ರಾಜ್ಯದಲ್ಲಿ ಪಿಎಸ್ಐ(PSI) ಪರೀಕ್ಷೆಯಲ್ಲಿ ನಡೆದ ಅಕ್ರಮ, ಕನಸು ಹೊತ್ತು ಬಂದ ಸಾವಿರಾರು ಅಭ್ಯರ್ಥಿಗಳಿಗೆ ಇಂದು ಮೋಸವಾಗಿದೆ. ಈ ಹಗರಣದ ಪ್ರಮುಖ ಕಿಂಗ್ ಪಿನ್ ಆದ ಮಾಜಿ ಬಿಜೆಪಿ ಮಹಿಳಾ ಅಧ್ಯಕ್ಷೆಯಾಗಿದ್ದ ದಿವ್ಯಾ ಹಾಗರಗಿ(Divya Hagaragi) 18 ದಿನಗಳ ಬಳಿಕ ಇಂದು ಸಿಐಡಿ(CID) ಅಧಿಕಾರಿಗಳಿಂದ ಬಂಧನವಾಗಿದ್ದಾರೆ.

ಪಿಎಸ್ಐ ಪರೀಕ್ಷೆಯಲ್ಲಿ ಈ ಹಿಂದೆಂದೂ ನಡೆಯದ ದೊಡ್ಡ ಹಗರಣ ಈಗ ನಡೆದಿದ್ದು, ಇಡೀ ರಾಜ್ಯದ ಜನತೆ ದಿವ್ಯಾ ಹಾಗರಗಿ ಮತ್ತು ಸಂಬಂಧಿತ ಆರೋಪಿಗಳಿಗೆ ಇಡೀ ಶಾಪವಾಕಿದ್ದಾರೆ. ಸದ್ಯ ಈ ಕುರಿತು ರಾಜಕೀಯ ವಲಯದಲ್ಲಿ ವಾದ-ವಿವಾದಗಳು ಹುಟ್ಟಿಕೊಂಡಿದ್ದು, ಕಾಂಗ್ರೆಸ್ ದಿವ್ಯಾ ಹಾಗರಗಿ ಕೇಸ್ ಸುಲಭವಾಗಿ ಮಾಸಿ ಹೋಗಬಾರದು, ಆಕೆಗೆ ತಕ್ಕ ಶಿಕ್ಷೆ ವಿಧಿಸಬೇಕೇ ವಿನಃ ಯಾವುದೇ ರೀತಿಯಲ್ಲೂ ರಿಯಾಯಿತಿ ನೀಡಬಾರದು ಎಂದು ಆಗ್ರಹಿಸಿದರೆ, ಇತ್ತ ಬಿಜೆಪಿ ತನಿಖೆ ಚುರುಕಾಗಿ ನಡೆಯಲು ನಾವು ಮೂಲ ಕಾರಣ, ಕೆಲವರಿಗೆ ಸುಖಾಸುಮ್ಮನೆ ರಂಗೋಲಿ ಕೆಳಗೆ ತೂರುವ ಪ್ರವೃತ್ತಿ ಇದೆ ಎಂದು ಹೇಳಿದೆ.
ಸದ್ಯ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರು, ವಿದ್ಯಾರ್ಥಿಗಳಿಗೆ ಮೋಸವಾಗಿದೆ! ಹೀಗಾಗಿ ನೇಮಕಾತಿ ಅಂತ್ಯಗೊಳಿಸಿದ್ದೇವೆ ಹಾಗೂ ಮರು ಪರೀಕ್ಷೆ ನೀಡುತ್ತೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸೂಕ್ತ ತನಿಖೆಯಿಂದ ದಿವ್ಯಾ ಹಾಗರಗಿ ಬಂಧನವಾಗಿರುವುದು ಖುಷಿ ಸಂಗತಿ.

ಪಿಎಸ್ಐ ಪರೀಕ್ಷೆ ಹಗರಣದಿಂದ ವಿದ್ಯಾರ್ಥಿಗಳಿಗೆ ಮೋಸವಾಗಿದೆ, ಯಾವುದೇ ಕಾರಣಕ್ಕೂ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಾರದು ಎಂದು ಹೇಳಿದ್ದಾರೆ.