In front of my husband’s comfort, these sites are equal to Trina: Decision to return 14 sites to Muda from CM’s wife
Bengaluru: ಈಗಾಗಲೇ ರಾಜ್ಯ ರಾಜಕೀಯದಲ್ಲಿ ಭಾರೀ ಬಿರುಗಾಳಿ ಸೃಷ್ಟಿಗೆ ಕಾರಣವಾಗಿದ್ದ ಮುಡಾ ಹಗರಣ (Muda Scam) ತಿರುವು ಪಡೆದುಕೊಂಡಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಮೈಸೂರು ಜಿಲ್ಲೆಯ ಕೆಸರೆ ಗ್ರಾಮದ 3 ಎಕರೆ 16 ಗುಂಟೆ ಜಮೀನನ್ನು ಮುಡಾ ಸ್ವಾಧೀನಪಡಿಸಿಕೊಂಡಿದ್ದಕ್ಕೆ ಪರಿಹಾರ ರೂಪದಲ್ಲಿ ಪ್ರತಿಷ್ಠಿತ ಬಡಾವಣೆ ವಿಜಯ ನಗರದಲ್ಲಿ ಪಡೆದುಕೊಂಡ 14 ಸೈಟುಗಳನ್ನು ವಾಪಸ್ ನೀಡಿದ್ದಾರೆ.
ಇನ್ನೇನು ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಿನಾಮೆ ನೀಡುತ್ತಾರೆ ಎನ್ನುವಷ್ಟರಲ್ಲಿ ಮುಡಾ ನಿವೇಶನ ಹಗರಣ ಇನ್ನೊಂದು ಮಜಲಿಗೆ ತಿರುಗಿದೆ. ಜಾರಿ ನಿರ್ದೇಶನಾಲಯ (Directorate of Enforcement) ಎಂಟ್ರಿ ಕೊಡುತ್ತಿದ್ದಂತೆಯೇ, ಎಲ್ಲಾ 14 ನಿವೇಶನಗಳನ್ನು ಸಿಎಂ ಪತ್ನಿ ಪಾರ್ವತಿಯವರು ವಾಪಸ್ ಕೊಡುವ ನಿರ್ಧಾರಕ್ಕೆ ಬಂದಿದ್ದಾರೆ.
ಮುಡಾ ಅಧ್ಯಕ್ಷರ ಬರೆದ ಪತ್ರದಲ್ಲಿ ಸಿಎಂ ಪತ್ನಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನನ್ನ ಪರವಾಗಿ ಕಾರ್ಯಗತಗೊಳಿಸಿದ 14 ನಿವೇಶನಗಳ ಕ್ರಯಪತ್ರಗಳನ್ನು ರದ್ದುಗೊಳಿಸುವ ಮೂಲಕ ನಾನು ಪರಿಹಾರದ ನಿವೇಶನಗಳನ್ನು ಒಪ್ಪಿಸಲು ಮತ್ತು ಹಿಂತಿರುಗಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಇದರ ಬೆನ್ನಲ್ಲೇ, ಭಾವನಾತ್ಮಕ ಪತ್ರವನ್ನು ಬರೆದಿರುವ ಪಾರ್ವತಿಯವರು (Parvathi), ನಾನೆಂದೂ, ಮನೆ, ಚಿನ್ನ, ಆಸ್ತಿ, ಸಂಪತ್ತನ್ನು ಬಯಸಿದವಳಲ್. ನನ್ನ ಪತಿಯ ಗೌರವ, ನೆಮ್ಮದಿಯ ಮುಂದೆ ನನಗೆ ನಿವೇಶನಗಳೂ ಲೆಕ್ಕಕ್ಕಿಲ್ಲ .ನನ್ನ ಪತಿಯಾಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ 40 ವರ್ಷದ ಸುದೀರ್ಘ ರಾಜಕಾರಣದಲ್ಲಿ ಯಾವುದೇ ಸಣ್ಣ ಕಳಂಕವೂ ಅಂಟಿಕೊಳ್ಳದಂತಹ ನೈತಿಕತೆಯನ್ನು ವ್ರತದಂತೆ ಪಾಲಿಸಿಕೊಂಡು ಬಂದವರು.
ರಾಜಕೀಯವೂ ಸೇರಿದಂತೆ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡು ಅವರಿಗೆ ಮುಜುಗರ ಉಂಟು ಮಾಡಬಾರದೆಂಬ ನಿರ್ಧಾರಕ್ಕೆ ಬದ್ದಳಾಗಿ ಇದನ್ನು ವಾಪಸ್ಸು ನೀಡುತ್ತಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.