• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಪಶ್ಚಿಮ ಏಷ್ಯಾ ಸಂಘರ್ಷ: ಹಾರ್ಮುಜ್ ದಿಗ್ಬಂಧನದ ನಡುವೆ ಮೋದಿ–ಟ್ರಂಪ್ ಮಾತುಕತೆ

Teju Srinivas by Teju Srinivas
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಪಶ್ಚಿಮ ಏಷ್ಯಾ ಸಂಘರ್ಷ: ಹಾರ್ಮುಜ್ ದಿಗ್ಬಂಧನದ ನಡುವೆ ಮೋದಿ–ಟ್ರಂಪ್ ಮಾತುಕತೆ
0
SHARES
8
VIEWS
Share on FacebookShare on Twitter

ಹಾರ್ಮುಜ್ ಜಲಸಂಧಿ ದಿಗ್ಬಂಧನ ಕುರಿತು (Modi Trump talks about Hormuz blockade) ಟ್ರಂಪ್-ಪ್ರಧಾನಿ ಮೋದಿ ದೂರವಾಣಿ ಸಂಭಾಷಣೆ

ಪಶ್ಚಿಮ ಏಷ್ಯಾದ ಸಂಘರ್ಷ, ವ್ಯಾಪಾರದ ಬಗ್ಗೆ ಚರ್ಚೆ

ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಮಾಹಿತಿ

New delhi : ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ (Modi Trump talks about Hormuz blockade) ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಮಹತ್ವದ ದೂರವಾಣಿ ಸಂಭಾಷಣೆ ನಡೆದಿದೆ.

ಮಂಗಳವಾರ ನಡೆದ ಈ ಮಾತುಕತೆ ಸುಮಾರು 40 ನಿಮಿಷಗಳ ಕಾಲ ಮುಂದುವರಿದಿದ್ದು, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ, ಜಾಗತಿಕ ಭದ್ರತೆ ಮತ್ತು ವ್ಯಾಪಾರ ಸಂಬಂಧಿತ ವಿಷಯಗಳು ಪ್ರಮುಖವಾಗಿ ಚರ್ಚೆಗೆ ಬಂದಿವೆ ಎಂದು ವರದಿಗಳು ತಿಳಿಸಿವೆ.

Modi Trump talks about Hormuz blockade

ಹಾರ್ಮುಜ್ ಜಲಸಂಧಿಯ ದಿಗ್ಬಂಧನದಿಂದ ಉಂಟಾದ ಅನಿಶ್ಚಿತತೆ ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಈ ಮಾತುಕತೆ ಮಹತ್ವ ಪಡೆದುಕೊಂಡಿದೆ.

ಈ ಸಂಭಾಷಣೆಗೆ ಮುನ್ನ ಭಾರತ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ (Vikram Misri) ಅಮೆರಿಕ ಪ್ರವಾಸ (Modi Trump talks about Hormuz blockade) ಕೈಗೊಂಡು ಅಲ್ಲಿನ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು.

ರಕ್ಷಣಾ ಸಹಕಾರ, ವ್ಯಾಪಾರ ಸಂಬಂಧಗಳು ಮತ್ತು ಉಭಯ ದೇಶಗಳ ಭವಿಷ್ಯದ ತಂತ್ರಗಳ ಬಗ್ಗೆ ಈ ಭೇಟಿಯಲ್ಲಿ ಗಮನಹರಿಸಲಾಗಿತ್ತು.

ಈ ಹಿನ್ನೆಲೆಯಲ್ಲೇ ಮೋದಿ–ಟ್ರಂಪ್ ಮಾತುಕತೆ ನಡೆದಿರುವುದು ಗಮನಾರ್ಹವಾಗಿದೆ.

ಇತ್ತೀಚಿನ ಬೆಳವಣಿಗೆಗಳನ್ನು ಪರಿಗಣಿಸಿದಾಗ, ಭಾರತ ಮತ್ತು ಅಮೆರಿಕ ನಡುವೆ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಅಗತ್ಯತೆ ಇರುವುದನ್ನು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದಕ್ಕೂ ಮೊದಲು, ಭಾರತ–ಅಮೆರಿಕ ಸಂಬಂಧಗಳಲ್ಲಿ ಕೆಲವು ಉದ್ವಿಗ್ನತೆ ಉಂಟಾಗಿತ್ತು. ವಿಶೇಷವಾಗಿ ಭಾರತ–ಪಾಕಿಸ್ತಾನ ನಡುವಿನ ಮಿಲಿಟರಿ (Military)

ಘರ್ಷಣೆಯನ್ನು ತಗ್ಗಿಸುವಲ್ಲಿ ತಾನೇ ಪ್ರಮುಖ ಪಾತ್ರ ವಹಿಸಿದ್ದೇನೆ ಎಂದು ಟ್ರಂಪ್ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.

ಇದರಿಂದ ಉಭಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಅಸಮಾಧಾನ ಉಂಟಾಗಿತ್ತು. ಜೊತೆಗೆ, ಭಾರತ ಮೇಲಿನ ಅಮೆರಿಕದ ಸುಂಕ ನೀತಿಗಳೂ ಸಂಬಂಧಗಳ ಮೇಲೆ

ಪರಿಣಾಮ ಬೀರಿದ್ದವು. ಆದರೆ ಇತ್ತೀಚಿನ ಮಾತುಕತೆಗಳಿಂದ ಈ ಅಂತರವನ್ನು ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂಬ ಸೂಚನೆ ದೊರಕಿದೆ.

