vijaya times advertisements
Visit Channel

ಇದು ‘ಮೋಹನದಾಸ’ ಮಾಸ

ಮಹಾತ್ಮ ಗಾಂಧಿ ಅವರ ಬಾಲ್ಯದ ಬಗ್ಗೆ ತಿಳಿಸುವ ಪಿ ಶೇಷಾದ್ರಿ ನಿರ್ದೇಶನದ ಚಿತ್ರ ‘ಮೋಹನ ದಾಸ’ ಗಾಂಧಿ ಜಯಂತಿ ಪ್ರಯುಕ್ತ ‘ಅಕ್ಟೋಬರ್ 1’ರಂದು ತೆರೆ ಕಾಣಲಿದೆ. ಅಕ್ಟೋಬರ್ 2 ಗಾಂಧಿ ಜಯಂತಿ. ಒಂದು ದಿನ ಮುಂಚಿತವಾಗಿ ಮಾಸಾರಂಭದಲ್ಲೇ ಮೋಹನದಾಸ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.

ಕನ್ನಡಕ್ಕೆ ಹಲವು ರಾಷ್ಟ್ರಪ್ರಶಸ್ತಿ ತಂದುಕೊಟ್ಟಿರುವ ನಿರ್ದೇಶಕ ಪಿ.ಶೇಷಾದ್ರಿ ಚಿತ್ರದ ಮೂಲಕ ಹೊಸದೇನನ್ನೋ ಹೇಳಲು‌ ಹೊರಟಿದ್ದಾರೆ. ಜಗತ್ಪ್ರಸಿದ್ಧ ವ್ಯಕ್ತಿತ್ವವಾದ ಗಾಂಧಿಯ ಬಗ್ಗೆ ಹೊಸದೇನಿರಬಹುದು ಎನ್ನುವ ಕುತೂಹಲ ನಿಮ್ಮಲ್ಲೂ ಮೂಡಿರಬಹುದು. ಅದಕ್ಕೆ ಕಾರಣ ಇದು ಗಾಂಧಿಯ ಬಾಲ್ಯದ ಕುರಿತಾದ ಅಪರೂಪದ ಸಿನಿಮಾ ಎನ್ನುವುದೇ ಆಗಿದೆ.ರಿಚರ್ಡ್ ಆಟನ್ ಬರೋ ಅವರ “ಗಾಂಧಿ” ಹಾಗೂ ಶ್ಯಾಮ್ ಬೆನಗಲ್ ಅವರ “ಮೇಕಿಂಗ್ ಆಫ್ ಮಹಾತ್ಮ” ಎರಡು ಚಿತ್ರಗಳು ಬಹಳ ವರ್ಷಗಳ ಹಿಂದೆ ಬಂದಿದೆ. ಆದರೆ ಗಾಂಧೀಜಿಯವರ ಬಾಲ್ಯದ ದಿನಗಳು

 ಎರಡೂ ಚಿತ್ರಗಳಲ್ಲಿ ಇಲ್ಲ.

ಗಾಂಧಿ ಅವರು ಸಹ ತಮ್ಮ ಆತ್ಮಚರಿತ್ರೆ ಯಲ್ಲಿ ಕೇವಲ ಮೂವತ್ತು ಪುಟಗಳಷ್ಟು ಮಾತ್ರ ಬಾಲ್ಯದ ಬಗ್ಗೆ ಬರೆದುಕೊಂಡಿದ್ದಾರೆ.

ನಾನು ಬೊಳುವಾರು ಅವರು ಬರೆದಿರುವ “ಪಾಪು ಗಾಂಧಿ ಬಾಪು ಗಾಂಧಿ ಆದ ಕಥೆ” ಪುಸ್ತಕ ಓದಿದ್ದಾಗಿನಿಂದಲ್ಲೂ‌, ಗಾಂಧಿ ಅವರ ಬಾಲ್ಯದ ಜೀವನದ ಬಗ್ಗೆ ಚಿತ್ರ ಮಾಡಬೇಕೆಂದು ಕೊಂಡಿದ್ದೆ.

ಗಾಂಧಿ ಅವರು ಮೋಹನದಾಸ ಆಗಿದ್ದಾಗ ಅಂದರೆ, ಅವರ ಸುಮಾರು 7 ರಿಂದ 14 ವರ್ಷಗಳಲ್ಲಿನ ಜೀವನದ ಘಟನೆಗಳು ಮಾತ್ರ ನಮ್ಮ ಚಿತ್ರದಲ್ಲಿದೆ.

