
Dubai: ಮುಕೇಶ್ ಅಂಬಾನಿಯವರ(Mukesh Ambani) ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ದುಬೈನಲ್ಲಿ $80 ಮಿಲಿಯನ್ ಮೌಲ್ಯದ(expensive) ಬೀಚ್ ಸೈಡ್ ವಿಲ್ಲಾವನ್ನು ಅಂಬಾನಿಯವರ ಕಿರಿಯ ಮಗ ಅನಂತ್‌ಗಾಗಿ ಖರೀದಿಸಿದೆ ಎನ್ನಲಾಗಿದೆ.
ಪಾಮ್ ಜುಮೇರಾದಲ್ಲಿರುವ ಈ ಆಸ್ತಿಯನ್ನು ವರ್ಷದ ಆರಂಭದಲ್ಲಿ ಅಂಬಾನಿ ಅವರ ಕಿರಿಯ ಮಗ ಅನಂತ್‌ಗಾಗಿ (Ananat) ಖರೀದಿಸಲಾಗಿದ್ದು, ಇದರ ವಹಿವಾಟು ಖಾಸಗಿಯಾಗಿರುವುದರಿಂದ ಇದನ್ನು ಗೌಪ್ಯವಾಗಿಡಲಾಗಿದೆ.
ಪಾಮ್ ಜುಮೇರಾದಲ್ಲಿರುವ ಈ ಮನೆಯೂ ಪಾಮ್-ಆಕಾರದ ಕೃತಕ ದ್ವೀಪಸಮೂಹದ ಉತ್ತರ (North)ಭಾಗದಲ್ಲಿದೆ. ಮನೆಯಲ್ಲಿ 10 ಮಲಗುವ ಕೋಣೆಗಳು, ಖಾಸಗಿ ಸ್ಪಾ, ಒಳಾಂಗಣ ಮತ್ತು ಹೊರಾಂಗಣ ಪೂಲ್‌ಗಳನ್ನು ಹೊಂದಿದೆ. https://vijayatimes.com/culprits-must-be-sent-to-jail/
ಇನ್ನು ಬ್ರಿಟಿಷ್ ಫುಟ್ಬಾಲ್ ಆಟಗಾರ ಡೇವಿಡ್ ಬೆಕ್‌ಹ್ಯಾಮ್ ಅವರ ಪತ್ನಿ ವಿಕ್ಟೋರಿಯಾ (Victoriya)ಮತ್ತು ಬಾಲಿವುಡ್ ಮೆಗಾಸ್ಟಾರ್ ಶಾರುಖ್ ಖಾನ್ (SHARUKH KHAN)ಅವರು ಅಂಬಾನಿ ಅವರ ಹೊಸ ಮನೆಯ ನೆರೆಹೊರೆವರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಇನ್ನು ಬ್ಲೂಮ್‌ಬರ್ಗ್ (Blueburg) ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಅಂಬಾನಿಯ $93.3 ಬಿಲಿಯನ್ ಸಂಪತ್ತಿನ ಮೂವರು ವಾರಸುದಾರರಲ್ಲಿ ಅನಂತ್ ಕೂಡಾ ಒಬ್ಬರು.
ವಿಶ್ವದ 11 ನೇ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿಯವರಿಗೆ ಈಗ 65 ವರ್ಷ ವಯಸ್ಸಾಗಿದ್ದು, ತಮ್ಮ ಇಡೀ ಆಸ್ತಿಯನ್ನು ತಮ್ಮ ಇಬ್ಬರು ಗಂಡು ಮಕ್ಕಳು ಮತ್ತು ಒರ್ವ ಹೆಣ್ಣು ಮಗಳಿಗೆ ಹಸ್ತಾಂತರ ಮಾಡುವ ಪ್ರಕ್ರಿಯೆಯನ್ನು ನಿಧಾನವಾಗಿ ಆರಂಭಿಸಿದ್ದಾರೆ.
https://vijayatimes.com/culprits-must-be-sent-to-jail/
ಇನ್ನು ಮುಕೇಶ್ ಅಂಬಾನಿಯವರ ಅಧಿಕೃತ ಮುಂಬೈ (Mumbai)ನಿವಾಸ ಆಂಟಿಲಿಯಾ, ಮೂರು ಹೆಲಿಪ್ಯಾಡ್‌ಗಳು, 168 ಕಾರುಗಳಿಗೆ ಪಾರ್ಕಿಂಗ್, 50 ಆಸನಗಳ ಚಲನಚಿತ್ರ ಮಂದಿರ,
ಭವ್ಯವಾದ ಬಾಲ್ ರೂಂ ಮತ್ತು ಒಂಬತ್ತು ಎಲಿವೇಟರ್‌ಗಳೊಂದಿಗೆ 27 ಅಂತಸ್ತಿನ ಗಗನಚುಂಬಿ ಕಟ್ಟಡವಾಗಿದೆ. ಇದರ ಮೌಲ್ಯ ಸುಮಾರು 8000 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇನ್ನು ಕಳೆದ ವರ್ಷ,
ರಿಲಯನ್ಸ್ ಯುಕೆಯಲ್ಲಿ ಸ್ಟೋಕ್ ಪಾರ್ಕ್ ಲಿಮಿಟೆಡ್ ಅನ್ನು ಖರೀದಿಸಲು $79 ಮಿಲಿಯನ್ ಖರ್ಚು ಮಾಡಿದ್ದು, ಇದು ಜಾರ್ಜಿಯನ್ ಯುಗದ ಮಹಲುಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ.
.