New Delhi: ದೇಶದೆಲ್ಲೆಡೆ ಇಂಡಿಯಾ ಬದಲಿಗೆ ಭಾರತ್ (Bharath) ಎಂಬ ಮರು ನಾಮಕರಣದ ಚರ್ಚೆ ಜೋರಾಗಿದ್ದು, ಇದರ ಬೆನ್ನಲ್ಲಿಯೇ ದಿಲ್ಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ
ಪ್ರಧಾನಿ ನರೇಂದ್ರ ಮೋದಿಯವರ (Narendra Modi) ನಾಮಫಲಕದಲ್ಲಿ ಭಾರತ್ ಎಂದು ಇಂಗ್ಲಿಷಿನಲ್ಲಿ ಬರೆದಿರುವುದು ಗಮನಸೆಳೆಯುತ್ತಿದೆ. ಅಲ್ಲದೆ ಈ ಮೂಲಕ ವಿಶ್ವಕ್ಕೆ ಅಧಿಕೃತವಾಗಿ ಇದು
ಇಂಡಿಯಾ ಅಲ್ಲ ಭಾರತ್ ಎಂಬ ಸಂದೇಶವನ್ನು ಕೇಂದ್ರ ಸರ್ಕಾರ ನೀಡಿದಂತಾಗಿದೆ.

ಭಾರತ್ ಪ್ರಜಾಪ್ರಭುತ್ವದ ತಾಯಿ ಎಂದು ಬುಕ್‌ಲೆಟ್‌ನಲ್ಲಿ (Booklet) ಉಲ್ಲೇಖಿಸಲಾಗಿದ್ದು, ಭಾರತ್ ಎಂಬುದು ದೇಶದ ಅಧಿಕೃತ ಹೆಸರು. ಅಷ್ಟೇ ಅಲ್ಲದೆ ನಾಮಫಲಕ ಸೇರಿದಂತೆ ವಿದೇಶಿ ಪ್ರತಿನಿಧಿಗಳಿಗೆ
ನೀಡಲಾಗುವ ಜಿ20 ಶೃಂಗಸಭೆಯ ಕಿರುಹೊತ್ತಿಗೆಯಲ್ಲೂ ಭಾರತ್ ಎಂಬ ಪದವನ್ನು ಬಳಸಲಾಗಿದ್ದು, ಇದನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವುದಲ್ಲದೆ ಜೊತೆಗೆ 1946 ರಿಂದ 48ರವರೆಗೆ ನಡೆದ
ಚರ್ಚೆಗಳಲ್ಲೂ ಬಳಸಲಾಗಿದೆ ಎಂದು ತಿಳಿಸಲಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಿ-20 ಶೃಂಗಸಭೆಗೆ ಆಗಮಿಸುತ್ತಿರುವ ಗಣ್ಯರಿಗೆ ಆಯೋಜಿಸಿದ್ದ ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿಯು ಸಹ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲು ‘ಪ್ರೆಸಿಡೆಂಟ್
ಆಫ್ ಭಾರತ್’ (President Of India) ಎಂದು ಬಳಸಲಾಗಿದ್ದು, ಇದು ದೇಶದ ಹೆಸರು ಬದಲಾವಣೆಯ ಚರ್ಚೆಗೆ ನಾಂದಿ ಹಾಡಿತ್ತು. ತದ ಬಳಿಕ ಆಸಿಯಾನ್ ಸಮ್ಮೇಳನದಲ್ಲಿ ಪ್ರೈಮ್ ಮಿನಿಸ್ಟರ್ ಆಫ್
ಇಂಡಿಯಾ ಬದಲು ಪ್ರೈಮ್ ಮಿನಿಸ್ಟರ್ ಆಫ್ ಭಾರತ್ (Prime Minister of Bharat) ಎಂದು ಬಳಸಿದ್ದು, ದೇಶದ ಹೆಸರನ್ನು ಇಂಡಿಯಾ ಬದಲು ಭಾರತ್ ಎಂದು ಮರುನಾಮಕರಣ ಮಾಡುವ
ಚರ್ಚೆಗೆ ಪುಷ್ಠಿ ನೀಡಿದಂತಾಗಿತ್ತು.
ಇನ್ನು ಮಹತ್ವದ ವಿಷಯವೆಂದರೆ ಜಿ-20 ಶೃಂಗಸಭೆಯಲ್ಲಿಯೂ ಇಂಡಿಯಾ ಬದಲು ಭಾರತ್ ಎಂದು ಬಳಸಿರುವುದಲ್ಲದೆ ದೇಶದ ಹೆಸರನ್ನು ಇಂಡಿಯಾದಿಂದ ಭಾರತ್ ಎಂದು ಮರುನಾಮಕರಣ
ಮಾಡುವ ಸಾಧ್ಯತೆ ಹೆಚ್ಚಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭಾರತ್ ಎಂಬ ನಾಮಫಲಕದ ಹಿಂದೆಯೇ ಕುಳಿತು ಜಿ-20 ಶೃಂಗಸಭೆಯಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಮಯದಲ್ಲಿ
ಮಾತನಾಡಿದ ಅವರು ಸಬ್ ಕಾ ಸಾಥ್ (Sab Ka Sath) , ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ (Sab Ka Vishwas) ,ಸಬ್ ಕಾ ಪ್ರಯಾಸ್ ಎಂಬ ಚಿಂತನೆಯನ್ನು ವಿಶ್ವದ ಮಾರ್ಗದರ್ಶಿಯನ್ನಾಗಿ
ಮಾಡಬಹುದು ಎಂದು ಹೇಳಿದರು.

