Did Congress leaders give us the records of Muda, Valmiki Corporation scams: Prahlad Joshi bursts a new bomb.
Hubballi: ಮುಡಾ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದ ದಾಖಲೆಗಳನ್ನು ನಮಗೆ ನೀಡಿದ್ದು ಕಾಂಗ್ರೆಸ್ (Congress) ನಾಯಕರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಹೊಸ ಬಾಂಬ್ ಸಿಡಿಸಿದ್ದಾರೆ.
ನಮ್ಮ ಬಳಿ ಏನೂ ಇರಲಿಲ್ಲ, ಕಾಂಗ್ರೆಸ್ನವರೇ ನಮಗೆ ದಾಖಲೆ ಕೊಟ್ಟಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ತಿಳಿಸಿದರು. ದಾಖಲೆ ನಮಗೆ ಯಾರು ಕೊಟ್ಟಿದ್ದಾರೆ ಎಂಬುವುದು ಮುಖ್ಯಮಂತ್ರಿಗಳಿಗೂ ಗೊತ್ತಿದೆ. ಸಿದ್ದರಾಮಯ್ಯ ಅವರು ಮನೆಗೆ ಹೋಗುತ್ತಾರೆ, ಕಾಂಗ್ರೆಸ್ನಲ್ಲಿ ಹೊಸ ಸಿಎಂ ಬರುತ್ತಾರೆ. ಹೀಗಾಗಿ ಬಿಜೆಪಿ (BJP) ನಾಯಕರು ಸಿಎಂ ಬದಲಾವಣೆ ಬಗ್ಗೆ ಹೇಳುತ್ತಿದ್ದಾರೆ.
ದೆಹಲಿಗೆ ಹೋಗಿ ಒಮ್ಮೆ ರಾಹುಲ್ ಗಾಂಧಿ (Rahul Gandhi) ಬಳಿ, ಮತ್ತೊಮ್ಮೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಬಳಿ ವಿವರಣೆ ಕೊಡುತ್ತಾರೆ ಎಂದು ತಿಳಿಸಿದರು. ತಮಗೆ ಏನೇನು ಬೇಕು ಅದನ್ನು ಕಾಂಗ್ರೆಸ್ ಉಸ್ತುವಾರಿಗಳು ಮಾಡುತ್ತಿದ್ದಾರೆ. ಹೈಕಮಾಂಡ್ (High Command) ಸಿಎಂ ಅವರ ಪರವಾಗಿದ್ದರೆ ಸಿದ್ದರಾಮಯ್ಯ ಅವರು ಯಾಕೆ ಪದೇ ಪದೇ ದೆಹಲಿಗೆ ಹೋಗುತ್ತಾರೆ. ಕೇವಲ ಮುಡಾ ಅಲ್ಲ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವೂ ಇದೆ.
ಮುಡಾ ಹಗರಣಕ್ಕೆ (Muda Scam) ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ವಾಗ್ದಾಳಿ ಮಾಡುತ್ತಿವೆ. ಸಿದ್ದರಾಮಯ್ಯ ಅವರು ಕೇವಲ 79 ಕೋಟಿ ಹಗರಣ ಆಗಿದೆ ಅಂತಾರೆ. ಎಷ್ಟು ತಿಂದರೂ ಅದು ತಿಂದ ಹಾಗೆ ಎಂದು ವಾಗ್ದಾಳಿ ಮಾಡಿದರು.
ಜಿಂದಾಲ್ಗೆ ಸರ್ಕಾರ ಭೂಮಿ ನಿಡುವ ವಿಚಾರ
ಕಾಂಗ್ರೆಸ್ ಬೆಂಬಲದಿಂದ ಹೆಚ್ಡಿ ಕುಮಾರಸ್ವಾಮಿ (H D Kumaraswamy) ಅವರು ಮುಖ್ಯಮಂತ್ರಿಯಾಗಿದ್ದಾಗ ಭೂಮಿ ನೀಡಲು ಮುಂದಾಗಿದ್ದರು. ನಂತರ ಬಿಜೆಪಿ ಸರ್ಕಾರದಲ್ಲೂ ಭೂಮಿ ನೀಡಲು ತೀರ್ಮಾನ ಕೈಗೊಳ್ಳಲಾಗಿತ್ತು. ಆಗ, ಹೆಚ್ಕೆ ಪಾಟೀಲ್ ಅವರು ವಿರೋಧ ವ್ಯಕ್ತಪಡಿಸಿದರು. ಇವತ್ತು ಅದೇ ಹೆಚ್ಕೆ ಪಾಟೀಲ್ (H K Patil) ಭೂಮಿ ಕೊಡುವುದರ ಬಗ್ಗೆ ಮಾತನಾಡುತ್ತಾರೆ. ಅವತ್ತು ಏನಾಯಿತು, ಇವತ್ತು ಏನಾಗುತ್ತಿದೆ, ಸ್ವಲ್ಪ ತಿಳಿಸಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವ್ಯಂಗ್ಯವಾಡಿದರು.
