ಭಾನುವಾರ ಹಳೇ ಹುಬ್ಬಳ್ಳಿಯಲ್ಲಿ(Hubbali) ನಡೆದ ಘಟನೆ ಸದ್ಯ ಇಡೀ ರಾಜ್ಯದಲ್ಲೇ ದೊಡ್ಡ ಸಂಚಲವನ್ನೇ ಹುಟ್ಟುಹಾಕಿದೆ. ಈ ಬಗ್ಗೆ ಬಿಜೆಪಿ ಶಾಸಕ(BJP MLA) ಎಂ.ಪಿ ರೇಣಕಾಚಾರ್ಯ(MP Renukacharya) ವಿವಾದಾತ್ಮಕ ಹೇಳಿಕಯೊಂದನ್ನು ನೀಡಿದ್ದಾರೆ. ಹೌದು, ಹಳೇ ಹುಬ್ಬಳಿಯಲ್ಲಿ ಕೇವಲ ಒಂದು ವಾಟ್ಸಾಪ್ ಸ್ಟೇಟಸ್ ಹುಟ್ಟುಹಾಕಿದ ಗಲಾಟೆಗೆ ಹುಬ್ಬಳ್ಳಿ ಅಕ್ಷರಶಃ ತತ್ತರಿಸಿ ಹೋಯಿತು.

ಪ್ರಚೋದನಕಾರಿ ಪೋಸ್ಟ್ ಸೃಷ್ಟಿಸಿದ ಗಲಭೆಯಿಂದ ನಗರದಲ್ಲಿ ಅಂಗಡಿಗಳು ಸೇರಿದಂತೆ ದೇವಸ್ಥಾನ, ಪೊಲೀಸರ ಗಸ್ತು ತಿರುಗುವಿಕೆಯ ವಾಹನಗಳನ್ನು ಪುಡಿ ಪುಡಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 100ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದ ಪೊಲೀಸರು, ತನಿಖೆಗೆ ಒಳಪಡಿಸಿ ಅವರಲ್ಲಿ 88 ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಏಪ್ರಿಲ್ 18 ಸೋಮವಾರ ಇಂದು ಬೆಳಗ್ಗೆ 10:30ಕ್ಕೆ ಪೊಲೀಸರು ಆರೋಪಿಗಳನ್ನು ನ್ಯಾಯಲಯಕ್ಕೆ ಒಪ್ಪಿಸಿದ್ದಾರೆ.
ಈ ಪ್ರಕರಣದಿಂದ ಪರಾರಿಯಾಗಿರುವ ಮತ್ತಷ್ಟು ಆರೋಪಿಗಳ ಶೋಧಕಾರ್ಯವನ್ನು ಪೊಲೀಸರು ಈಗಾಗಲೆ ಕೈಗೊಂಡಿದ್ದಾರೆ ಎನ್ನಲಾಗಿದೆ. ಹಳೇ ಹುಬ್ಬಳ್ಳಿ ಘಟನೆಯನ್ನು ಕೆಲವರು ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿಗೆ ಹೋಲಿಕೆ ಮಾಡುತ್ತಿದ್ದರೆ, ಮತ್ತೊಂದೆಡೆ ರಾಜಕೀಯ ವಲಯದಲ್ಲಿ ಒಬ್ಬರ ಮೇಲೆ ಒಬ್ಬರಂತೆ ಆರೋಪಕ್ಕೆ ಪ್ರತ್ಯಾರೋಪ ಮಾಡುವಲ್ಲಿ ಮುಂದಾಗಿದ್ದಾರೆ. ಇದೇ ಸಾಲಿನಲ್ಲಿ ಬಿಜೆಪಿ ಶಾಸಕ ರೇಣುಕಾಚಾರ್ಯ ಕೂಡ ಪ್ರಮುಖರಾಗಿದ್ದು,
“ರಾಜಕೀಯ ಲಾಭಕ್ಕಾಗಿ ಒಂದು ವರ್ಗವನ್ನು ವಹಿಸಿಕೊಂಡ ಮಾತನಾಡುವ ಸರ್ವ ಜನಾಂಗದ ಶಾಂತಿಯ ತೋಟದ ಮಾಲಿಕ ಹುಬ್ಬಳ್ಳಿಯಲ್ಲಿ ನಡೆದ ಘಟನೆಯ ಹೊಣೆಯನ್ನು ಹೊರುತ್ತಾರೆಯೇ? ಎಂದು ಪರೋಕ್ಷವಾಗಿ ಟ್ವೀಟ್ ಮೂಲಕ ಹೇಳಿಕೆ ನೀಡಿದ್ದಾರೆ.