Chennai : ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ(MS Dhoni) ಅವರು ಇದೀಗ ಚಿತ್ರ ಉದ್ಯಮಕ್ಕೆ (MS Dhoni production movie)ದುಮುಕಿದ್ದು,
ತಮ್ಮ ಮೊದಲ ಯೋಜನೆಯ ಮೋಷನ್ ಪೋಸ್ಟರ್ ಅನ್ನು ಇದೀಗ ಅನಾವರಣಗೊಳಿಸಿದ್ದಾರೆ.
ತಮಿಳು ಭಾಷೆಯಲ್ಲಿ ಹೊರಹೊಮ್ಮುತ್ತಿರುವ ತಮ್ಮ ಮೊದಲ ಸಿನಿಮಾ ಲೆಟ್ಸ್ ಗೆಟ್ ಮಾರೀಡ್(Lets Get Married) ಚಿತ್ರದ ಮೊದಲ ಮೋಷನ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿರುವ ಮಹೇಂದ್ರ ಸಿಂಗ್ ಧೋನಿ ಅವರು,
ತಮ್ಮ ಚಿತ್ರದಲ್ಲಿ ನಟಿಸುತ್ತಿರುವ ನಾಯಕ ಮತ್ತು ನಟಿಯ ಬಗ್ಗೆ ಕೂಡ ಮಾಹಿತಿ ಬಹಿರಂಗಪಡಿಸಿದ್ದಾರೆ.

ಹೌದು, ತಮ್ಮ ಪ್ರೊಡಕ್ಷನ್ ಹೌಸ್ ನಿಂದ ಹೊರಹೊಮ್ಮುತ್ತಿರುವ ತಮಿಳು(Tamil) ಚಿತ್ರ ʻಲೆಟ್ಸ್ ಗೆಟ್ ಮ್ಯಾರೀಡ್ʼ ಚಿತ್ರದಲ್ಲಿ ಹರೀಶ್ ಕಲ್ಯಾಣ್ (Harish Kalyan)ಮತ್ತು ನದಿಯಾ ಮೊಯ್ದು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಎಂ.ಎಸ್ ಧೋನಿ ಅವರು ಇತ್ತೀಚೆಗೆ ತಮ್ಮ ಚಲನಚಿತ್ರ ನಿರ್ಮಾಣ ಉದ್ಯಮವಾದ ಧೋನಿ ಎಂಟರ್‌ಟೈನ್‌ಮೆಂಟ್(MS Dhoni production movie) ಅನ್ನು ಘೋಷಿಸಿದ ನಂತರ ಚಿತ್ರರಂಗಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ.
ಶುಕ್ರವಾರ, ತಮ್ಮ ಪ್ರೊಡಕ್ಷನ್ ಹೌಸ್ ಆದ ಧೋನಿ ಎಂಟರ್‌ಟೈನ್‌ಮೆಂಟ್ ಅಧಿಕೃತವಾಗಿ ತನ್ನ ಮೊದಲ ಪ್ರಾಜೆಕ್ಟ್ ಅನ್ನು ಇದೀಗ ಅವರ ಅಭಿಮಾನಿಗಳು ಹಾಗೂ ಚಿತ್ರಪ್ರೇಮಿಗಳ ಮುಂದೆ ಅನಾವರಣಗೊಳಿಸಿದೆ,
ಇದನ್ನೂ ಓದಿ: ಬಿಜೆಪಿ ಸರ್ಕಾರ ಅಂಗನವಾಡಿ ಕಾರ್ಯಕರ್ತರ ಪ್ರಾಣದ ಜೊತೆ ಚೆಲ್ಲಾಟ ನಡೆಸುತ್ತಿದೆ : ಸಿದ್ದರಾಮಯ್ಯ
ಈ ಚಿತ್ರ ತಮಿಳು ಭಾಷೆಯಲ್ಲಿ ಮೂಡಿಬಂದಿದ್ದು, ರೊಮ್ಯಾಂಟಿಕ್-ನಾಟಕ ಜಾನರ್ ಒಳಗೊಂಡಿದೆ, ಲೆಟ್ಸ್ ಗೆಟ್ ಮ್ಯಾರೇಡ್ ಚಿತ್ರವನ್ನು ರಮೇಶ್ ತಮಿಳ್ಮಣಿ ನಿರ್ದೇಶಿಸಲಿದ್ದು,
ಚಿತ್ರದಲ್ಲಿ ಹರೀಶ್ ಕಲ್ಯಾಣ್ ಮತ್ತು ಇವಾನಾ, ನದಿಯಾ ಮೊಯ್ದು ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ.
