Mumbai : ಮುಂಬೈ ಪೊಲೀಸರು (Mumbai Police) ಬಿಹಾರ ಪೊಲೀಸರ(Bihar Police) ಜಂಟಿ ಕಾರ್ಯಾಚರಣೆಯಲ್ಲಿ ದೇಶದ,
ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ (Mukhesh Ambani) ಮತ್ತು ಅವರ ಕುಟುಂಬ ಸದಸ್ಯರಿಗೆ ಕೊಲೆ ಬೆದರಿಕೆ ಕರೆಗಳನ್ನು ಮಾಡಿದ್ದ ಬಿಹಾರದ ದರ್ಭಾಂಗದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ನಿರುದ್ಯೋಗಿಯಾಗಿರುವ ಆರೋಪಿಯನ್ನು ರಾಕೇಶ್ ಕುಮಾರ್ ಮಿಶ್ರಾ (Rakesh Kumar Mishra) ಎಂದು ಗುರುತಿಸಲಾಗಿದ್ದು, ಆತನನ್ನು ಮತ್ತೆ ಮುಂಬೈಗೆ ಕರೆತರಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬುಧವಾರ, ಮುಂಬೈನ ಸರ್ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಐದು ಗಂಟೆಗಳಲ್ಲಿ ಎರಡು ಬೆದರಿಕೆ ಕರೆಗಳು ಬಂದಿದ್ದು, ಕರೆ ಮಾಡಿದವರು ಆಸ್ಪತ್ರೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಅಂಬಾನಿ ಕುಟುಂಬದ ಕೆಲವರ ವಿರುದ್ಧವೂ ಬೆದರಿಕೆ ಹಾಕಲಾಗಿತ್ತು ಎನ್ನಲಾಗಿದೆ. “ಕೆಲವೇ ಗಂಟೆಗಳಲ್ಲಿ, ಬಿಹಾರ ಪೊಲೀಸರ ಸಹಾಯದಿಂದ, ಒಬ್ಬ ಆರೋಪಿಯನ್ನು ಬಿಹಾರದ ದರ್ಭಾಂಗಾದಿಂದ ಬಂಧಿಸಲಾಗಿದೆ,
ಮತ್ತು ಮುಂಬೈ ಪೊಲೀಸರ ತಂಡವು ಆರೋಪಿಗಳೊಂದಿಗೆ ಮುಂಬೈಗೆ ತೆರಳಿದ್ದಾರೆ. ಸದ್ಯ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ನೀಲೋತ್ಪಾಲ್ ಎಎನ್‌ಐ(ANI) ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
https://www.youtube.com/watch?v=uC_6VpBmBMs ಮುನಿರಾಬಾದ್‌ನಲ್ಲಿ ವಿಶಿಷ್ಟ ಪ್ರತಿಭಟನೆ!
ಬುಧವಾರ ಮಧ್ಯಾಹ್ನ 12.45 ಕ್ಕೆ ಮತ್ತೆ ಸಂಜೆ 5.04 ಕ್ಕೆ ಸರ್ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಕಾಲ್ ಸೆಂಟರ್‌ಗೆ ಆಸ್ಪತ್ರೆಯನ್ನು ಸ್ಫೋಟಿಸುವ ಬೆದರಿಕೆ ಮತ್ತು ಮುಖೇಶ್ ಅಂಬಾನಿ, ನೀತಾ ಅಂಬಾನಿ,
ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರ ಪ್ರಾಣಕ್ಕೆ ತರುವಂತ ಬೆದರಿಕೆಯ ಕರೆ ಬಂದಿದೆ ಎಂದು ಆರ್‌ಐಎಲ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಅಂಬಾನಿ ಕುಟುಂಬಕ್ಕೆ ಬೆದರಿಕೆ ಕರೆಗಳ ಘಟನೆಯಲ್ಲಿ ಕ್ಷಿಪ್ರವಾಗಿ ಕಾರ್ಯನಿರ್ವಹಿಸಿದ ಮುಂಬೈ ಪೊಲೀಸರ ತಂಡವು ಬಿಹಾರ ಪೊಲೀಸರ ಸಹಾಯದಿಂದ ಮಧ್ಯರಾತ್ರಿ ಬಿಹಾರದ ದರ್ಭಾಂಗಾದ ಬ್ಲಾಕ್‌ನಿಂದ ವ್ಯಕ್ತಿಯನ್ನು ಬಂಧಿಸಿದೆ. ತಂಡವು ಆರೋಪಿಗಳೊಂದಿಗೆ ಮುಂಬೈಗೆ ಹಿಂತಿರುಗಿದೆ.

ಮತ್ತಷ್ಟು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 506(2),507 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ನಿರುದ್ಯೋಗಿಯಾಗಿದ್ದು, ಬೆದರಿಕೆ ಕರೆಗಳ ಹಿಂದಿನ ಉದ್ದೇಶವನ್ನು ಬಹಿರಂಗಪಡಿಸಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : https://vijayatimes.com/iran-students-hijab-protest/
ಈ ವರ್ಷದ ಆಗಸ್ಟ್‌ನಲ್ಲಿ, ಆಭರಣ ವ್ಯಾಪಾರಿಯೊಬ್ಬರು ಆಸ್ಪತ್ರೆಗೆ ಕರೆ ಮಾಡಿ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ನಂತರ ಅವರನ್ನು ಬಂಧಿಸಲಾಗಿತ್ತು.
ಫೆಬ್ರವರಿ 2021 ರಲ್ಲಿ, ಅಂಬಾನಿ ಅವರ ದಕ್ಷಿಣ ಮುಂಬೈ ನಿವಾಸ ‘ಆಂಟಿಲಿಯಾ’ ಬಳಿ ಸ್ಫೋಟಕಗಳನ್ನು ತುಂಬಿದ SUV ಪತ್ತೆಯಾಗಿತ್ತು.
