ಹಳೇ ಹುಬ್ಬಳ್ಳಿಯಲ್ಲಿ(Hubbali) ನಡೆದ ಕೋಮು ಘರ್ಷಣೆ(Fight) ದಿನದಿಂದ ದಿನಕ್ಕೆ ವಿಭಿನ್ನ ರೀತಿಯ ತಿರುವು ಪಡೆದುಕೊಳ್ಳುತ್ತಿದೆ! ಹೌದು, ಇದಕ್ಕೆ ಸಾಕ್ಷಿಯಂತೆ ರಾಜಕೀಯ ಅಸ್ತ್ರ, ಬ್ರಹ್ಮಾಸ್ತ್ರಗಳ ಮಹಾಪೂರವೇ ಹರಿದುಬರುತ್ತಿದೆ.

ಬಿಜೆಪಿ ಪಕ್ಷ(BJP Party) ಎಂದು ಕಾಂಗ್ರೆಸ್(Congress) ಗುರಿಯಾಗಿಸಿದರೆ, ಇತ್ತ ಕಾಂಗ್ರೆಸ್ ಪಕ್ಷ, ಇಷ್ಟೆಲ್ಲಾ ಕೋಮು ಗಲಭೆ ಉಂಟಾಗಲು, ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಲು ಬಿಜೆಪಿ ಷಡ್ಯಂತ್ರವೇ ಕಾರಣ ಎಂದು ಬೆರಳು ಮಾಡಿ ತೋರಿಸಿದೆ. ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್(WhatsApp) ಬಗ್ಗೆ ಪೊಲೀಸರು ಮಾತನಾಡಿ, ಗಲಭೆಗೆ ಸಂಬಂಧಿಸಿದ 100ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ಅವರಲ್ಲಿ 80ಕ್ಕೂ ಜನರನ್ನು ಬಂಧಿಸಿದ್ದಾರೆ. ಈ ಪ್ರಕರಣ ಕುರಿತು ತನಿಖೆಯನ್ನು ಕೂಡ ಕೈಗೊಂಡಿದ್ದೇವೆ! ಆರೋಪಿಗಳಿಗೆ ಸೂಕ್ತ ಕ್ರಮದಡಿ ಶಿಕ್ಷೆ ವಿಧಿಸಲಾಗುವುದು ಎಂದು ಪೊಲೀಸರು ಹೇಳಿಕೆ ನೀಡಿದರು.
ರಾಜಕೀಯ ಆರೋಪಗಳ ಕುರಿತು ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಈ ಗಲಭೆ ಬಗ್ಗೆ ತಕ್ಕ ರೀತಿಯಲ್ಲಿ ತನಿಖೆ ಆರಂಭಿಸಲು ಈಗಾಗಲೇ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಈ ಗಲಭೆ ಹಿಂದೆ ಯಾವ ನಾಯಕರು ಇದ್ದಾರೆ? ಯಾರ ಕೈವಾಡವಿದೆ? ಎಂಬ ಎಲ್ಲಾ ವಿಷಯವನ್ನು ಶೀಘ್ರದಲ್ಲಿ ತಿಳಿದು ನಿಮ್ಮ ಮುಂದೆ ಬಹಿರಂಗ ಪಡಿಸುತ್ತೇವೆ ಎಂದು ಖಡಕ್ ಆಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸದ್ಯ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್-ಬಿಜೆಪಿ ಮಾತಿನ ಜಟಾಪಟಿ ನಡೆಸುತ್ತಿದ್ದು,
ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಟ್ವೀಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಬಂದ ತಕ್ಷಣವೇ ಏಕಾಏಕಿ ಗುಂಪು ಸೇರಿದ್ದು ಹೇಗೆ? ಅಷ್ಟು ದೊಡ್ಡ ಪ್ರಮಾಣದಲ್ಲಿ ಕಲ್ಲುಗಳ ರಾಶಿಯನ್ನು ತಂದು ಹಾಕಿದವರು ಯಾರು? ಯಾವ ಉದ್ದೇಶಕ್ಕಾಗಿ ಇವುಗಳನ್ನು ಮುಂಚಿತವಾಗಿ ಸಂಗ್ರಹಿಸಲಾಗಿತ್ತು” ಎಂದು ಬರೆದು ಪೋಸ್ಟ್ ಮಾಡಿ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದವರು ಮಾಡಿದ್ದು ಎಂದು ಹೇಳಿದ್ದಾರೆ!