Visit Channel

ಮುಂದಿನ ವರ್ಷದಿಂದ ನಾಲ್ಕು ಬಾರಿ ಜೆಇಇ ಪರೀಕ್ಷೆ

269879-1607061325

ಹೊಸದಿಲ್ಲಿ, ಡಿ. 11: ಭಾರತ ದೇಶದಲ್ಲಿ ಕೊರೊನ ಸಮಸ್ಯೆಯಿಂದ  ಬದಲಾದ ಶೈಕ್ಷಣಿಕ ವೇಳಾಪಟ್ಟಿ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ಎಂಜಿನಿಯರಿಂಗ್ ಮತ್ತು ವಾಸ್ತುಶಿಲ್ಪ ಪ್ರವೇಶಕ್ಕಾಗಿ ನಡೆಸುವ ಜೆಇಇ (ಮೈನ್) ಪರೀಕ್ಷೆಯನ್ನು ವರ್ಷಕ್ಕೆ ನಾಲ್ಕು ಬಾರಿ ನಡೆಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.ಇದರಿಂದ ಯಾವ ಕಾರಣಕ್ಕೂ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗ ಬಾರದುವೆಂದು ತಿಳಿಸಲಾಗಿದೆ.

ಈ ಮಧ್ಯೆ ಪಠ್ಯಕ್ರವನ್ನು ಸುಲಭಪಡಿಸುವ  ನಿಟ್ಟಿನಲ್ಲಿ ಪ್ರಶ್ನೆ ಪತ್ರಿಕೆಗಳಲ್ಲಿ ಆಯ್ಕೆ ಅವಕಾಶವನ್ನು ಪರಿಚಯಿಸುವ ನಿಟ್ಟಿನಲ್ಲೂ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಕಾರ್ಯೋನ್ಮುಖವಾಗಿದೆ.

ಈ ಕೊರೊನ ಮಹಾಮಾರಿಯಿಂದ ಹಲವು ತೊಂದರೆಗಳಾಗಿದ್ದು ಶಿಕ್ಷಣದಲ್ಲಿ ಹಲವು ಬದಲಾವಣೆ ಮಾಡುವ ಹಾಗೆ ಇದು ಮಾಡಿದೆ.ಮತ್ತು ಹಲವು ಪ್ರಮುಖ ಪರೀಕ್ಷೆಗಳಿಗೆ ಸಹ ಸಮಸ್ಯೆ ಉಂಟುಮಾಡಿದೆ.ಆದ ಕಾರಣ    ವಿದ್ಯಾರ್ಥಿಗಳು ಹಲವು ಪರೀಕ್ಷೆಗಳನ್ನು ಎದುರಿಸುವ ಹಿನ್ನೆಲೆಯಲ್ಲಿ ಒಂದು ಪರೀಕ್ಷೆ ನಡೆಯುವ ಅವಧಿಯಲ್ಲೇ ಇನ್ನೊಂದು ಪರೀಕ್ಷೆ ಎದುರಿಸಬೇಕಾಗುವ ಪರಿಸ್ಥಿತಿಯನ್ನು ಗಮನಿಸಿ ಯಾವ ವಿದ್ಯಾರ್ಥಿಗಳಿಗೂ ಅವಕಾಶ ತಪ್ಪಿ ಹೊಗಬಾರದೆಂದು ಎಂಬ ಉದ್ದೇಶದಿಂದ 2021ರ ಫೆಬ್ರುವರಿ ಮತ್ತು ಮೇ ತಿಂಗಳ ನಡುವೆ ನಾಲ್ಕು ಬಾರಿ ಜೆಇಇ (ಮೈನ್) ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಗುರುವಾರ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಜತೆ ನಡೆಸಿದ ಸಂವಾದದ ವೇಳೆ ಸ್ಪಷ್ಟಪಡಿಸಿದರು. ಅಭ್ಯರ್ಥಿಗಳು ಎಲ್ಲ ನಾಲ್ಕು ಪರೀಕ್ಷೆ ತೆಗೆದುಕೊಳ್ಳಲೂ ಅವಕಾಶ ನೀಡಲಾಗುವುದು. ಅತ್ಯುತ್ತಮ ಸಾಧನೆಯನ್ನು ಅಂತಿಮ ರಾಂಕಿಂಗ್ ಪರಿಗಣಿಸಲಾಗುವುದು ಎಂದು ಹೇಳಿದರು.

