ಮುಂಬೈ ಆ 24 : ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ಚಿತ್ರೀಕರಣದ ವೇಳೆ ಬಿದ್ದು ಕೈಗೆ ಗಾಯ ಮಾಡಿಕೊಂಡಿದ್ದು,ಅವರನ್ನು ಮುಂಬೈನ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಮಿಳಿನ ಓಟು ಸೇರಪ್ಪು ಸೈಜ್ 7 ಸಿನಿಮಾ ಹಿಂದಿಗೆ ರೀಮೆಕ್ ಆಗುತ್ತಿದ್ದು, ಈ ಸಿನಿಮಾದ ಚಿತ್ರೀಕರಣದ ವೇಳೆ ಗಾಯವಾಗಿದ್ದು, ತಕ್ಷಣವೇ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಅಮಿತಾಭ್ ಬಚ್ಚನ್ ಹಾಗೂ ಸಹೋದರಿ ಶ್ವೇತಾ ಭೇಟಿ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ.