ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಮತ್ತೊಮ್ಮೆ ಎಂ.ಎಸ್ ಧೋನಿ(MS Dhoni) ಅವರ ನಾಯಕತ್ವದಲ್ಲಿ ಸನ್ ರೈಸರ್ಸ್(Sunrisers Hyderbad) ವಿರುದ್ಧ ಭರ್ಜರಿ ಗೆಲುವು ಸಾಧಿಸಿತು.
ಆರಂಭಿಕದಲ್ಲಿ ಬ್ಯಾಟಿಂಗ್ ಶುರು ಮಾಡಿದ ಚೆನೈ, ರುತುರಾಜ್ ಗಾಯಕ್ವಾಡ್ ಮತ್ತು ಕಾನ್ವೇ ಅವರ ಸ್ಪೋಟಕ ಬ್ಯಾಟಿಂಗ್ ದಾಳಿಯಿಂದ 202 ರನ್ ಗುರಿ ತಲುಪುವಲ್ಲಿ ಯಶಸ್ವಿಯಾಯಿತು. ರುತುರಾಜ್ ಗಾಯಕ್ವಾಡ್ ತಮ್ಮ ಶತಕದಿಂದ ವಂಚಿತರಾದರು. ಸನ್ ರೈಸರ್ಸ್ ತಂಡದ ಬ್ಯಾಟ್ಸ್ಮನ್ ಗಳಿಗೆ ಆಕರ್ಷಕವಾಗಿ ಆಡಲು ಬಿಡದೆ ವಿಕೆಟ್ ಗಳನ್ನು ಕಬಳಿಸುವ ಮುಖೇನ ಪಂದ್ಯವನ್ನು ತಮ್ಮ ಕಡೆ ಸೆಳೆಯಿತು ಚೆನೈ ತಂಡ. ಗೆಲುವಿನೊಂದಿಗೆ ರಾರಾಜಿಸಿದ ಸಿಎಸ್ಕೆ ತಂಡಕ್ಕೆ ಮತ್ತೊಂದು ಸಂತಸವೆಂದರೆ ಮೇ 1ರ ಭಾನುವಾರದಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆಡಿದ ಪಂದ್ಯದಲ್ಲಿ ಧೋನಿ ಅವರ ನಾಯಕತ್ವದಲ್ಲಿ ಗೆಲುವು ಪಡೆದಿದ್ದು ಮತ್ತಷ್ಟು ಖುಷಿ ನೀಡಿದೆ.
ಗೆಲುವಿಗೆ ಕಾರಣರಾದ ರುತುರಾಜ್ ಗಾಯಕ್ವಾಡ್ 57 ಎಸೆತಗಳಲ್ಲಿ 6 ಬೌಂಡರಿ ಮತ್ತು ಸಿಕ್ಸರ್ಗಳೊಂದಿಗೆ 99 ರನ್ ಗಳಿಸಿ 18ನೇ ಓವರ್ನಲ್ಲಿ ಟಿ.ನಟರಾಜನ್ಗೆ ಔಟಾಗುವ ಮೂಲಕ ಸಿಎಸ್ಕೆ ತಂಡಕ್ಕೆ ಆಸರೆಯಾದರು. ಸ್ಟೇಡಿಯಂನಲ್ಲಿದ್ದ ಕ್ರಿಕೆಟ್ ಅಭಿಮಾನಿಗಳು, ನಾಯಕ ಸ್ಥಾನದಲ್ಲಿ ನಿಂತು ತಂಡವನ್ನು ಮುನ್ನಡೆಸಿದ ಎಂ.ಎಸ್ ಧೋನಿ ಅವರಿಗೆ ಅವರ ಹೆಸರನ್ನು ಕೂಗುವ ಮೂಲಕ ಪ್ರೋತ್ಸಾಹ ನೀಡಿದರು.