ಟಾಟಾ ಐಪಿಎಲ್ 2022ರ(Tata IPL 2022) 15ನೇ ಆವೃತ್ತಿಯ ಏಪ್ರಿಲ್(April) 22ರ ಶುಕ್ರವಾರ ನಡೆದ ಮುಂಬೈ ಇಂಡಿಯನ್ಸ್(Mumbai Indians) ಮತ್ತು ಚೆನೈ ಸೂಪರ್ ಕಿಂಗ್ಸ್(Chennai Super Kings) ತಂಡಗಳ ನಡುವಿನ ಜಿದ್ದಾಜಿದ್ದಿಯಲ್ಲಿ ಮಾಜಿ ನಾಯಕ(Former Captain) ಎಂ.ಎಸ್ ಧೋನಿ(MS Dhoni) ಅವರ ಪ್ರಬಲ ಆಟದಿಂದ ಚೆನೈ ಗೆಲುವಿನ ಕಿರೀಟ ಧರಿಸಿತು.
19ನೇ ಓವರ್‌ನ ಅಂತ್ಯಕ್ಕೆ ಎಂ.ಎಸ್ ಧೋನಿ 9 ಎಸೆತಗಳಲ್ಲಿ 12 ರನ್ ಗಳಿಸಿದ್ದರು. ಎರಡು ಪ್ರತಿಸ್ಪರ್ಧಿಗಳ ನಡುವಿನ ಐಪಿಎಲ್ 2022 ರ ಕದನದಲ್ಲಿ ಜಯದೇವ್ ಉನದ್ಕತ್ ಡ್ವೈನ್ ಪ್ರಿಟೋರಿಯಸ್ ಎಲ್‌ಬಿಡಬ್ಲ್ಯೂ ಮಾಡಿ ಪೆವಿಲಿಯನ್ ಕಡೆಗೆ ಕಳಿಸಿದರು. ಕೊನೆಯ ಕ್ಷಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ 6 ಎಸೆತಗಳಲ್ಲಿ 17 ರನ್ ಅಗತ್ಯವಿತ್ತು. ತದನಂತರ ಕೂಲ್ ಧೋನಿ ಅವರ ಆರ್ಭಟ ಪ್ರಾರಂಭವಾಯಿತು.
ಜಯದೇವ್ ಉನದ್ಕತ್ ಮೂರನೇ ಎಸೆತದಲ್ಲಿ ಅವರ ಫೋರ್ ಭಾರಿಸಿದರು ಮತ್ತು ಮುಂದಿನ ಬಾಲ್ಗೆ ಸಿಕ್ಸರ್ ಹೊಡೆದರು. ಈ ಒಂದು ಹೊಡೆತಕ್ಕೆ ಅಭಿಮಾನಿಗಳು ವಿಂಟೇಜ್ ಧೋನಿ ಎಂದು ಕರೆಯುತ್ತಿದ್ದರು. ಸಿಎಸ್ಕೆ ಅಂತಿಮ ಎಸೆತದಲ್ಲಿ ಬೌಂಡರಿ ಅಗತ್ಯವಿತ್ತು ಮತ್ತು MS ಧೋನಿ ತಮ್ಮದೇ ಶೈಲಿಯಲ್ಲಿ ಫೋರ್ ಭಾರಿಸಿ ತಂಡಕ್ಕೆ ವಿಜಯ ತಂದುಕೊಟ್ಟರು. ಸತತವಾಗಿ ಸೋಲುವ ಮೂಲಕ ಮುಂಬೈ ಇಂಡಿಯನ್ಸ್ ಹತಾಶೆಗೊಂಡು ಪೆವಿಲಿಯನ್ ಬಳಿ ಮುಖ ಮಾಡಿತು.