ಮಾಂಕ್ ಹಣ್ಣು(Monk fruit) , ಲುವೊ ಹಾನ್ ಗುವೊ(Luo Han Guo) ಅಥವಾ ಸ್ವಿಂಗಲ್ ಹಣ್ಣು(Swingle fruit) ಈ ಹಣ್ಣಿನ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ಇಲ್ಲ.
ಈ ಹಣ್ಣು ಸಕ್ಕರೆಯಷ್ಟೇ ಸಿಹಿ ಹಾಗೂ ಸಕ್ಕರೆಯ ಪರ್ಯಾಯ(alternative) ಹಣ್ಣು ಅಂದ್ರೂ ತಪ್ಪಾಗಲ್ಲ. (Monk fruit the natural sweetener)
ಬೌದ್ಧ ಸನ್ಯಾಸಿಗಳು(Buddhist monk) ಶತಮಾನಗಳಿಂದ ಬೆಳೆಸುತ್ತಿದ್ದ ಹಣ್ಣು ಇದಾಗಿದೆ, ಈ ಕಾರಣದಿಂದ ಈ ಹಣ್ಣನ್ನ ಸನ್ಯಾಸಿ ಹಣ್ಣು(monk fruit) ಎಂದು ಕೂಡ ಕರೆಯಲಾಗುತ್ತೆ.
ಈ ಹಣ್ಣು ಮೂಲತಃ ದಕ್ಷಿಣ ಚೀನಾ(South China) ಮತ್ತು ಉತ್ತರ ಥೈಲ್ಯಾಂಡ್‌ನಲ್ಲಿ(Northern Thailand) ಹೆಚ್ಚಾಗಿ ಕಾಣಸಿಗುತ್ತದೆ.
ಬೌದ್ಧ ಸನ್ಯಾಸಿಗಳು ಶತಮಾನಗಳಿಂದ ಬೆಳೆಸುತ್ತಿದ್ದಾರೆ. ಇದು ಒಂದು ಸಣ್ಣ ಹಣ್ಣಾಗಿದ್ದು ನೈಸರ್ಗಿಕ ಸಿಹಿಕಾರಕವಾಗಿರೋದ್ರಿಂದ(Natural sweetener) ಬಹಳ ಪ್ರಸಿದ್ಧಿ ಪಡೆದಿದೆ.
ಈ ಹಣ್ಣು ಆರೋಗ್ಯಕ್ಕೆ(health) ಬಹಳ ಒಳ್ಳೆಯದಾಗಿದ್ದು, ಮಧುಮೇಹಿಗಳು(Diabetic) ಇದನ್ನ ತಿಂದರೆ ಒಳ್ಳೆಯದು.
ಸ್ವಿಂಗಲ್ ರಕ್ತದಲ್ಲಿನ ಗ್ಲೂಕೋಸ್(Blood glucose) ಪ್ರಮಾಣವನ್ನು ಹೆಚ್ಚಿಸುವುದಿಲ್ಲ ಹಾಗು ನೈಸರ್ಗಿಕವಾಗಿ ಸಕ್ಕರೆಗಿಂತ 100-250 ಪಟ್ಟು ಹೆಚ್ಚು ಸಿಹಿಯಾಗಿರುತ್ತದೆ.
ಹಾಗೂ ಜೀರೋ ಕ್ಯಾಲೋರಿ(Zero calories) ಹೊಂದಿರುತ್ತದೆ. ಹೀಗಾಗಿ ಈ ಮಾಂಕ್ ಫ್ರೂಟ್‌ಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.

ಹಣ್ಣು ಹಾಗು ಸಿರೈಟಿಯಾ ಹಣ್ಣುಗಳ(Cyraitia fruit) ಇಳುವರಿಯ ದೊಡ್ಡ ಪಾಲು ನೈಋತ್ಯ ಚೀನಾದ(Southwest China) ಗುವಾಂಗ್ಕ್ಸಿ ಜುವಾಂಗ್(Guangxi Zhuang) ಪ್ರದೇಶದಿಂದ ಮಾರುಕಟ್ಟೆಗೆ ಬರುತ್ತಿತ್ತು.
ಸ್ಥಳದಲ್ಲಿಯೇ ಈ ಹಣ್ಣನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಜಾಗತಿಕವಾಗಿ(Globally) ಮಾರಾಟವಾಗುವ ಹಣ್ಣಿನಲ್ಲಿ ಶೇಕಡ 90 ರಷ್ಟು ಹಣ್ಣು ಇದೇ ಸ್ಥಳದಿಂದ ಬರುತ್ತಿತ್ತು.
