• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಇಂದಿನಿಂದ ಮುಂಗಾರು ಅಧಿವೇಶನಕ್ಕೆ ಚಾಲನೆ; ಸರ್ಕಾರಕ್ಕೆ ಪ್ರತಿಪಕ್ಷಗಳ ಸವಾಲು

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಇಂದಿನಿಂದ ಮುಂಗಾರು ಅಧಿವೇಶನಕ್ಕೆ ಚಾಲನೆ; ಸರ್ಕಾರಕ್ಕೆ ಪ್ರತಿಪಕ್ಷಗಳ ಸವಾಲು
0
SHARES
9
VIEWS
Share on FacebookShare on Twitter

ಇಂದಿನಿಂದ ಮುಂಗಾರು (Monsoon session begins today) ಅಧಿವೇಶನ; ಹಲವು ಅಸ್ತ್ರಗಳೊಂದಿಗೆ ಬಿಜೆಪಿ-ಜೆಡಿಎಸ್‌

ಬಿಡದಿ ಟೌನ್‌ಶಿಪ್‌, ವಾಲ್ಮೀಕಿ ನಿಗಮ ಹಗರಣ ಸೇರಿ ಹಲವು ವಿಚಾರಗಳ ಪ್ರಸ್ತಾಪಕ್ಕೆ ಬಿಜೆಪಿ-ಜೆಡಿಎಸ್‌ ಸಜ್ಜು

ವಿಧಾನಮಂಡಲದಲ್ಲಿ ಕಾವೇರಲಿದೆ ರಾಜಕೀಯ ಕದನ

ಬಿಡದಿ ಟೌನ್‌ಶಿಪ್‌ನಿಂದ ವಾಲ್ಮೀಕಿ ನಿಗಮದವರೆಗೆ ಹಲವು ವಿಷಯಗಳ ಮೇಲೆ ಸರ್ಕಾರಕ್ಕೆ ಪ್ರತಿಪಕ್ಷಗಳ ಸವಾಲು

Bengaluru : ರಾಜ್ಯ ವಿಧಾನಮಂಡಲದ ಬಹುನಿರೀಕ್ಷಿತ ಮುಂಗಾರು ಅಧಿವೇಶನ ಇಂದು ಗುರುವಾರದಿಂದ (Monsoon session begins today) ಆರಂಭವಾಗಿದ್ದು, ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರ ಮತ್ತು ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದ ಪ್ರತಿಪಕ್ಷಗಳ ನಡುವೆ ರಾಜಕೀಯ ವಾಕ್ಸಮರಕ್ಕೆ ವೇದಿಕೆ ಸಜ್ಜಾಗಿದೆ.

ಆಗಸ್ಟ್‌ 13ರಿಂದ 27ರವರೆಗೆ ನಡೆಯಲಿರುವ ಅಧಿವೇಶನದಲ್ಲಿ ಹಲವು ಪ್ರಮುಖ ವಿಚಾರಗಳು ಚರ್ಚೆಗೆ ಬರುವ ಸಾಧ್ಯತೆ ಇದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು

ಹಲವು ಅಸ್ತ್ರಗಳನ್ನು ಸಿದ್ಧಪಡಿಸಿಕೊಂಡಿವೆ. ಇದೇ ವೇಳೆ ಪ್ರತಿಪಕ್ಷಗಳ ಆರೋಪಗಳಿಗೆ ಸಮರ್ಥವಾಗಿ ತಿರುಗೇಟು ನೀಡಲು ಕಾಂಗ್ರೆಸ್‌ ಕೂಡ ತನ್ನದೇ ಆದ ತಂತ್ರ ರೂಪಿಸಿದೆ.

Monsoon session begins today

ಅಧಿವೇಶನದ ಮೊದಲ ದಿನ ಇತ್ತೀಚೆಗೆ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿ ಕಲಾಪವನ್ನು ಮುಂದೂಡುವ ಸಾಧ್ಯತೆ ಇದ್ದು, ಸೋಮವಾರದಿಂದ ಪ್ರಮುಖ ವಿಚಾರಗಳ ಕುರಿತು ಪೂರ್ಣ ಪ್ರಮಾಣದ ಚರ್ಚೆಗಳು ಕಾವೇರುವ ನಿರೀಕ್ಷೆಯಿದೆ.

ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಜಂಟಿಯಾಗಿ ಸರ್ಕಾರದ ವಿರುದ್ಧ (Monsoon session begins today) ಹಲವು ವಿಚಾರಗಳನ್ನು ಪ್ರಸ್ತಾಪಿಸಲು ನಿರ್ಧರಿಸಿದ್ದಾರೆ.

ವಿಶೇಷವಾಗಿ ಬಿಡದಿ ಟೌನ್‌ಶಿಪ್‌ (Bidadi Township) ಅಭಿವೃದ್ಧಿ ಯೋಜನೆ, ನೈಸ್‌ ಸಂಸ್ಥೆಯ ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್‌ ಯೋಜನೆ, ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅಕ್ರಮಗಳ ಆರೋಪ ಹಾಗೂ ಪೊಲೀಸ್‌ ನೇಮಕಾತಿಗೆ ಸಂಬಂಧಿಸಿದ ವಿಚಾರಗಳು ಅಧಿವೇಶನದಲ್ಲಿ ಪ್ರಮುಖ ಚರ್ಚೆಯ ವಿಷಯಗಳಾಗುವ ಸಾಧ್ಯತೆಯಿದೆ.

ಸರ್ಕಾರದ ಆಡಳಿತ ವೈಖರಿ, ವಿವಿಧ ಯೋಜನೆಗಳ ಅನುಷ್ಠಾನ ಹಾಗೂ ಹಣಕಾಸು ನಿರ್ವಹಣೆ ಕುರಿತು ಪ್ರಶ್ನೆಗಳನ್ನು ಎತ್ತಲು ಪ್ರತಿಪಕ್ಷಗಳು ಸಜ್ಜಾಗಿವೆ.

ಹೀಗಾಗಿ ಈ ಬಾರಿ ಅಧಿವೇಶನ ಕೇವಲ ಸಾಮಾನ್ಯ ಕಲಾಪಕ್ಕೆ ಸೀಮಿತವಾಗದೆ, ಸರ್ಕಾರದ ಕಾರ್ಯವೈಖರಿಯ ಮೇಲೆ ರಾಜಕೀಯ ಚರ್ಚೆಗೆ ಪ್ರಮುಖ ವೇದಿಕೆಯಾಗುವ ಸಾಧ್ಯತೆಯಿದೆ.

ಇದರ ಜೊತೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸು ಅಕ್ರಮ ಪ್ರಕರಣವೂ ಪ್ರತಿಪಕ್ಷಗಳ ಪ್ರಮುಖ ಅಸ್ತ್ರವಾಗಲಿದೆ. ಈ ಪ್ರಕರಣದಲ್ಲಿ ಆರೋಪಗಳನ್ನು ಎದುರಿಸಿದ್ದ ಬಿ. ನಾಗೇಂದ್ರ (B.Nagendra) ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರುವ ವಿಚಾರವನ್ನು ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಪ್ರಬಲವಾಗಿ ಪ್ರಶ್ನಿಸಲು ಮುಂದಾಗಿದ್ದಾರೆ.

ನಾಗೇಂದ್ರ ಅವರ ಮರುಸೇರ್ಪಡೆಗೆ ಸಂಬಂಧಿಸಿದಂತೆ ಸರ್ಕಾರದ ನಿಲುವೇನು, ಪ್ರಕರಣದ ತನಿಖೆಯ ಸ್ಥಿತಿ ಏನು ಮತ್ತು ಆರೋಪಗಳ ನಡುವೆಯೇ ಅವರನ್ನು ಮತ್ತೆ ಸಂಪುಟಕ್ಕೆ ಏಕೆ ಸೇರಿಸಲಾಯಿತು ಎಂಬ ಪ್ರಶ್ನೆಗಳನ್ನು ಪ್ರತಿಪಕ್ಷಗಳು ಎತ್ತುವ ನಿರೀಕ್ಷೆಯಿದೆ.

ಈ ವಿಚಾರ ಕಾಂಗ್ರೆಸ್‌ ಸರ್ಕಾರಕ್ಕೆ ರಾಜಕೀಯವಾಗಿ ಮತ್ತೊಂದು ಸವಾಲಾಗುವ ಸಾಧ್ಯತೆಯಿದ್ದು, ಅಧಿವೇಶನದಲ್ಲಿ ಈ ಬಗ್ಗೆ ಕಾವೇರಿದ ಚರ್ಚೆ ನಡೆಯಬಹುದು.

