ಪ್ರಧಾನಿ ನರೇಂದ್ರ ಮೋದಿಗೆ (Prime Minister Narendra Modi) ಇಂದು ಬೆಳಗ್ಗೆ ಜೀವ ಬೆದರಿಕೆ ಬಂದಿದೆ ಎಂದು ಮುಂಬೈ ಸಂಚಾರ ಪೊಲೀಸ್ ನಿಯಂತ್ರಣ ಕೊಠಡಿಗೆ ಅನಾಮಿಕ ಸಂದೇಶ ಬಂದಿದೆ. ಈ ಸಂದೇಶದಲ್ಲಿ ಪ್ರಧಾನಿ ಮೋದಿಯವ್ರನ್ನ ಹತ್ಯೆ ಮಾಡಲು ಜೀವಬೆದರಿಕೆ ಬಂದಿದೆ. ಪಾಕಿಸ್ತಾನಿ ಐಎಸ್ಐ (Pakistani ISI) ಏಜೆಂಟರು ಸಂಚು ರೂಪಿಸಿದ್ದಾರೆ, ಬಾಂಬ್ ಸ್ಫೋಟಿಸುವ (Designed, detonating bombs) ಮೂಲಕ ನರೇಂದ್ರ ಮೋದಿಯ ಹತ್ಯೆ ನಡೆಸಬಹುದು ಎಂದು ಇಬ್ಬರು ಹೆಸರನ್ನ ಉಲ್ಲೇಖಿಸಿ ಸಂದೇಶ ಕಳುಹಿಸಿದ್ದಾರೆ.
ಕಳೆದ 10 ದಿನಗಳಲ್ಲಿ ಮೋದಿಗೆ ಬರುತ್ತಿರುವ ಎರಡನೇ ಕೊ* ಬೆದರಿಕೆ (Second death threat) ಆಗಿದೆ. ನವೆಂಬರ್ 27 ರಂದೊ ಮೊದಲ ಭಾರಿಗೆ ಪ್ರಧಾನಿ ಮೋದಿಗೆ (Prime Minister Modi) ಜೀವಬೆದರಿಕೆ ಸಂದೇಶ ಬಂದ್ರೆ, ಇದೀಗ ಮತ್ತೊಮ್ಮೆ ಜೀವಬೆದರಿಕೆ ಇದೆ ಎಂಬ ಸಂದೇಶ ಬಂದಿದೆ. ಈ ಸಂದೇಶ ಬಂದಿರುವ ಫೋನ್ ಸಂಖ್ಯೆ ರಾಜಸ್ಥಾನದ (Phone number is from Rajasthan) ಅಜ್ಮೀರ್ನಲ್ಲಿ ನೋಂದಾಯಿಸಲಾದ ಸಂಖ್ಯೆ ಆಗಿದ್ದು, ಮಾಹಿತಿ ತಿಳಿದ ಕೂಡಲೇ ಪೊಲೀಸರು ಹೈ ಅಲರ್ಟ್ (High alert) ಆಗಿ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಪೊಲೀಸರು ಭಾರತೀಯ ನ್ಯಾಯ (Indian justice) ಸಂಹಿತೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡ್ತಿದ್ದು, ಕೂಡಲೇ ಆರೋಪಿಯನ್ನ ಪತ್ತೆ ಹಚ್ಚಲಿದ್ದಾರೆ (They will find the accused) . ಈ ಹಿಂದೆ ಮೋದಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ 34 ವರ್ಷದ ಮಹಿಳೆಯನ್ನು ಮುಂಬೈ ಪೊಲೀಸರು (Mumbai Police) ಬಂಧಿಸಿದ್ದರು.
ಇದೀಗ ಬಂದಿರುವ ಕೊ* ಬೆದರಿಕೆಯನ್ನ (Death threats) ಕೂಡ ಮಾನಸಿಕ ಅಸ್ವಸ್ಥರೇ ಕಳುಹಿಸರಬಹುದು ಎಂದು ಶಂಕಿಸಲಾಗಿದೆ. ಆರೋಪಿ ಯಾವುದೇ ಪ್ರಭಾವಿತ ವ್ಯಕ್ತಿ ಆದ್ರೂ ಪರ್ವಾಗಿಲ್ಲಾ ಕೂಡಲೇ ಅವ್ರನ್ನ ಪತ್ತೆ ಹಚ್ಚಿ ಬಂಧಿಸಲೇಬೇಕು (Should be found and arrested) ಎಂದು ಪೊಲೀಸ್ ತಂಡಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಪ್ರಧಾನಿ ಮೋದಿ ಅಲ್ಲದೆ ಉತ್ತರ ಪ್ರದೇಶದ ಸಿಎಂ ಯೋಗಿ (CM Yogi) ಆದಿತ್ಯನಾಥ್ ಗೂ ಕೂಡ 1 ತಿಂಗಳ ಹಿಂದೆ ಬೆದರಿಕೆ ಬಂದಿತ್ತು. ಆಗ ಮಹಿಳೆಯೊಬ್ಬರನ್ನ ಬಂಧಿಸಲಾಗಿತ್ತು. ಇದೀದ ದೇಶದ ಪ್ರಭಾವಿ ನಾಯಕರಿಗೆ ಬೆದರಿಕೆ ಸಂದೇಶ ಬರುತ್ತಿರುವುದು ಆತಂಕದ ಸಂಗತಿ ಆಗಿದೆ. ಇನ್ನು ಕೊಲೆ ಬೆದರಿಕೆ ಆರೋಪಿ ಯಾರೂ ಅನ್ನೋದು ತನಿಖೆಯ ಬಳಿಕ ತಿಳಿಯಲಿದೆ.