ಈ ಮಾಂಕ್ ಫ್ರೂಟ್ ಸಿಹಿಕಾರಕವನ್ನು ಮಾಂಕ್ ಹಣ್ಣುಗಳನ್ನು ಪುಡಿಮಾಡಿ ಅವುಗಳ ರಸವನ್ನು ಹೊರತೆಗೆಯುವ ಮೂಲಕ ತಯಾರಿಸಲಾಗುತ್ತದೆ.
ಮಾಂಕ್ ಹಣ್ಣಿನ ಆರೋಗ್ಯ ಪ್ರಯೋಜನಗಳು:
- ಮಾಂಕ್ ಹಣ್ಣು ರೋಗ ನಿರೋಧಕ ಶಕ್ತಿಯನ್ನ(Immunity) ಹೊಂದಿದೆ. ಇದು ಕ್ಯಾನ್ಸರ್(Cancer) ತಡೆಗಟ್ಟುತ್ತದೆ.
- ಉರಿಯೂತ(Inflammation) ಮತ್ತು ಮಧುಮೇಹ ಸಮಸ್ಯೆ ನಿವಾರಣೆ ಮಾಡುತ್ತೆ. ಮಾಂಕ್ ಹಣ್ಣಿನಲ್ಲಿ ಮೊಗ್ರೋಸೈಡ್(Mogroside) ಎಂಬ ಅಂಶ ಇದ್ದು ಈ ಹಣ್ಣು ಸಕ್ಕರೆಗೆ ಪರ್ಯಾಯವಾಗಿದೆ.
- ಮಾಂಕ್ ಫ್ರೂಟ್ 0 ಕ್ಯಾಲೋರಿಗಳನ್ನು ಹೊಂದಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
- ಇದು ಕ್ಯಾಲೊರಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಹಣ್ಣನ್ನ ಸೇವಿಸುವದರಿಂದ ಆರಾಮಾಗಿ ತೂಕ ಇಳಿಸಿಕೊಳ್ಳಬಹುದು(weight loss).
- ಈ ಹಣ್ಣು ಕರುಳಿನ ಆರೋಗ್ಯಕ್ಕೆ(Gut health) ಪ್ರಯೋಜನಕಾರಿ ಆಗಿದ್ದು, ಇದು ಕರುಳಿನ ಬ್ಯಾಕ್ಟೀರಿಯಾವನ್ನು(Gut bacteria) ಪೋಷಿಸುತ್ತದೆ ಮತ್ತು ರೋಗಕಾರಕ ಬ್ಯಾಕ್ಟೀರಿಯಾಗಳನ್ನು(Pathogenic bacteria) ಕಡಿಮೆ ಮಾಡುತ್ತವೆ.
ನೀವು ಸಾಮಾನ್ಯ ಸಕ್ಕರೆಯಂತೆಯೇ ಮಾಂಕ್ ಫ್ರೂಟ್‌ನ ಬಳಸಬಹುದು. ನಿಮ್ಮ ಆಹಾರದಲ್ಲಿ ಮಾಂಕ್ ಫ್ರೂಟ್‌ನ ಸೇರಿಸಿ ತಿನ್ನಬಹುದು.
ಇದನ್ನು ಕಾಕ್ಟೇಲ್‌ಗಳು(Cocktails), ಐಸ್ಡ್ ಟೀ(Iced tea), ನಿಂಬೆ ಪಾನಕ(Lemonade) ಮತ್ತು ಇತರ ಪಾನೀಯಗಳಿಗೆ ಸೇರಿಸಿ ಸೇವಿಸಬಹುದು ಹಾಗು ಸಕ್ಕರೆ ಅಥವಾ ಸಿಹಿಗೊಳಿಸಿದ ಕ್ರೀಮರ್‌ಗಳ ಬದಲಿಗೆ ಕಾಫಿಗೆ(Coffee) ಬೆರೆಸಿ ಸೇವಿಸಬಹುದು.
ಕಂದು ಸಕ್ಕರೆ(brown sugar) ಮತ್ತು ಮೇಪಲ್ ಸಿರಪ್(Maple syrup) ಬದಲಿಗೆ ಸಾಸ್ಮತ್ತು ಮ್ಯಾರಿನೇಡ್(Marinade)
ಇದನ್ನು ಓದಿ :ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಹೆಸರಿನಲ್ಲಿ ಆನ್‌ಲೈನ್ ವಂಚನೆ
ಬದಲಿಗೆ ಮಾಂಕ್ ಫ್ರೂಟ್ ಅನ್ನು ಆರಿಸಿಕೊಳ್ಳಬಹುದು. ಕೇಕ್, ಕುಕೀ ಮತ್ತು ಪೈ (Monk fruit the natural sweetener) ಪಾಕವಿಧಾನಗಳಿಗೆಸಕ್ಕರೆ ಬದಲಿಯಾಗಿ ಇದನ್ನು ಬಳಸಿ.