Chennai : ಮುಂಬರುತ್ತಿರುವ ಐಪಿಎಲ್ ಪಂದ್ಯಗಳಿಗೆ ತಯಾರಿ ನಡೆಸುತ್ತಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಅವರ ಅಭ್ಯಾಸದ ಪಂದ್ಯಗಳಲ್ಲಿ ಅವರ ಬೈಸಿಪ್ (ms dhoni new look) ನೋಡಿದ ನೆಟ್ಟಿಗರು ಅಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ.

ನಿಜವಾಗಿಯೂ ಮಹೇಂದ್ರ ಸಿಂಗ್ ಧೋನಿ ಅವರಿಗೆ ವಯಸ್ಸು 41 ಆಗಿದೆಯೇ? ಎಂದು ಅನುಮಾನದಿಂದ ಪ್ರಶ್ನಿಸಿದ್ದಾರೆ.
ಐಪಿಎಲ್ 2023 ರ ಪಂದ್ಯಗಳು ಇದೇ ಮಾರ್ಚ್ 31 ರಿಂದ ಆರಂಭವಾಗಲಿದ್ದು,
ಅಭ್ಯಾಸದ ಪಂದ್ಯಗಳಲ್ಲಿ ಭರ್ಜರಿ ತಯಾರಿ ನಡೆಸುತ್ತಿರುವ ಕ್ಯಾಪ್ಟನ್ ಕೂಲ್(Captain Cool) ಧೋನಿ ಅವರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.
ಧೋನಿ ಅವರ ಆಕರ್ಷಕ ಬ್ಯಾಟಿಂಗ್ ವೈಖರಿಯನ್ನು ನೋಡುತ್ತಿರುವ ಎಂ.ಎಸ್ ಡಿ (MSD)ಅವರ ಅಭಿಮಾನಿಗಳು ಮತ್ತು ನೆಟ್ಟಿಗರು ಸಂತಸ ಮತ್ತು ಆಶ್ಚರ್ಯವನ್ನು ವ್ಯಕ್ತಪಡಿಸುತ್ತಿದ್ದಾರೆ.
೪೧ ವರ್ಷ ವಯಸ್ಸಾದರೂ ಹೇಗೆ ಈ ರೀತಿಯ ಫಿಟ್‌ನೆಸ್ ನಿಭಾಯಿಸುತ್ತಿದ್ದೀರಿ? ಯುವಕರಂತೆ ಆಕರ್ಷಕ ಮೈಕಟ್ಟನ್ನು ಹೇಗೆ ಹೊಂದಿದ್ದೀರಿ? ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಕಮೆಂಟ್ ನಲ್ಲಿ ಹರಿಸಿದ್ದಾರೆ.
ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರು ಐಪಿಎಲ್(IPL) ಪಂದ್ಯದ ಮೊದಲ ಆವೃತ್ತಿಯಿಂದಲೂ ಚೆನೈ ಸೂಪರ್ ಕಿಂಗ್ಸ್(Chennai Super King) ತಂಡದ ನಾಯಕರಾಗಿ ತಂಡವನ್ನು ಅದ್ದೂರಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ.
ಧೋನಿ ಅವರ ನಾಯಕತ್ವದಲ್ಲಿ, ಸಿಎಸ್‌ಕೆ ತಂಡ ನಾಲ್ಕು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಅನೇಕ ಬಾರಿ ಪ್ಲೇ ಆಫ್ ಪ್ರವೇಶಿಸಿದೆ ಮತ್ತು ಫೈನಲ್ (ms dhoni new look) ಪಂದ್ಯಗಳಿಗೆ ಪ್ರವೇಶಿಸಿದೆ.
ಇದೇ ಮಾರ್ಚ್ 31, 2023 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್‌ನ ಮೊದಲ ಪಂದ್ಯ ನಡೆಯಲಿದ್ದು,
ಆರಂಭಿಕ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ವಿರುದ್ಧ ಕ್ಯಾಪ್ಟನ್ ಕೂಲ್ ನೇತೃತ್ವದ ಚೆನೈ ಸೂಪರ್ ಕಿಂಗ್ಸ್ ತಂಡ ಸೆಣಸಾಡಲಿದೆ.

ವೈರಲ್ ವೀಡಿಯೊದಲ್ಲಿ ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಆಕರ್ಷಕ ಮೈಕಟ್ಟನ್ನು ನೋಡಿ, ಅಶ್ಚರ್ಯಚಕಿತರಾದ ಅಭಿಮಾನಿಗಳು ಮತ್ತು ನೆಟ್ಟಿಗರು,
ಈ ವೀಡಿಯೊವನ್ನು ಹೆಚ್ಚೆಚ್ಚು ಶೇರ್ ಮಾಡಿ ಮತ್ತಷ್ಟು ವೈರಲ್ ಮಾಡಿದ್ದಾರೆ. ಪಂದ್ಯಗಳು ಆರಂಭವಾಗುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಧೋನಿ ಅವರು ಒಂದಲ್ಲ ಒಂದು ವಿಷಯದಲ್ಲಿ ನೆಟ್ಟಿಗರು ಮನಸ್ಸನ್ನು ಗೆಲ್ಲುವಲ್ಲಿ ಪ್ರಮುಖರಾಗಿದ್ದಾರೆ.