ಗುಜರಾತ್ ನ ಪೋರ್ ಬಂದರ್, ರಾಜಕೋಟ್ ನಲ್ಲಿ ಚಿತ್ರೀಕರಾಣ ನಡೆಸಲಾಗಿದೆ. ಗಾಂಧಿ ಅವರು ಹುಟ್ಟಿಬೆಳೆದ ಮನೆಯಲ್ಲೂ ಚಿತ್ರೀಕರಣ ಮಾಡಿರುವುದು ವಿಶೇಷ.

ಗಾಂಧಿ ಜಯಂತಿ ಸುಸಂದರ್ಭದಲ್ಲೇ ನಮ್ಮ ಚಿತ್ರ ಸುಮಾರು ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಈ ಚಿತ್ರ ‌ನಿರ್ಮಾಣವಾಗಿದೆ.ಈ ಚಿತ್ರವನ್ನು ನೋಡುವುದರ ಮೂಲಕ  ಗಾಂಧಿ ಜಯಂತಿಯನ್ನು ಸಮರ್ಥವಾಗಿ ಆಚರಿಸೋಣ  ಎಂದರು ನಿರ್ದೇಶಕ ಪಿ.ಶೇಷಾದ್ರಿ.

ಕಳೆದಬಾರಿ ಲಾಕ್ ಡೌನ್ ತೆರವುಗೊಂಡಾಗ ನನ್ನ  ‘ಆಕ್ಟ್ 1978’ ಬಿಡುಗಡೆಯಾಗಿತ್ತು.‌ ಈ ಬಾರಿ

ಸರ್ಕಾರ ನೂರರಷ್ಟು ಚಿತ್ರಮಂದಿರಗಳಲ್ಲಿ ಭರ್ತಿಗೆ ಅವಕಾಶ ನೀಡಿರುವ ಸಂದರ್ಭದಲ್ಲಿ ನನ್ನ ಅಭಿನಯದ “ಮೋಹನದಾಸ” ಮೊದಲ ಚಿತ್ರವಾಗಿ ಬಿಡುಗಡೆಯಾಗುತ್ತಿದೆ.‌ ಪಿ.ಶೇಷಾದ್ರಿ ಅವರ ಜೊತೆ ಕೆಲಸ ಮಾಡಿದ್ದು ಸಂತಸ ತಂದಿದೆ.‌ ಮಹಾತ್ಮ ಗಾಂಧಿ ಆಗುವುದಕ್ಕಿಂತ ಮುಂಚೆ ಅವರು ಮೋಹನದಾಸ.‌ ಗಾಂಧಿ ಅವರ ಬಾಲ್ಯದ ಕಥೆಯನ್ನು ಆಧರಿಸಿ ಈ ಚಿತ್ರ ನಿರ್ಮಾಣವಾಗಿದೆ. ನಾನು ಮೋಹನದಾಸ‌ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು ಹಿರಿಯ ನಟಿ ಶ್ರುತಿ.

ಮೋಹನದಾಸ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಮರ್ಥ, ಹಿರಿಯನಟ ದತ್ತಣ್ಣ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಅನೇಕ ಕಲಾವಿದರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಹಿರಿಯನಟ ದತ್ತಣ್ಣ ಅಭಿನಯದ 200ನೇ ಚಿತ್ರ ಇದು. ನನ್ನ ನಿರ್ದೇಶನದ 12ನೇ ಚಿತ್ರವಿದು. ನನ್ನ ಅಷ್ಟು ಚಿತ್ರಗಳಲ್ಲೂ ಅವರು ಅಭಿನಯಿಸಿದ್ದಾರೆ. ನಾನು ದತ್ತಣ್ಣ ಇಲ್ಲದೇ ಚಿತ್ರವನ್ನೇ ಮಾಡಿಲ ಎಂಬ ಖುಷಿಯ ವಿಚಾರವನ್ನು ಪಿ.ಶೇಷಾದ್ರಿ ಈ ಸಂದರ್ಭದಲ್ಲಿ ಹಂಚಿಕೊಂಡರು.