2021ನೇ ವರ್ಷಕ್ಕೆ ಹಾಲಿ ಪಠ್ಯಕ್ರಮ ಮುಂದುವರಿಯಲಿದೆ. ಈ ಮಧ್ಯೆ ವಿದ್ಯಾರ್ಥಿಗಳಿಗೆ ಒಟ್ಟು 90 ಪ್ರಶ್ನೆಗಳ ಪೈಕಿ 75 (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರದ ತಲಾ 25) ಪ್ರಶ್ನೆಗಳಿಗೆ ಉತ್ತರಿಸಲು ಆಯ್ಕೆ ಅವಕಾಶ ನೀಡುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ವಿವರಿಸಿದರು. ಪ್ರಸ್ತುತ ವಿದ್ಯಾರ್ಥಿಗಳು ಎಲ್ಲ 90 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ನಡೆಸುವ ದಿನಾಂಕದ ಸಂಬಂಧ ಎಲ್ಲ ಅಧಿಕಾರಿಗಳ ಜೊತೆ ಸಮಾಲೋಚಿಸಲಾಗುತ್ತಿದೆ ಎಂದು ಜೆಇಇ ಸಮಿತಿಯವರು ತಿಳಿಸಿದ್ದಾರೆ ಮತ್ತು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಸರಿಯಾದ ರೀತಿಯಲ್ಲಿ ಮಾಡಿಕೊಂಡು ಪರೀಕ್ಷೆಗಳಿಗೆ ಸಿದ್ಧರಾಗಿ ಬರಬೇಕೆಂದು ತಿಳಿಸಲಾಗಿದೆ.

Latest News

Aadhar Card
ಡಿಜಿಟಲ್ ಜ್ಞಾನ

ಕೇಂದ್ರದಿಂದ ರಾಜ್ಯಗಳಿಗೆ ಮಹತ್ವದ ಸುತ್ತೋಲೆ ; ಸರ್ಕಾರಿ ಸವಲತ್ತುಗಳು ಹಾಗೂ ಸಬ್ಸಿಡಿಯನ್ನು ಪಡೆಯಲು ಆಧಾರ್ ಕಡ್ಡಾಯ!

UIDAI ಒಂದು ಮಹತ್ವದ ಸುತ್ತೋಲೆಯನ್ನು ಹೊರಡಿಸಿದ್ದು, ಇತ್ತೀಚಿನ ಸುತ್ತೋಲೆಯಂತೆ ಇನ್ನು ಮುಂದೆ ಸರ್ಕಾರಿ ಸಬ್ಸಿಡಿಗಳು(Subsidy) ಮತ್ತು ಪ್ರಯೋಜನಗಳನ್ನು ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯವಾಗಿದೆ!

bsy
ರಾಜಕೀಯ

ಬಿಜೆಪಿಯ ಸಂಸದೀಯ ಮಂಡಳಿಗೆ ಯಡಿಯೂರಪ್ಪ ; ರಾಜಕೀಯವಾಗಿ ಮತ್ತಷ್ಟು ಬಲಗೊಂಡ ಬಿಎಸ್‌ವೈ

ಇನ್ನು ಸಂಸದೀಯ ಮಂಡಳಿಯಲ್ಲಿ ಉತ್ತರಪ್ರದೇಶ(UttarPradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌(Yogi Adityanath) ಅವರಿಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಅವರಿಗೆ ಸ್ಥಾನ ಲಭಿಸಿಲ್ಲ.

bjp
ರಾಜಕೀಯ

ಡಿಕೆಶಿ ಸ್ವಾತಂತ್ರ್ಯದ ನಡಿಗೆಯ ಉದ್ದೇಶ, ಸಿದ್ದರಾಮಯ್ಯ ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ? : ಬಿಜೆಪಿ

ಸಿದ್ದರಾಮಯ್ಯ(Siddaramaiah) ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ ಅಥವಾ ಕಾಂಗ್ರೆಸ್(Congress) ಹಿರಿಯ ನಾಯಕರು ಡಿಕೆಶಿ(DKS) ಸುತ್ತ ಹೆಣೆದಿರುವ ಜಾಲದಿಂದ ಸ್ವಾತಂತ್ರ್ಯ ಪಡೆಯುವುದೋ?

Ghee
ಆರೋಗ್ಯ

ತುಪ್ಪದ ಬಗ್ಗೆ ತಪ್ಪು ಕಲ್ಪನೆ ಬೇಡ! ; ತಪ್ಪದೇ ತುಪ್ಪ ಸೇವಿಸಿ, ಈ ಆರು ಪ್ರಯೋಜನಗಳನ್ನು ಪಡೆದುಕೊಳ್ಳಿ

ತುಪ್ಪವು ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ, ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.