• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ವರುಣಾರ್ಭಟಕ್ಕೆ ನಡುಗಿದ ಮುಂಬೈ: ವಿಮಾನ, ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತ .ಆರೆಂಜ್ ಅಲರ್ಟ್ ಘೋಷಣೆ

Shwetha Mohan by Shwetha Mohan
in Vijaya Time, ಮಾಹಿತಿ, ವಿಜಯ ಟೈಮ್ಸ್‌
ವರುಣಾರ್ಭಟಕ್ಕೆ ನಡುಗಿದ ಮುಂಬೈ: ವಿಮಾನ, ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತ .ಆರೆಂಜ್ ಅಲರ್ಟ್ ಘೋಷಣೆ
0
SHARES
26
VIEWS
Share on FacebookShare on Twitter
  • ವಾಣಿಜ್ಯ ನಗರಿ ಮುಂಬೈಗೆ ವರುಣಾಘಾತ
  • ಭಾರೀ ಮಳೆಯಿಂದಾಗಿ ಅಕ್ಷರಶಃ ಸ್ತಬ್ಧವಾದ ಮುಂಬೈ ನಗರ
  • ಇಂದು ಆರೆಂಜ್ ಅಲರ್ಟ್ ಜಾರಿ ಮಾಡಿದ ಹವಾಮಾನ ಇಲಾಖೆ

Mumbai: ಕಳೆದೆರಡು ದಿನಗಳಿಂದ ಎಡಬಿಡದೆ ಅಬ್ಬರಿಸುತ್ತಿರುವ ಮುಂಗಾರು ಮಳೆ ಹಲವೆಡೆ ಹಾನಿ ಮಾಡಿದೆ.

ಸೋಮವಾರ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಮುಂಬೈನ ತಗ್ಗು ಪ್ರದೇಶಗಳು ಮುಳುಗಿ ಜನ ಜೀವನ ಅಸ್ತವ್ಯಸ್ತ ಉಂಟಾಗಿದೆ.

ಇನ್ನು ನಗರದ ಕೆಲವು ಭಾಗಗಳಲ್ಲಿ ವಾಹನ ಸಂಚಾರ ಕೂಡ ಬಂದ್​ ಆಗಿದ್ದು ಅಂಧೇರಿ ರೈಲು ಸುರಂಗ ಮಾರ್ಗದಲ್ಲಿ ಮಳೆ ನೀರು ನುಗ್ಗಿದ್ದರಿಂದ ಸಂಚಾರ ಕೂಡ ಸ್ಥಗಿತವಾಗಿದೆ.

ಮುಂಬೈ ನಗರ ಜುಲೈ ತಿಂಗಳ ಆರಂಭದಲ್ಲಿ ಸಾಧಾರಣ ಮಳೆ ಕಂಡಿತ್ತು. ಬಳಿಕ ಕೆಲವು ದಿನಗಳಿಂದ ತೀವ್ರವಾದ ಬಿಸಿಲು ಮತ್ತು ಸೆಕೆಯ ವಾತಾವರಣ ಇತ್ತು.

ಆದರೆ, ಭಾನುವಾರದಿಂದ ಶುರುವಾದ ಮಳೆ ಸೋಮವಾರ ರಾತ್ರಿಯಿಡೀ ಸುರಿದಿದ್ದರಿಂದ ಮಹಾನಗರವು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಭಾರಿ ಮಳೆಯ ಕಾರಣದಿಂದಾಗಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಏರ್​ಪೋರ್ಟ್​ನಲ್ಲಿ ತೊಂದರೆ ಉಂಟಾಗಿದ್ದು

ಕೇರಳದ ಕೊಚ್ಚಿಯಿಂದ ಮುಂಬೈ ಏರ್​ಪೋರ್ಟ್​ಗೆ ಬಂದು ಲ್ಯಾಂಡಿಂಗ್ ಆಗುತ್ತಲಿದ್ದ ಏರ್ ಇಂಡಿಯಾ ವಿಮಾನವೊಂದು ರನ್ ವೇಯಿಂದ ಸ್ಕಿಡ್ ಆಗಿದ್ದು ಲ್ಯಾಂಡಿಂಗ್ ಮಾಡುವಾಗ ಮಳೆಯ ಕಾರಣದಿಂದಾಗಿ ವಿಮಾನ ರನ್ ವೇಯಿಂದ ಸ್ಕಿಡ್ ಆಗಿದೆ.

Air India flight skidding off the runway
ಅದೃಷ್ಟವಶಾತ್ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ.