ಅದಲ್ಲದೇ ಇದೇ ವೇಳೆ ಆಫ್ರಿಕನ್ ಯೂನಿಯನ್‌ಗೆ (African Union) ಜಿ-20ಯ ಶಾಶ್ವತ ಸದಸ್ಯತ್ವವನ್ನು ಮೋದಿ ಘೋಷಿಸಿದ್ದು, ಪ್ರಧಾನಿ ಮೋದಿ ಅವರು ತಮ್ಮ ಪ್ರಾಸ್ತಾವಿಕ ಮಾತುಗಳ ಮೂಲಕ
ಮೊರಾಕ್ಕೋದಲ್ಲಿ ನಡೆದ ಭೂಕಂಪನಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿದರು. ಮತ್ತು ಔಪಚಾರಿಕ ಪ್ರಕ್ರಿಯೆಗಳನ್ನು ಮುಂದುವರಿಸುವ ಮುನ್ನ ಮೊರಾಕ್ಕೋದಲ್ಲಿ ಸಂಭವಿಸಿದ ಭೂಕಂಪನದಲ್ಲಿ ಸಾವನ್ನಪ್ಪಿದ
ಜನರಿಗೆ ನನ್ನ ಸಂತಾಪ ಸೂಚಿಸುತ್ತೇನೆ ಹಾಗೂ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇವೆ ಅಲ್ಲದೆ ಮೊರಾಕ್ಕೋ ದೇಶದ ಜನರ ಜೊತೆ ಇಡೀ ಜಾಗತಿಕ ಸಮುದಾಯ
ನಿಲ್ಲಲಿದ್ದು, ಭಾರತವು ನಿಮ್ಮನ್ನೆಲ್ಲಾ ಜಿ-20 ಶೃಂಗಸಭೆಗೆ ಸ್ವಾಗತಿಸುತ್ತದೆ ಎಂದು ಹೇಳಿದರು.
ದಿಲ್ಲಿಯ ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪದಲ್ಲಿ ಶನಿವಾರ ಮತ್ತು ಭಾನುವಾರ ಜಿ-20 ರಾಷ್ಟ್ರಗಳ ಶೃಂಗಸಭೆ ನಡೆಯುತ್ತಿದ್ದು, ಐತಿಹಾಸಿಕ ಜಿ-20 ಶೃಂಗಸಭೆಗೆ ಸಾಕ್ಷಿಯಾಗಿದೆ. ಶನಿವಾರ
ಬೆಳಗ್ಗೆ 10.30ರ ಸುಮಾರಿಗೆ ಜಿ-20 ಶೃಂಗಸಭೆಯ ಔಪಚಾರಿಕ ಕಾರ್ಯಕಲಾಪಗಳು ಶುರುವಾಗಿದ್ದು, ಮೊದಲು ಒನ್ ಅರ್ಥ್ (One Earth) ಎಂಬ ಅಧಿವೇಶನ ನಡೆಯುತ್ತಿದೆ ತದ ಬಳಿಕ ಎರಡನೇ
ಅಧಿವೇಶನ ‘ಒಂದು ಕುಟುಂಬ’ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಇನ್ನು ಶನಿವಾರ ಸಂಜೆ 4:45 ರಿಂದ ಸಂಜೆ 5:30 ರವರೆಗೆ ಪ್ರಧಾನಿ ಮೋದಿ ಮತ್ತು ವಿವಿಧ ರಾಷ್ಟ್ರಗಳ ಮುಖ್ಯಸ್ಥರ ನಡುವಿನ
‘ಪುಲ್-ಸೈಡ್’ (Full Side) ಸಭೆಗಳಿಗಾಗಿ ನಿಗದಿಪಡಿಸಲಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯೋಜಿಸಿರುವ ವಿಶೇಷ ಔತಣಕೂಟ ನಡೆಯಲಿದೆ.
ಇದನ್ನು ಓದಿ: ಜಿ೨೦ ಶೃಂಗಸಭೆಗೆ ಶೃಂಗಾರಗೊಂಡಿರುವ ದೆಹಲಿಯತ್ತ ಎಲ್ಲರ ಚಿತ್ತ
- ಭವ್ಯಶ್ರೀ ಆರ್.ಜೆ