷಣಾ ಸಚಿವರಾದ ಶ್ರೀ ರಾಜನಾಥ್‌ಸಿಂಗ್, ಕರ್ನಾಟಕದ ರಾಜ್ಯಪಾಲರು, ಕೇಂದ್ರ ಸಚಿವರು ಉಪಸ್ಥಿತರಿದ್ದರು.
ಬೆಂಗಳೂರು ಏರ್‌ಶೋ ಉದ್ಘಾಟನೆಗೂ ಮುನ್ನ ಪ್ರಧಾನಿ ಮೋದಿ ಅವರು, ಕನ್ನಡ ಚಿತ್ರರಂಗದ ನಟರಾದ ಯಶ್(Yash),
ರಿಷಬ್‌ಶೆಟ್ಟಿ(Rishab Shetty) ಮತ್ತು ನಿರ್ಮಾಪಕಿ ಅಶ್ವಿನಿ ಪುನೀತ್‌ರಾಜಕುಮಾರ್(Ashwini Punith Rajkumar) ಅವರೊಂದಿಗೆ, ನವ ಭಾರತ ಮತ್ತು ಕರ್ನಾಟಕದ ಪ್ರಗತಿಗೆ ಅವರು ನೀಡಬಹುದಾದ ಕೊಡುಗೆಗಳ ಕುರಿತು ಚರ್ಚಿಸಿದರು.