ಈ ಘಟನೆ ಸಂಭವಿಸಿದ ತಕ್ಷಣವೇ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ರೆಸ್ಪಾನ್ಸ್ ಆ್ಯಕ್ಟೀವ್ ಮಾಡಲಾಗಿತ್ತು.

ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದು ಜಾಗರೂಕತೆಯಿಂದ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ. ಆದರೆ ವಿಮಾನದ ಇಂಜಿನ್ ಭಾಗಕ್ಕೆ ಸ್ಪಲ್ಪ ಡ್ಯಾಮೇಜ್ ಆಗಿದೆ ಎಂದು ಹೇಳಲಾಗುತ್ತಿದೆ.

ಸ್ಪೈಸ್ ಜೆಟ್,ಇಂಡಿಗೋ ಸೇರಿದಂತೆ ಹಲವು ಏರ್ ಲೈನ್ಸ್ ಗಳು ವಿಮಾನ ಪ್ರಯಾಣಿಕರಿಗೆ ಕೆಲವೊಂದು ಸಲಹೆಗಳನ್ನು ಪಾಲಿಸಲು ಸೂಚನೆ ನೀಡಿವೆ.

ಭಾರಿ ಮಳೆಯಿಂದಾಗಿ ಏರ್​ಪೋರ್ಟ್​ಗೆ ಹೋಗುವ ಬಹಳಷ್ಟು ರಸ್ತೆಗಳಲ್ಲಿ ನಿಧಾನಗತಿಯ ಟ್ರಾಫಿಕ್ ಇರುವ ಕಾರಣದಿಂದಾಗಿ ನೀವು ವಿಮಾನದಲ್ಲಿ ಪ್ರಯಾಣ ಮಾಡುವವರಾಗಿದ್ದರೇ, ಮುಂಚಿತವಾಗಿಯೇ ಪ್ಲ್ಯಾನ್ ಮಾಡಿಕೊಂಡು ಸ್ಪಲ್ಪ ಬೇಗ ಮನೆಯಿಂದ ಹೊರಟು ಬನ್ನಿ.

ಮನೆಯಿಂದ ಹೊರಡುವ ಮುನ್ನವೇ ನಿಮ್ಮ ವಿಮಾನದ ಟೇಕಾಫ್ ಸಮಯವನ್ನು ಹಾಗೂ ವೆಬ್​ಸೈಟ್, ಕಂಪನಿಯ ಆ್ಯಪ್​ನಲ್ಲಿ ಪರಿಶೀಲಿಸಿ ಕೊಂಡು ಏರ್​ಪೋರ್ಟ್​ಗೆ ಬನ್ನಿ.

ಇಲ್ಲವಾದಲ್ಲಿ ಮಳೆ ನಿಮ್ಮ ಪ್ರಯಾಣದ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಕೆ ನೀಡಿವೆ.

ಈ ವಾರದ ಕೊನೆಯವರೆಗೂ ಮುಂಬೈನಲ್ಲಿ ಧಾರಾಕಾರವಾಗಿ ಮಳೆ ಬೀಳುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದ್ದು ನಾಳೆ ಮುಂಜಾನೆ ಸಮಯದಲ್ಲಿ ಮುಂಬೈನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆಯ ಹೊತ್ತಿಗೆ ಗುಡುಗು ಮಿಂಚು ಸಹಿತ ಮಳೆಯಾಗಲಿದೆ.

ಜುಲೈ 23 ರಿಂದ 26ರಂದು ವರುಣಾರ್ಭಟ ವಾಡಿಕೆಗಿಂತ ಹೆಚ್ಚು ಇರಲಿದೆ . ಈಗಾಗಲೇ ಮುಂಬೈನ ಹಾಗೂ ನಗರದ ಸುತ್ತಮುತ್ತಲ ಜನರು ಸಮುದ್ರದ ತೀರಕ್ಕೆ ಹೋಗದಂತೆ ಹಾಗೂ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಐಎಂಡಿ ಸಲಹೆ ನೀಡಿದೆ.

ಅನಗತ್ಯ ಸಂಚಾರ ಕೈಗೊಳ್ಳಬೇಡಿ ಸಾಧ್ಯವಾದಷ್ಟು ಮನೆಯಲ್ಲಿಯೇ ಇರಿ ಎಂದಿರುವ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮುಂಬೈನ ಬೊರಿವಿಲಿ,ಗೋರೆಗಾಂವ್, ಥಾಣೆ, ಅಂಧೇರಿ- ಘಟಕೋಪರ, ಚೆಂಬುರ್ ,ಮಲಾಡ್, ಖಾಂಡಿವಲಿ, ಬಿಕೆಸಿ, ಕುರ್ಲಾ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.