ಇನ್ನೊಂದೆಡೆ, ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಮೆರಿಕ ಮತ್ತು ಇಸ್ರೇಲ್‌ನ ಕ್ರಮಗಳಿಗೆ ಪ್ರತಿಯಾಗಿ ಇರಾನ್ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದು, ಸಮುದ್ರ ಮಾರ್ಗಗಳ ಮೇಲೆ ಪರಿಣಾಮ ಬೀರುತ್ತಿದೆ.

ಜಾಗತಿಕ ತೈಲ ಸರಬರಾಜಿನ ಪ್ರಮುಖ ದಾರಿ ಆಗಿರುವ ಈ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೆ ಅಡಚಣೆ ಉಂಟಾದ ಪರಿಣಾಮ, ವಿಶ್ವ ಮಾರುಕಟ್ಟೆಯಲ್ಲಿ ಅಸ್ಥಿರತೆ ಕಂಡುಬಂದಿದೆ.

ಯುದ್ಧದ ಪರಿಣಾಮವಾಗಿ ಸಾವಿರಾರು ಜನರು ಸಾವನ್ನಪ್ಪಿರುವುದು ಮಾನವೀಯ ಸಂಕಟವನ್ನೂ ಹೆಚ್ಚಿಸಿದೆ.

ಈ ನಡುವೆ ಪಾಕಿಸ್ತಾನ (Pakistan) ಮತ್ತೊಮ್ಮೆ ಶಾಂತಿ ಮಾತುಕತೆಗಳಿಗೆ ಮಧ್ಯವರ್ತಿತ್ವ ವಹಿಸಲು ಮುಂದಾಗಿದೆ. ಇರಾನ್ ಮತ್ತು ಅಮೆರಿಕ ನಡುವೆ ಸಮಾಧಾನ ಚರ್ಚೆಗಳನ್ನು

ಪುನರಾರಂಭಿಸಲು ಪ್ರಯತ್ನಗಳು ನಡೆಯುತ್ತಿದ್ದು, ಮುಂದಿನ ವಾರ ಇಸ್ಲಾಮಾಬಾದ್‌ನಲ್ಲಿ (Islamabad) ಎರಡನೇ ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆ ಇದೆ.

ಈ ಬೆಳವಣಿಗೆಗಳು ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಮಹತ್ವದ್ದಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗೆ ಬದಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Tags: converstaionDonaldTrumpHormuzblockadeNarendra Modi

Related News

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆ: ತಮಿಳುನಾಡಿಗೆ ಪ್ರತಿನಿತ್ಯ 3,000 ಕ್ಯೂಸೆಕ್ ನೀರು ಹರಿಸಲು CWRC ಸೂಚನೆ
ಪ್ರಮುಖ ಸುದ್ದಿ

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆ: ತಮಿಳುನಾಡಿಗೆ ಪ್ರತಿನಿತ್ಯ 3,000 ಕ್ಯೂಸೆಕ್ ನೀರು ಹರಿಸಲು CWRC ಸೂಚನೆ

October 8, 2026
ಅಕ್ಟೋಬರ್ 15ರಿಂದ UPI ಪಾವತಿಯಲ್ಲಿ ಹೊಸ ನಿಯಮ: ₹2,000 ಮೀರಿದ ವಹಿವಾಟಿಗೆ ಶುಲ್ಕ
ದೇಶ-ವಿದೇಶ

ಅಕ್ಟೋಬರ್ 15ರಿಂದ UPI ಪಾವತಿಯಲ್ಲಿ ಹೊಸ ನಿಯಮ: ₹2,000 ಮೀರಿದ ವಹಿವಾಟಿಗೆ ಶುಲ್ಕ

October 8, 2026
ಬರದಿಂದ ತತ್ತರಿಸಿದ ರೈತರ ನೆರವಿಗೆ ನಿಂತ ಸರ್ಕಾರ: ₹1,250 ಕೋಟಿ ಪರಿಹಾರದ ಮೊದಲ ಕಂತು ಬಿಡುಗಡೆ
ಪ್ರಮುಖ ಸುದ್ದಿ

ಬರದಿಂದ ತತ್ತರಿಸಿದ ರೈತರ ನೆರವಿಗೆ ನಿಂತ ಸರ್ಕಾರ: ₹1,250 ಕೋಟಿ ಪರಿಹಾರದ ಮೊದಲ ಕಂತು ಬಿಡುಗಡೆ

October 8, 2026
ಕಸದ ಮಾದರಿಯಲ್ಲಿ ಬಳಸಿದ ಅಡುಗೆ ಎಣ್ಣೆ ಸಂಗ್ರಹಕ್ಕೆ ಪ್ಲ್ಯಾನ್: ನಗರಗಳಲ್ಲಿ ಮನೆ ಮನೆಗೆ ಬರಲಿದ್ದಾರೆ ಸಿಬ್ಬಂದಿ
ಪ್ರಮುಖ ಸುದ್ದಿ

ಕಸದ ಮಾದರಿಯಲ್ಲಿ ಬಳಸಿದ ಅಡುಗೆ ಎಣ್ಣೆ ಸಂಗ್ರಹಕ್ಕೆ ಪ್ಲ್ಯಾನ್: ನಗರಗಳಲ್ಲಿ ಮನೆ ಮನೆಗೆ ಬರಲಿದ್ದಾರೆ ಸಿಬ್ಬಂದಿ

October 8, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.