ಪ್ರತಿಪಕ್ಷಗಳ ದಾಳಿಯನ್ನು ಎದುರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (D.K.Shivakumar) ಅವರು ಸಚಿವರು ಹಾಗೂ ಹಿರಿಯ ಕಾಂಗ್ರೆಸ್‌ ನಾಯಕರೊಂದಿಗೆ ಸಭೆ ನಡೆಸಿ ಸರ್ಕಾರದ ಕಾರ್ಯತಂತ್ರದ ಕುರಿತು ಚರ್ಚಿಸಿದ್ದಾರೆ.

ಯಾವುದೇ ಸಚಿವರನ್ನು ಪ್ರತಿಪಕ್ಷಗಳು ಗುರಿಯಾಗಿಸಿಕೊಂಡು ಟೀಕಿಸಿದರೆ, ಸಚಿವರು ಪರಸ್ಪರ ಬೆಂಬಲವಾಗಿ ನಿಲ್ಲಬೇಕು ಎಂದು ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.

ವಿಶೇಷವಾಗಿ ಬಿಡದಿ ಟೌನ್‌ಶಿಪ್‌ ಯೋಜನೆ ಕುರಿತು ಪ್ರತಿಪಕ್ಷಗಳು ಪ್ರಶ್ನೆಗಳನ್ನು ಎತ್ತಿದರೆ, ತಾವೇ ನೇರವಾಗಿ ಉತ್ತರಿಸುವುದಾಗಿ ಡಿ.ಕೆ. ಶಿವಕುಮಾರ್‌ ಸಚಿವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಹೊಸದಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಸಚಿವರಿಗೆ ಖಾತೆ ಹಂಚಿಕೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಅಧಿವೇಶನದಲ್ಲಿ ಸಚಿವರು ತಮ್ಮ ಇಲಾಖೆಗಳ ಕುರಿತು ಎದುರಾಗಬಹುದಾದ ಪ್ರಶ್ನೆಗಳಿಗೆ ಸಿದ್ಧರಾಗಬೇಕಾಗಿದೆ.

ಇದೇ ಅಧಿವೇಶನದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಪ್ರಮುಖ ಸ್ಥಾನಗಳ ಆಯ್ಕೆಯೂ ನಡೆಯಲಿದೆ. ವಿಧಾನಸಭೆಯ ಸ್ಪೀಕರ್‌ ಸ್ಥಾನಕ್ಕೆ ಕಾಂಗ್ರೆಸ್‌ ಶಾಸಕ

ಜಿ.ಎಸ್‌. ಪಾಟೀಲ್‌ ಅವರನ್ನು ಹಾಗೂ ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಸಲೀಂ ಅಹ್ಮದ್‌ (Salim Ahmed) ಅವರನ್ನು ಕಾಂಗ್ರೆಸ್‌ ಅಭ್ಯರ್ಥಿಗಳನ್ನಾಗಿ ಘೋಷಿಸಿದೆ.

ಕಾಂಗ್ರೆಸ್‌ ಶಾಸಕ ಟಿ.ಬಿ. ಜಯಚಂದ್ರ (T.B. Jayachandra) ಅವರನ್ನು ವಿಧಾನಸಭೆಯ ಹಂಗಾಮಿ ಸ್ಪೀಕರ್‌ ಆಗಿ ನೇಮಕ ಮಾಡಲಾಗಿದ್ದು, ವಿಧಾನ ಪರಿಷತ್ತಿನ ಹಂಗಾಮಿ ಸಭಾಪತಿಯಾಗಿ ಪುಟ್ಟಣ್ಣ ಕಾರ್ಯನಿರ್ವಹಿಸಲಿದ್ದಾರೆ.

ವಿಧಾನ ಪರಿಷತ್‌ ಸಭಾಪತಿ ಚುನಾವಣೆ ಶುಕ್ರವಾರ ನಡೆಯಲಿದ್ದು, ಸಲೀಂ ಅಹ್ಮದ್‌ ಅವರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ.