ಈ ಬಗ್ಗೆ ಧೋನಿ ಎಂಟರ್‌ಟೈನ್‌ಮೆಂಟ್ ತಮ್ಮ ಇನ್ಸ್ಟಾಗ್ರಾಂ (Instagram)ಪುಟದಲ್ಲಿ ಪೋಸ್ಟ್ ಮಾಡಿದ್ದು,
ನಾವು ಈ ಸುದ್ದಿಯನ್ನು ಹಂಚಿಕೊಳ್ಳಲು ಉತ್ಸುಕರಾಗಿದ್ದೇವೆ, ಧೋನಿ ಎಂಟರ್‌ಟೈನ್‌ಮೆಂಟ್‌ನ ಮೊದಲ ನಿರ್ಮಾಣದ ಶೀರ್ಷಿಕೆ Lets get Married ಶೀರ್ಷಿಕೆ ಲುಕ್ ಮೋಷನ್ ಪೋಸ್ಟರ್ ಈಗ ಹೊರಬಂದಿದೆ ಎಂದು ಪೋಸ್ಟ್ ಮಾಡಿ ತಿಳಿಸಿದೆ.

ಮೋಷನ್ ಪೋಸ್ಟರ್ ನೋಡಿದರೆ, ಚಿತ್ರವು ರೋಡ್ ಟ್ರಿಪ್ ಅನ್ನು ಹೆಚ್ಚು ಆಧರಿಸಿದೆ. ಇದನ್ನು ಗಮನಿಸಿ ಹೇಳುವುದಾದರೆ ಇದೊಂದು ರೊಮ್ಯಾಂಟಿಕ್ ಡ್ರಾಮಾ ಕಥೆ ಇರಬಹುದು ಎಂದು ಹೇಳಬಹುದಾಗಿದೆ.
ಚಿತ್ರದ ನಾಯಕ ಮತ್ತು ನಾಯಕಿ ಹೆಸರನ್ನು ಅನಾವರಣಗೊಳಿಸಿರುವ ಧೋನಿ ಎಂಟರ್‌ಟೈನ್‌ಮೆಂಟ್, ಸದ್ಯ ಚಿತ್ರದ ತಾರಾಗಣ ಮತ್ತು ಉಳಿದ ಮಾಹಿತಿಯ ಬಗ್ಗೆ ಅಧಿಕೃತವಾಗಿ ತಿಳಿಸಬೇಕಿದೆ.
ಈಗಾಗಲೇ ತೆರೆಗೆ ಬಂದಿರುವ ಈ ಸಿನಿಮಾವನ್ನು ಧೋನಿ ಎಂಟರ್‌ಟೈನ್‌ಮೆಂಟ್‌ನ ವ್ಯವಸ್ಥಾಪಕ ನಿರ್ದೇಶಕರಾದ ಸಾಕ್ಷಿ ಸಿಂಗ್ ಧೋನಿ(Saakshi Singh Dhoni) ಅವರು ಚಿತ್ರದ ಕಥೆಯನ್ನು ಬರೆಯಲು ಪ್ರೇರಣೆ ನೀಡಿದ್ದಾರೆ ಎನ್ನಲಾಗಿದೆ!
ಪ್ರತಿ ಸರ್ಕಾರಿ ಕಾಲೇಜಿನಲ್ಲಿ ನೇತಾಜಿ, ರಾಯಣ್ಣ ಪ್ರತಿಮೆ ಸ್ಥಾಪಿಸಿ : ಸಿಎಂ ಬೊಮ್ಮಾಯಿ ಆದೇಶಕ್ಕ ಭಾರೀ ಟೀಕೆ
ಹೇಳಿಕೆಯ ಪ್ರಕಾರ, ಚಿತ್ರದ ಪರಿಕಲ್ಪನೆಯನ್ನು ಸಾಕ್ಷಿ ಧೋನಿ ಅವರು ಬರೆದಿದ್ದು, ನಿರ್ದೇಶಕ ರಮೇಶ್ ತಮಿಳ್ಮಣಿ ಅವರು ಇದನ್ನು ಕಥೆಯಾಗಿ ರೂಪಿಸಿದ್ದಾರೆ.
ಒಟ್ಟಾರೆ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಆಟದ ವೈಖರಿಯಲ್ಲಿ ಭಾರತೀಯರ ಮನಸ್ಸನ್ನು ಗೆದ್ದಿದ್ದರು.
ಇದೀಗ ಚಿತ್ರ ನಿರ್ಮಾಣದ ಮುಖೇನ ಮತ್ತೊಂದು ವೃತ್ತಿಯಲ್ಲಿ ತೊಡಗಿಸಿಕೊಂಡು ಜನರನ್ನು ಮನರಂಜಿಸುವಲ್ಲಿ ದಾಪುಗಾಲು ಇಟ್ಟಿದ್ದಾರೆ ಎಂದೇ ಹೇಳಬಹುದು.