ಜೈಲಿನಲ್ಲಿ ಆರೋಪಿ ದರ್ಶನ್ಗೆ ರಾಜಾತಿಥ್ಯ
ಸಾಕ್ಷಿ ನಾಶ ಮಾಡುವುದಕ್ಕೆ ಇದೊಂದು ಪ್ಲ್ಯಾನ್. ನಟ ದರ್ಶನ್ (Darshan) ವಿಚಾರದಲ್ಲಿ ಸರ್ಕಾರದ ಫೇಲ್ಯೂರ್ ಆಗಿದೆ. ರೌಡಿಶೀಟರ್ ಜತೆ ಕುಳಿತಿರೋದು ಸಾಕ್ಷಿ ನಾಶ ಮಾಡುವ ತಂತ್ರ ಇದು. ದರ್ಶನ್ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಗಂಭೀರತೆ ಇಲ್ಲ. ಇದನ್ನೆಲ್ಲ ನೋಡಿದರೆ ಸರ್ಕಾರ ರಕ್ಷಣೆ ಮಾಡುತ್ತಿದೆ ಅನಿಸುತ್ತದೆ. ಸರ್ಕಾರ ಏನೋ ಸಂಚು ಮಾಡುತ್ತಿದೆ ಎಂದು ಜೈಲಿನಲ್ಲಿ ಕೊಲೆ ಆರೋಪಿ ದರ್ಶನ್ಗೆ ರಾಜಾತಿಥ್ಯ ನೀಡುತ್ತಿರವ ವಿಚಾರವಾಗಿ ಅನುಮಾನ ವ್ಯಕ್ತಪಡಿಸಿದರು.
ದರ್ಶನ್ ವಿಚಾರವಾಗಿ ಸಿಎಂ ಹಾಗೂ ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ. ಈಗ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿದ್ದೀರಿ. ಇಷ್ಟು ದಿನ ಕತ್ತೆ ಕಾಯುತ್ತಿದ್ದರಾ? ಈ ಕೇಸ್ನಲ್ಲಿ ಕೆಲವು ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂದರು.
Muda Scam News In Kannada Viral News
Hubballi: Union Minister Prahlad Joshi has blasted a new bombshell that it was the Congress leaders who gave us the documents of the Muda and Valmiki Development Corporation scam.
Talking to the media representatives in Hubballi, he said that we had nothing, the Congress gave us the document. The chief minister also knows who gave us the document. Siddaramaiah will go home, new CM will come in Congress. Thus, BJP leaders are talking about the change of CM.
He said that he will go to Delhi and give an explanation once to Rahul Gandhi and again to AICC President Mallikarjun Kharge. Congress officials are doing whatever they want. If the High Command is in favor of the CM then why does Siddaramaiah go to Delhi repeatedly. Not just Muda, there is also the Valmiki Development Corporation scam
BJP and JDS are attacking the Chief Minister regarding Muda Scam. Siddaramaiah said that only 79 crores is a scam. He lashed out that no matter how much he ate, it was like eating.
The issue of government allotment of land to Jindal
With the support of the Congress, HD Kumaraswamy (HD Kumaraswamy) when he was the Chief Minister, offered to give land. Later, BJP government also decided to give land. Then, HK Patil protested. Today the same HK Patil talks about giving land. He sneered at the Congress leaders saying what happened then and what is happening today.
Accused Darshan gets royal hospitality in jail
This is a plan to destroy the witness. It is the government's failure in the matter of actor Darshan. This is a strategy to destroy the witness by sitting with the rowdy sheeter. The state government is not serious about Darshan's case. Looking at all this, it seems that the government is protecting. He expressed doubt that the government is plotting something and giving royal treatment to Darshan, accused of murder in the jail.
I will write a letter to the CM and Governor regarding Darshan. Now you have suspended the police personnel. Have you been waiting for the donkey for so long? He said that some politicians are involved in this case.