Mpox Virus: Increased monkeypox apprehension in the state, Bengaluru, Mangalore hospital selected for treatment of suspects
Bengaluru: ಹಲವು ದೇಶಗಳಲ್ಲಿ ಮಂಕಿಪಾಕ್ಸ್ (Mpox) ಪತ್ತೆ ಹಿನ್ನೆಲೆ ರಾಜ್ಯದಲ್ಲಿ ಆತಂಕ ಹೆಚ್ಚಾಗಿದ್ದು, ಕರ್ನಾಟಕ ಆರೋಗ್ಯ ಇಲಾಖೆ (Karnataka Health Department) ಅಲರ್ಟ್ ಆಗಿದೆ. ಏರ್ಪೋರ್ಟ್ಗಳಲ್ಲಿ ಕಟ್ಟೆಚ್ಚರ ವಹಿಸಲು ಸುತ್ತೋಲೆ ಹೊರಡಿಸಿದೆ. ಜೊತೆಗೆ ಮಂಕಿಪಾಕ್ಸ್ ಶಂಕಿತರ ಚಿಕಿತ್ಸೆಗೆಂದು ಬೆಂಗಳೂರಿನ ಇಂದಿರಾನಗರದ ಆಸ್ಪತ್ರೆ (Indiranagar Hospital) ಮತ್ತು ಮಂಗಳೂರಿನ ವೆನ್ಲಾಕ್ (Wenlock) ಆಸ್ಪತ್ರೆಯನ್ನು ಗುರುತಿಸಲಾಗಿದೆ.
ಒಂದುವೇಳೆ ಮಂಕಿಪಾಕ್ಸ್ ಕಂಡು ಬಂದ್ರೆ 21 ದಿನಗಳ ಕಾಲ ಕ್ವಾರಂಟೈನ್ (Quarantine) ಮಾಡಬೇಕು ಎಂದು ಖಡಕ್ ಸೂಚನೆ ನೀಡಲಾಗಿದೆ. ರಾಜ್ಯ ಆರೋಗ್ಯ ಆಯುಕ್ತ ಡಿ ರಂದೀಪ್ ಅವರು ಮಂಗನ ಕಾಯಿಲೆಯ ಶಂಕಿತ ಪ್ರಕರಣಗಳ ಬಗ್ಗೆ ನಿಗಾ ಇಡಲು ಸೂಚಿಸಿದ್ದಾರೆ. ವಿಮಾನ ನಿಲ್ದಾಣಗಳು, ಬಂದರು ಮತ್ತು ರಾಜ್ಯದ ಎಲ್ಲಾ ಕಡೆಗಳ ಪ್ರವೇಶ ಕೇಂದ್ರಗಳ ವ್ಯವಸ್ಥಾಪಕ ಅಧಿಕಾರಿಗಳಿಗೆ ಎಚ್ಚರ ವಹಿಸಲು ನಿರ್ದೇಶನ ನೀಡಿದ್ದಾರೆ.
ಶಂಕಿತರನ್ನ ಗುರುತಿಸಿ ಸ್ಕ್ರೀನಿಂಗ್ (Screening) ಮಾಡುವಂತೆ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇಡಲು ಸೂಚನೆ ನೀಡಲಾಗಿದೆ. ಆರೋಗ್ಯ ಇಲಾಖೆ ನಿನ್ನೆ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ. ಹೈರಿಸ್ಕ್ ದೇಶಗಳಿಂದ ಬರುವವರ ಮೇಲೆ ಎಚ್ಚರವಹಿಸಲು ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಯಾವುದೇ ಶಂಕಿತ ಪ್ರಕರಣಗಳು ಕಂಡು ಬಂದರೆ ಅವರನ್ನು ಐಸೋಲೇಟ್ (Isolate) ಮಾಡುವುದು, ಚಿಕಿತ್ಸೆ ನೀಡುವುದರ ಬಗ್ಗೆ ರಾಜ್ಯದ ಆರೋಗ್ಯ ಸಿಬ್ಬಂದಿ ಗಮನಹರಿಸುವಂತೆ ಸೂಚಿಸಿದ್ದಾರೆ.
