ಬೆಂಗಳೂರು, ಮೇ. 28: ಲಾಕ್‌ಡೌನ್‌ನಿಂದಾಗಿ ರಾಜ್ಯ ಸರ್ಕಾರಿ ಸ್ವಾಮ್ಯದ ನಂದಿನಿ ಹಾಲು ಮಾರಾಟ ಕುಸಿತಗೊಂಡಿರುವ ಹಿನ್ನೆಲೆಯಲ್ಲಿ ರೈತರಿಂದ ಎರಡು ದಿನ ಹಾಲು ಖರೀದಿ ಸ್ಥಗಿತಗೊಳಿಸಲು ಕೆಎಂಎಫ್ ಚಿಂತನೆ ನಡೆಸಿದೆ.
ರೈತರಿಂದ ಖರೀದಿಸಿರುವ ಹಾಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ದಿನಕ್ಕೆ 88 ಲಕ್ಷ ಲೀಟರ್ ಸಂಗ್ರಹವಾಗುತ್ತಿದೆ. ಈಗ ನಿತ್ಯ 35 ಲಕ್ಷ ಲೀಟರ್ ಹೆಚ್ಚುವರಿ ಸಂಗ್ರಹವಾಗುತ್ತಿದ್ದು ಇದನ್ನು ಹಾಲಿನ ಪುಡಿಯಾಗಿ ಕೆಎಂಎಫ್ ಪರಿವರ್ತಿಸುತ್ತಿದೆ.
ಪರಿವರ್ತನಗೆ ಇರುವ ಸಾಮರ್ಥ್ಯ ಮೀತಿ ಮೀರಿರುವ ಹಿನ್ನೆಲೆಯ್ಲಲಿ ಎರಡು ದಿನ ಹಾಲು ಖರೀದಿ ಮಾಡಲು ಕೆಎಂಎಫ್ ಚಿಂತನೆ ನಡೆಸಿದೆ.