ಹೀಗಾಗಿ ಈ ಅಧಿವೇಶನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ರಾಜಕೀಯ ಸಂಘರ್ಷದ ಜೊತೆಗೆ, ಹಲವು ಸಾಂವಿಧಾನಿಕ ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳೂ ನಡೆಯಲಿವೆ.

ಒಟ್ಟಾರೆ, ಪ್ರಮುಖ ಹಗರಣಗಳ ಆರೋಪಗಳು, ಅಭಿವೃದ್ಧಿ ಯೋಜನೆಗಳ ಪ್ರಶ್ನೆಗಳು ಹಾಗೂ ರಾಜಕೀಯ ವಿಚಾರಗಳ ನಡುವೆ ಈ ಬಾರಿಯ ಮುಂಗಾರು ಅಧಿವೇಶನ ರಾಜ್ಯ ರಾಜಕೀಯದಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.

ಇದನ್ನು ಓದಿ : https://vijayatimes.com/karnataka-bandh-updates/

Tags: bengalurubjpCongressJDSMonsoonpoliticssession

Related News

ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಕೇಂದ್ರಗಳ ಮೇಲೆ ಆಹಾರ ಇಲಾಖೆ ದಾಳಿ: 1.38 ಕೋಟಿ ರೂ. ಮೌಲ್ಯದ ಆಹಾರ ಉತ್ಪನ್ನ ವಶ
ಪ್ರಮುಖ ಸುದ್ದಿ

ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಕೇಂದ್ರಗಳ ಮೇಲೆ ಆಹಾರ ಇಲಾಖೆ ದಾಳಿ: 1.38 ಕೋಟಿ ರೂ. ಮೌಲ್ಯದ ಆಹಾರ ಉತ್ಪನ್ನ ವಶ

September 8, 2026
ಓಲಾ, ಉಬರ್ ಸೇರಿ ಎಲ್ಲಾ ಕ್ಯಾಬ್‌ಗಳಿಗೆ ಹೊಸ ರೂಲ್ಸ್: ಡಿಜಿಟಲ್ ಮೀಟರ್ ಕಡ್ಡಾಯ
ಪ್ರಮುಖ ಸುದ್ದಿ

ಓಲಾ, ಉಬರ್ ಸೇರಿ ಎಲ್ಲಾ ಕ್ಯಾಬ್‌ಗಳಿಗೆ ಹೊಸ ರೂಲ್ಸ್: ಡಿಜಿಟಲ್ ಮೀಟರ್ ಕಡ್ಡಾಯ

September 8, 2026
LPG ಗ್ರಾಹಕರಿಗೆ ಗುಡ್ ನ್ಯೂಸ್: ಸಿಲಿಂಡರ್ ಬುಕಿಂಗ್ ನಿಯಮ ಸಡಿಲಿಕೆ, ಇನ್ಮುಂದೆ 25 ದಿನಕ್ಕೆ ಮತ್ತೊಂದು ಸಿಲಿಂಡರ್
ದೇಶ-ವಿದೇಶ

LPG ಗ್ರಾಹಕರಿಗೆ ಗುಡ್ ನ್ಯೂಸ್: ಸಿಲಿಂಡರ್ ಬುಕಿಂಗ್ ನಿಯಮ ಸಡಿಲಿಕೆ, ಇನ್ಮುಂದೆ 25 ದಿನಕ್ಕೆ ಮತ್ತೊಂದು ಸಿಲಿಂಡರ್

September 8, 2026
ಅಮೆರಿಕದ ಎಚ್ಚರಿಕೆಯ ನಡುವೆಯೂ ಭಾರತ-ಇರಾನ್ ಸ್ನೇಹ ಗಟ್ಟಿ; ಚಬಹಾರ್ ಬಂದರು, ಬ್ರಿಕ್ಸ್ ಸಭೆಯತ್ತ ಎಲ್ಲರ ಚಿತ್ತ
ದೇಶ-ವಿದೇಶ

ಅಮೆರಿಕದ ಎಚ್ಚರಿಕೆಯ ನಡುವೆಯೂ ಭಾರತ-ಇರಾನ್ ಸ್ನೇಹ ಗಟ್ಟಿ; ಚಬಹಾರ್ ಬಂದರು, ಬ್ರಿಕ್ಸ್ ಸಭೆಯತ್ತ ಎಲ್ಲರ ಚಿತ್ತ

September 8, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.