
New Delhi: ಜಮ್ಮು ಮತ್ತು ಕಾಶ್ಮೀರದ (JAMMU KASHMIR) ಹಿರಿಯ ನಾಯಕ ಗುಲಾಂ ನಬಿ ಆಜಾದ್(GHULAM NABI AZAD) ಅವರು ಪ್ರಧಾನಿ ಮೋದಿಯವರ (MODI) ಭಾಷಣವನ್ನು ಉಲ್ಲೇಖಿಸಿ,
ನಾನು ಮೋದಿಯವರ ಬಗ್ಗೆ ತಪ್ಪು ಗ್ರಹಿಕೆ ಹೊಂದಿದ್ದೆ, ಮೋದಿ ಒಬ್ಬ ಒರಟು ಮನುಷ್ಯ ಎಂದು ಭಾವಿಸುತ್ತಿದ್ದೆ, ಆದರೆ ಅವರು ಮಾನವೀಯತೆಯನ್ನು (Humanity) ತೋರಿಸಿದರು” ಎಂದು ಆಜಾದ್ ಹೇಳಿದ್ದಾರೆ.
ನಾನು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದಾಗ(chief minister) ಬಸ್ಸಿನೊಳಗೆ ಗ್ರೆನೇಡ್ (Grenade) ಸ್ಫೋಟಗೊಂಡು, ಅಪಾರ ಸಾವುನೋವುಗಳು ಉಂಟಾಗಿದ್ದವು.
https://vijayatimes.com/natinal-sports-day/
ಮೋದಿ ಅವರು ಆ ಸಮಯದಲ್ಲಿ ಗುಜರಾತ ಸಿಎಂ (GUJARAT CM) ಆಗಿದ್ದರು. ಅವರು ನನಗೆ ಕರೆ ಮಾಡಿದಾಗ, ನಾನು ಅಳುತ್ತಿದ್ದೆ. ನಾನು ಮಾತನಾಡಲು ಸಾಧ್ಯವಿಲ್ಲ ಎಂದು ನನ್ನ ಅಧಿಕಾರಿಗಳಿಗೆ ಹೇಳಿದೆ.
ಆದರೆ ಕೆಲವು ದಿನಗಳ ನಂತರ ಗುಜರಾತ್ ಸಿಎಂ ನನಗೆ ಮತ್ತೆ ಕರೆ ಮಾಡಿ ಸಾಂತ್ವನ ಹೇಳದರು ಎಂದು ಮೋದಿ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.

ಕಾಂಗ್ರೆಸ್‌ನ (Congress) ಹಿರಿಯ ನಾಯಕರೆಲ್ಲಾ ಸೇರಿ ಪಕ್ಷದ ಪರಿಸ್ಥಿತಿಗಳ ಕುರಿತು ಪತ್ರ ಬರೆದಾಗಿನಿಂದ ಈ ಸಮಸ್ಯೆಗಳು ಕಾಣಿಸಿಕೊಂಡವು. ಪಕ್ಷವನ್ನು ಗಟ್ಟಿಗೊಳಿಸಲು ನಾವು ಬಯಸಿದ್ದೇವು.
ಆದರೆ ಅದರ ಬಗ್ಗೆ ಗಂಭೀರ ಆಲೋಚನೆ ನಡೆಯಲಿಲ್ಲ. ನಮ್ಮನ್ನು ಕರೆದು ಹಲವಾರು ಸಭೆಗಳು ನಡೆಸಿದರು. ಆದರೆ ಒಂದೇ ಒಂದು ಸಲಹೆಯನ್ನು ಸಹ ತೆಗೆದುಕೊಳ್ಳಲಾಗಿಲ್ಲ. ಎಲ್ಲವನ್ನೂ ಅವರೇ ನಿರ್ಧರಿಸುತ್ತಾರೆ.
https://vijayatimes.com/natinal-sports-day/
ಹೀಗಾಗಿ ಪಕ್ಷವು ವ್ಯಕ್ತಿ ಕೇಂದ್ರೀತವಾಗಿ ರೂಪಗೊಳ್ಳುತ್ತಿದೆ. ಇದರಿಂದ ಕಾಂಗ್ರೆಸ್ ಪಕ್ಷ ಹೀನಾಯ ಸೋಲನ್ನು ಕಾಣುತ್ತಿದೆ ಎಂದು ಗುಲಾಮ್ ನಬಿ ಆಜಾದ್ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
ಇನ್ನು ಕಳೆದ ವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಗುಲಾಮ್‌ನಬಿ ಆಜಾದ್‌ಅವರು, ಕಾಂಗ್ರೆಸ್ ಪಕ್ಷವನ್ನು ಗಂಭೀರವಲ್ಲದ ವ್ಯಕ್ತಿಯ ಕೈಗೆ ನೀಡಲಾಗಿದೆ ಎಂದು ರಾಹುಲ್ ಗಾಂಧಿಯನ್ನು (Rahul Gandhi)ಟೀಕಿಸಿದ್ದರು.