ನವದೆಹಲಿ : ಲೋಕಸಭೆಯಲ್ಲಿ(Loksabha) ಬೆಲೆ ಏರಿಕೆ ಮತ್ತು ಹಣದುಬ್ಬರ(Financial Crisis) ಕುರಿತು ಭಾರೀ ಚರ್ಚೆ ನಡೆಯುತ್ತಿತ್ತು. ದೇಶದಲ್ಲಿ ಜನರಿಗೆ ಕೊಳ್ಳುವ ಶಕ್ತಿ ಇಲ್ಲ ಎಂದು ತೃಣಮೂಲ ಕಾಂಗ್ರೆಸ್ನ(TMC) ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಭಾಷಣ ಮಾಡುತ್ತಿದ್ದರು. ಹೀಗೆ ಮಾತನಾಡುತ್ತಿರುವಾಗಲೇ ಅವರ ಪಕ್ಕದಲ್ಲೇ ಕುಳಿತಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ(Mahaua Moitra) ಅವರು ತಮ್ಮ ಲೂಯಿ ವಿಟಾನ್ ಬ್ಯಾಗ್ ಅನ್ನು ಮೇಜಿನ ಕೆಳಗೆ ಮರೆಮಾಚಿದ್ದಾರೆ.

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ತಮ್ಮ ಲೂಯಿ ವಿಟಾನ್ ಬ್ಯಾಗ್ ಅನ್ನು ಮೇಜಿನ ಕೆಳಗೆ ಮರೆಮಾಚುತ್ತಿರುವ ವಿಡಿಯೋ(Video) ಇದೀಗ ಸಾಮಾಜಿಕ ಜಾಲತಾಣದಲ್ಲಿ(Social Media) ಭಾರೀ ವೈರಲ್(Viral) ಆಗಿದೆ. ಈ ವಿಡಿಯೋವನ್ನು ಅಜಿತ್ ದತ್ತಾ ಎನ್ನುವವರು ಟ್ವಿಟ್ಟರ್ನಲ್ಲಿ(Tweeter) ಹಂಚಿಕೊಂಡಿದ್ದು, “ಮೆಹೆಂಗೈ” (ಬೆಲೆ ಏರಿಕೆ) ವಿಷಯವು ಉದ್ಭವಿಸುತ್ತಿದ್ದಂತೆ, ಯಾರೋ ಒಬ್ಬರ ಲೂಯಿ ವಿಟಾನ್ ಬ್ಯಾಗ್ ತ್ವರಿತವಾಗಿ ಬೆಂಚ್ ಅಡಿಯಲ್ಲಿ ಜಾರುತ್ತದೆ” ಎಂದು ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇನ್ನು ಈ ವಿಡಿಯೋ ಎಲ್ಲೆಡೆ ಭಾರೀ ವೈರಲ್ ಆಗುತ್ತಿದ್ದು, #LouisVuitton ಹ್ಯಾಷ್ಟ್ಯಾಗ್(Hashtag) ಟ್ವೀಟರ್ ಟ್ರೆಂಡ್ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.
ಬೆಲೆ ಏರಿಕೆ ಕುರಿತು ಮಾತನಾಡುವಾಗ ಭಾರೀ ಬೆಲೆಯ ಪರ್ಸ್ ಗೋಚರವಾಗುತ್ತದೆ. ಜನರ ಕೊಳ್ಳುವ ಶಕ್ತಿ ಕೇವಲ ಕೆಲವೇ ಜನರಲ್ಲಿ ಸೇರಿಕೊಂಡಿದೆ ಎಂದು ಅನೇಕರು ವ್ಯಂಗ್ಯವಾಡಿದ್ದಾರೆ. ಇನ್ನು ತೃಣಮೂಲ ಕಾಂಗ್ರೆಸ್ ಸಂಸದೆ ಮೊಹುವಾ ಮೊಯಿತ್ರಾ ಅವರು ಮುಚ್ಚಿಟ್ಟಿರುವ ಲೂಯಿ ವಿಟಾನ್ ಕಂಪನಿಯ ಪರ್ಸ್ನ ಬೆಲೆ ಅಂದಾಜು 2 ಲಕ್ಷ ರೂ. ಎನ್ನಲಾಗಿದೆ.