ಹಳೇ ಹುಬ್ಬಳ್ಳಿಯಲ್ಲಿ(Hubbali) ನಡೆದ ಘಟನೆ ದಿನದಿಂದ ದಿನಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಹೌದು, ರಾತ್ರಿ ವೇಳೆಯೊಳಗೆ ಹಳೇ ಹುಬ್ಬಳ್ಳಿ ಅಕ್ಷರಶಃ ಗಲಭೆಯಿಂದ ನಾಶವಾಗಿತ್ತು.

ರಸ್ತೆಯ ಬದಿಯಲ್ಲಿದ್ದ ಮುಸ್ಲಿಂ ಕಲ್ಲಂಗಡಿ ವ್ಯಾಪಾರಿಯ ಅಂಗಡಿಯನ್ನು ಧ್ವಂಸ ಮಾಡಿ, ಕಲ್ಲು ತೂರಾಟ ನಡೆಸಿ, ಪೊಲೀಸರ ಗಸ್ತು ತಿರುಗುವಿಕೆಯ ವಾಹನಗಳನ್ನು ಹೊಡೆದು ನಾಶ ಮಾಡಿರುವ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ! ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೊಲೀಸರು ಈಗಾಗಲೇ 100 ಜನರನ್ನು ವಶಕ್ಕೆ ಪಡೆದು ತನಿಖೆ ನಡೆಸಿ ಅವರಲ್ಲಿ 80ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಕ್ಕ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದು, ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ರಾಜಕೀಯ ಪ್ರಹಾರ ಬಿರುಸಿನಿಂದ ಸಾಗುತ್ತಿದ್ದು, ಬಿಜೆಪಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಮಾತಿನ ಜಿದ್ದಾಜಿದ್ದಿ ನಡೆಯುತ್ತಿದೆ! ಕಾಂಗ್ರೆಸ್ ಆರೋಪಗಳನ್ನು ತಳ್ಳಿಹಾಕದೆ, ಕೌಂಟರ್ ಮೇಲೆ ಕೌಂಟರ್ ಕೊಡುತ್ತಿರುವ ಬಿಜೆಪಿ ಶಾಸಕ(BJP MLA) ಎಂ.ಪಿ ರೇಣುಕಾಚಾರ್ಯ(MP Renukacharya) ಮೊನ್ನೆಯಷ್ಟೇ ಟ್ವೀಟ್ ಮಾಡಿ ಕೇವಲ ವಾಟ್ಸಾಪ್ ಸ್ಟೇಟಸ್ ಹಾಕಿದ ತಕ್ಷಣವೇ ರಾಶಿ ರಾಶಿ ಕಲ್ಲನ್ನು ತಂದು ಹಾಕಿದವರು ಯಾರು?
ಅಷ್ಟೊಂದು ಕಲ್ಲು ಎಲ್ಲಿಂದ ಬಂತು? ಇದು ಕಾಂಗ್ರೆಸ್ನವರ ಷಡ್ಯಂತ್ರ ಎಂದು ಪರೋಕ್ಷವಾಗಿ ಮಾತಿನ ಚಾವಟಿ ಬೀಸಿದ್ದರು. ಸದ್ಯ ಅದೇ ರೀತಿ ಮತ್ತೊಮ್ಮೆ ಟ್ವೀಟ್ ಮಾಡಿರುವ ರೇಣುಕಾಚಾರ್ಯ, ” ಹಿಂದೂ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಎಲ್ಲರನ್ನೂ ಭಾರತಮಾತೆಯ ಮಕ್ಕಳಾಗಿ ಒಂದೆ ತಾಯಿ ಮಕ್ಕಳಂತೆ ಕಾಣುತ್ತೇವೆ ನಾವು. ನಮ್ಮ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣ ಎಂದು ಮಾಡಿಲ್ಲ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದು, ಇದಕ್ಕಾಗಿ ಸಮಾಜವನ್ನ ವಿಕೃತ ಮನಸ್ಸಿನಿಂದ ವಿಂಗಡಣೆ ಮಾಡುತ್ತಿದೆ” ಎಂದು ಟ್ವೀಟ್ ಮಾಡುವ ಮುಖೇನ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ವಿರುದ್ಧ ಕತ್ತಿ ಬೀಸಿದ್ದಾರೆ!