ಮಂಕಿಪಾಕ್ಸ್ ರೋಗಲಕ್ಷಣಗಳು
ಮೊದಲ ಐದು ದಿನ ಜ್ವರ, ಶೀತ ಮತ್ತು ಬೆವರು, ತಲೆನೋವು, ಸ್ನಾಯು ನೋವು, ಗಂಟಲು ನೋವು, ಕೆಮ್ಮು
ಜ್ವರ ಪ್ರಾರಂಭವಾದ ಮೂರು ದಿನಗಳ ನಂತರ ರ್ಯಾಶಸ್ ಕಂಡುಬರುತ್ತದೆ
ಸಾಮಾನ್ಯವಾಗಿ ಮುಖ, ಅಂಗೈ ಮತ್ತು ಅಡಿಭಾಗದ ಮೇಲೆ ರ್ಯಾಶಸ್ಗಳಾಗಿ ನೋವು ಕಾಣಿಸಿಕೊಳ್ಳುತ್ತದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಮಂಕಿಪಾಕ್ಸ್ ಅನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ‘ಜಾಗತಿಕ ಆರೋಗ್ಯ ತುರ್ತುಸ್ಥಿತಿ’ ಎಂದು ಘೋಷಿಸಿದ ನಂತರ ಹಾಗೂ ಸ್ವೀಡನ್ ಮತ್ತು ಪಾಕಿಸ್ತಾನದಲ್ಲಿ (Sweden And Pakistan) ಪ್ರಕರಣಗಳು ಹೆಚ್ಚಾಗುತ್ತಿರುವ ನಂತರ, ಶಂಕಿತ ಪ್ರಕರಣಗಳಿಗೆ ಸಿದ್ಧರಾಗುವಂತೆ ಕೇಂದ್ರವು ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಭಾರತದಲ್ಲಿ ಪ್ರಸ್ತುತ ಯಾವುದೇ ಸಕ್ರಿಯ ಪ್ರಕರಣಗಳಿಲ್ಲ.
ಶಂಕಿತ ಪ್ರಕರಣದ ಎಲ್ಲಾ ಕ್ಲಿನಿಕಲ್ (Clinical) ಮಾದರಿಗಳನ್ನು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರಿನಲ್ಲಿರುವ ವೈರಸ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯಕ್ಕೆ ಸಾಗಿಸಲಾಗುತ್ತೆ. ಬಳಿಕ ಮಂಕಿಪಾಕ್ಸ್ ದೃಢಪಟ್ಟರೆ ಅವರನ್ನು ಕನಿಷ್ಠ 21 ದಿನಗಳವರೆಗೆ ಅಥವಾ ಸಂಪೂರ್ಣವಾಗಿ ಗುಣವಾಗುವವರೆಗೆ ಪ್ರತ್ಯೇಕವಾಗಿ ಐಸೋಲೇಟ್ ಮಾಡಲಾಗುತ್ತದೆ.
Mpox Virus Outbreak News in Kannada
Bengaluru: In the background of detection of monkeypox (Mpox) in many countries, anxiety has increased in the state and the Karnataka Health Department is on alert. A circular has been issued to maintain strict vigilance at airports. In addition, Indiranagar Hospital in Bangalore and Wenlock Hospital in Mangalore have been identified for the treatment of monkeypox suspects.
Khadak has been instructed that if monkeypox is found, the port should be quarantined for 21 days. State Health Commissioner D Randeep has directed to monitor suspected cases of monkey disease. The managing officers of airports, ports and entry points in all parts of the state have been directed to be vigilant.
Instructions have been given to identify and screen the suspects and to keep an eye on the international passengers. The Health Department said in a circular issued yesterday. Those coming from high-risk countries have been advised to exercise caution. If any suspected cases are found in the state, the health staff of the state has suggested that they should be isolated and treated.
Symptoms of monkeypox
First five days fever, chills and sweats, headache, muscle pain, sore throat, cough
Rashes appear three days after the onset of fever
The pain usually appears as a rash on the face, palms and soles.
Click on this to read important news of the state
After monkeypox was declared a 'global health emergency' by the World Health Organization (WHO) and cases were on the rise in Sweden and Pakistan, the Center directed all states to prepare for suspected cases. There are currently no active cases in India.
All clinical samples of suspected cases are transported to the Virus Research and Diagnostic Laboratory at Bangalore Medical College and Research Institute, Bangalore. Then if monkeypox is confirmed they are isolated separately for at least 21 days or until they are fully cured.