ಮಿತ್ರಚಿತ್ರ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಪಿ.ಶೇಷಾದ್ರಿ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಜಿ.ಎಸ್.ಭಾಸ್ಕರ್ ಛಾಯಾಗ್ರಹಣ, ಬಿ.ಎಸ್.ಕೆಂಪರಾಜ್ ಸಂಕಲನ ಹಾಗೂ ಪ್ರವೀಣ್ ಗೋಡ್ಕಿಂಡಿ ಅವರ ಸಂಗೀತ ಹಾಗೂ ಹೊಸ್ಮನೆ ಮೂರ್ತಿ ಅವರ‌ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸಮರ್ಥ, ಪರಮಸ್ವಾಮಿ, ಶ್ರುತಿ, ಅನಂತ್ ಮಹದೇವನ್, ದತ್ತಣ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Latest News

ಪ್ರಮುಖ ಸುದ್ದಿ

220 ಕ್ಕೂ ಅಧಿಕ ಪಿಎಫ್ಐ ಕಾರ್ಯಕರ್ತರ  ಮೇಲೆ  ಪಿಎಆರ್‌ ಕಾಯ್ದೆ ಅಸ್ತ್ರ ; ಏನಿದು ಪಿಎಆರ್?

(PAR Act on PFI workers) ಸ್ಥಿರ ಹಾಗೂ ಚರಾಸ್ತಿ ಮೌಲ್ಯವೆಷ್ಟು ಎಂಬುದನ್ನು ನಮೂದಿಸಿ, ತಾಲೂಕು ದಂಡಾಧಿಕಾರಿಗಳು, ಬಂಧಿತ ವ್ಯಕ್ತಿಯಿಂದ ಮುಚ್ಚಳಿಕೆ ಪಡೆಯುತ್ತಾರೆ.

ದೇಶ-ವಿದೇಶ

ಪಾಕಿಸ್ತಾನಕ್ಕೆ ಎಫ್-16 : ಜೈಶಂಕರ್ ಹೇಳಿಕೆಗೆ ಅಮೇರಿಕಾ  ಪ್ರತಿಕ್ರಿಯೆ

ಸದ್ಯ ಅಮೇರಿಕಾ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್  ಭಯೋತ್ಪಾದನೆಯ ವಿರುದ್ಧ ಹೋರಾಡಲು ಎಫ್-16 ಯುದ್ದ ವಿಮಾನಗಳನ್ನು ಪಾಕಿಸ್ತಾನಕ್ಕೆ ನೀಡಲಾಗುತ್ತಿದೆ ಎಂಬ ಅಮೇರಿಕಾದ ವಾದವನ್ನು  ತೀವ್ರವಾಗಿ ಟೀಕಿಸಿದ್ದರು.

ಲೈಫ್ ಸ್ಟೈಲ್

ಇಲ್ಲಿವೆ ನೋಡಿ ವಿಚಿತ್ರ ಸಾಕುಪ್ರಾಣಿಗಳು: ಇವುಗಳ ಬಗ್ಗೆ ಕೇಳಿದರೆ ಅಚ್ಚರಿಯಾಗುವುದು ಖಂಡಿತ!

ಸಾಕುಪ್ರಾಣಿಗಳೆಂದರೆ ತಕ್ಷಣ ನೆನಪಿಗೆ ಬರುವುದು, ನಾಯಿ, ಬೆಕ್ಕು, ಮೊಲ, ಗಿಳಿ, ಪಾರಿವಾಳಗಳು ಅಲ್ಲವೇ? ಆದರೆ, ಜಗತ್ತಿನಲ್ಲಿ ಬೇರೆ ಬೇರೆ ಕಡೆ ಎಂತೆಂತಹ ವಿಚಿತ್ರ ಪ್ರಾಣಿಗಳನ್ನು ತಮ್ಮ ಸಾಕುಪ್ರಾಣಿಗಳನ್ನಾಗಿ ಮಾಡಿಕೊಂಡಿದ್ದಾರೆ

Priyank
ರಾಜಕೀಯ

‘ಲಂಚ ಕೊಡಬೇಕಾಗಿಲ್ಲ’ ಅಭಿಯಾನವನ್ನು ವಿಧಾನಸೌಧದಲ್ಲೂ ಮಾಡಿ – ಪ್ರಿಯಾಂಕ್ ಖರ್ಗೆ ಆಗ್ರಹ

ಸರ್ಕಾರಕ್ಕೆ ನಿಜಕ್ಕೂ ಇಚ್ಛಾಶಕ್ತಿ ಇದ್ದಿದ್ದರೆ ತಮ್ಮ ಮೇಲಿನ ಹಗರಣ ಆರೋಪಗಳನ್ನು ನ್ಯಾಯಾಂಗ (No bribe campaign) ತನಿಖೆಗೆ ವಹಿಸುತ್ತಿದ್ದರು.