ಇನ್ನು ಭಾರತೀಯ ಹವಾಮಾನ ಇಲಾಖೆಯು ಮುಂಬೈ ನಗರ ಹಾಗೂರು ರಾಯಘಡ ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ಆರೇಂಜ್ ಆಲರ್ಟ್ ನೀಡಿದ್ದು

ಮುಂದಿನ 24 ಗಂಟೆಗಳ ಕಾಲ ಮುಂಬೈ ಮತ್ತು ಇತರ ಜಿಲ್ಲೆಗಳಿಗೆ ಹೆಚ್ಚಿನ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಯೆಲ್ಲೋ ಆಲರ್ಟ್ ನೀಡಿದೆ.

ಮುಂಬೈ ಹಾಗೂ ಕೊಂಕಣ್ ಪ್ರದೇಶದಲ್ಲಿ ಮುಂದಿನ 24 ಗಂಟೆಗಳ ಕಾಲ ಭಾರೀ ಮಳೆ ಮುಂದುವರಿಯಲಿದೆ ಎಂದು ಐಎಂಡಿ ವರದಿ ಮಾಡಿದೆ.

Tags: Aviation News KannadaHeavy Rain KannadaMumbai Rainorange alertWeather Alertಮುಂಬೈ ಮಳೆ

Related News

ಸ್ವಿಗ್ಗಿ, ಜೊಮ್ಯಾಟೊಗೆ ಪೈಪೋಟಿ ನೀಡಲು ಮುಂದಾದ Flipkart: ಬೆಂಗಳೂರಲ್ಲಿ ಫುಡ್ ಡೆಲಿವರಿ ಸೇವೆ ಆರಂಭಿಸಲು ಪ್ಲಾನ್
ಪ್ರಮುಖ ಸುದ್ದಿ

ಸ್ವಿಗ್ಗಿ, ಜೊಮ್ಯಾಟೊಗೆ ಪೈಪೋಟಿ ನೀಡಲು ಮುಂದಾದ Flipkart: ಬೆಂಗಳೂರಲ್ಲಿ ಫುಡ್ ಡೆಲಿವರಿ ಸೇವೆ ಆರಂಭಿಸಲು ಪ್ಲಾನ್

February 13, 2026
ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತರ ಭರ್ಜರಿ ಕಾರ್ಯಾಚರಣೆ: ನಗದು, ಚಿನ್ನ ಮತ್ತು ದಾಖಲೆಗಳು ವಶಕ್ಕೆ
ಪ್ರಮುಖ ಸುದ್ದಿ

ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತರ ಭರ್ಜರಿ ಕಾರ್ಯಾಚರಣೆ: ನಗದು, ಚಿನ್ನ ಮತ್ತು ದಾಖಲೆಗಳು ವಶಕ್ಕೆ

February 13, 2026
ಕರ್ನಾಟಕದಲ್ಲಿ ಪುಟ್ಟ ಮಕ್ಕಳಲ್ಲೂ ಹೆಚ್ಚುತ್ತಿರುವ ಕ್ಯಾನ್ಸರ್ : ಆಘಾತಕಾರಿ ಅಂಕಿಅಂಶ ಬಯಲು
ಪ್ರಮುಖ ಸುದ್ದಿ

ಕರ್ನಾಟಕದಲ್ಲಿ ಪುಟ್ಟ ಮಕ್ಕಳಲ್ಲೂ ಹೆಚ್ಚುತ್ತಿರುವ ಕ್ಯಾನ್ಸರ್ : ಆಘಾತಕಾರಿ ಅಂಕಿಅಂಶ ಬಯಲು

February 13, 2026
US ಎಚ್-1ಬಿ ವೀಸಾ ಶುಲ್ಕ ಏರಿಕೆ: ಭಾರತೀಯ ಐಟಿ ಕ್ಷೇತ್ರಕ್ಕೆ ಹೊಸ ಆರ್ಥಿಕ ಸವಾಲು
Vijaya Time

US ಎಚ್-1ಬಿ ವೀಸಾ ಶುಲ್ಕ ಏರಿಕೆ: ಭಾರತೀಯ ಐಟಿ ಕ್ಷೇತ್ರಕ್ಕೆ ಹೊಸ ಆರ್ಥಿಕ ಸವಾಲು

February 13, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.