• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಮಾರ್ಚ್‌ನಲ್ಲಿ ಐದು ಪಾಲಿಕೆ, ಜಿಪಂ-ತಾಪಂ ಚುನಾವಣೆ ಸಾಧ್ಯತೆ: ಸಿದ್ಧತೆ ಆರಂಬಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ

Shwetha Mohan by Shwetha Mohan
in ಪ್ರಮುಖ ಸುದ್ದಿ, ರಾಜಕೀಯ, ರಾಜ್ಯ, ವಿಜಯ ಟೈಮ್ಸ್‌
ಮಾರ್ಚ್‌ನಲ್ಲಿ ಐದು ಪಾಲಿಕೆ, ಜಿಪಂ-ತಾಪಂ ಚುನಾವಣೆ ಸಾಧ್ಯತೆ: ಸಿದ್ಧತೆ ಆರಂಬಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ
0
SHARES
10
VIEWS
Share on FacebookShare on Twitter
  • ಮಾರ್ಚ್‌ನಲ್ಲಿ ಐದು ಪಾಲಿಕೆ ಹಾಗೂ ಜಿಪಂ-ತಾಪಂ ಚುನಾವಣೆ ನಡೆಯುವ ಸಾಧ್ಯತೆ ಇದೆ
  • ಸಿಎಂ ಸಿದ್ದರಾಮಯ್ಯಅವರಿಂದ ಸಿದ್ಧತೆ ಆರಂಭಕ್ಕೆ ಸೂಚನೆ
  • ಪ್ರಚಾರಕ್ಕಿಂತ ಸೇವೆ ಮತ್ತು ಫಲಿತಾಂಶ ಜನರ ಮುಂದಿರಲಿ ಎಂದ ಸಿಎಂ

Bengaluru: ರಾಜ್ಯದ ರಾಜಕೀಯ ವಾತಾವರಣ ಮತ್ತೊಮ್ಮೆ ಚುರುಕುಗೊಳ್ಳುವ ಎಲ್ಲಾ ಸೂಚನೆಗಳು ಕಾಣಿಸುತ್ತಿವೆ. (Municipal elections in march.)

ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಗ್ರೇಟರ್‌ ಬೆಂಗಳೂರು (Greater Bangalore) ವ್ಯಾಪ್ತಿಯ ಐದು ಹೊಸ ಪಾಲಿಕೆಗಳ ಚುನಾವಣೆಗಳು, ಜೊತೆಗೆ ಜಿಲ್ಲಾ ಪಂಚಾಯತ್ (ಜಿಪಂ) ಮತ್ತು ತಾಲೂಕು ಪಂಚಾಯತ್‌ (ತಾಪಂ) ಚುನಾವಣೆಗಳು ನಡೆಯುವ ಸಾಧ್ಯತೆ ಬಲವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಈಗಾಗಲೇ ಸಚಿವರಿಗೆ ಚುನಾವಣಾ ಸಿದ್ಧತೆಗಳ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಸರ್ಕಾರದ ವಲಯಗಳಿಂದ ಲಭ್ಯವಾಗಿದೆ.

ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಗ್ರೇಟರ್‌ ಬೆಂಗಳೂರು ವ್ಯಾಪ್ತಿಯ ಐದು ಹೊಸ ಪಾಲಿಕೆಗಳ ಚುನಾವಣೆ ನಡೆಯುವ ಸಾಧ್ಯತೆ

ಸೋಮವಾರ ರಾತ್ರಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಸಚಿವರಿಗಾಗಿ ಆಯೋಜಿಸಿದ್ದ ಔತಣ ಸಭೆಯಲ್ಲೇ ಈ ಮಹತ್ವದ ಸೂಚನೆ ನೀಡಲಾಗಿದೆ.

ಆ ಸಂದರ್ಭದಲ್ಲಿ ಅವರು ಮುಂಬರುವ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳುವಂತೆ ಸಚಿವರಿಗೆ ಕಿವಿಮಾತು ನೀಡಿದರೆಂದು ಮೂಲಗಳು ಹೇಳುತ್ತವೆ.(Municipal elections in march.)

ಇನ್ನು ಈ ಬಾರಿ ಚುನಾವಣೆಗಳು ಕೇವಲ ಒಂದು ರಾಜಕೀಯ ಪ್ರಕ್ರಿಯೆಯಲ್ಲ, ಸರ್ಕಾರದ ಜನಪರ ನಿಲುವು ಮತ್ತು ನಮ್ಮ ಆಡಳಿತದ ವಿಶ್ವಾಸಾರ್ಹತೆಯನ್ನು ತೋರಿಸುವ ಅವಕಾಶವೂ ಆಗಿದೆ.

ಆದ್ದರಿಂದ ಎಲ್ಲ ಸಚಿವರು ತಮ್ಮ ಇಲಾಖೆಯ ಸಾಧನೆ ಮತ್ತು ಗ್ಯಾರಂಟಿ (Guarantee) ಯೋಜನೆಗಳ ಫಲಾನುಭವಿಗಳನ್ನು ನೇರವಾಗಿ ಜನರ ಬಳಿ ತಲುಪಿಸುವ ಕೆಲಸಕ್ಕೆ ತೊಡಗಬೇಕು ಎಂದು ಸಿಎಂ ತಿಳಿಸಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳು ನಡೆಯದೇ ಬಾಕಿಯಾಗಿದ್ದವು. ಹಾಗೆಯೇ, ಗ್ರೇಟರ್‌ ಬೆಂಗಳೂರು ಪ್ರದೇಶದ ಪುನರ್‌ರಚನೆ ಹಿನ್ನೆಲೆಯಲ್ಲಿ ಪಾಲಿಕೆ ಚುನಾವಣೆಯೂ ಅನೇಕ ಬಾರಿ ಮುಂದೂಡಲ್ಪಟ್ಟಿತ್ತು.


ಇದೀಗ ನಗರವನ್ನು ಐದು ಹೊಸ ಆಡಳಿತ ಘಟಕಗಳಾಗಿ ವಿಭಜಿಸಿ, ಪ್ರತ್ಯೇಕ ಪಾಲಿಕೆಗಳನ್ನು ರಚಿಸಿರುವ ಹಿನ್ನೆಲೆಯಲ್ಲಿ, ಪ್ರತಿ ಪಾಲಿಕೆಯಿಗೂ ಪ್ರತ್ಯೇಕ ಚುನಾವಣೆ ನಡೆಸುವ ತಯಾರಿ ನಡೆಯುತ್ತಿದೆ.

ಈ ಹೊಸ ವ್ಯವಸ್ಥೆಯಲ್ಲಿ ಪ್ರತಿ ಪಾಲಿಕೆಯು ತನ್ನದೇ ಆದ ಸ್ವಾಯತ್ತ ಅಧಿಕಾರವನ್ನು ಹೊಂದಿದ್ದು, ಸ್ಥಳೀಯ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ನಿರೀಕ್ಷೆಯಿದೆ.

ಇನ್ನು ಸಿದ್ಧರಾಮಯ್ಯ ಅವರು ಸಭೆಯಲ್ಲಿ ಸಚಿವರಿಗೆ, ಈ ಐದು ಪಾಲಿಕೆಗಳನ್ನೂ ಗೆಲ್ಲುವುದು ಸರ್ಕಾರದ ಗೌರವದ ವಿಷಯವಾಗಿದೆ. ಈಗಿನಿಂದಲೇ ಬೂತ್ ಮಟ್ಟದ ಸಿದ್ಧತೆ ಆರಂಭಿಸಬೇಕು.

ಪಕ್ಷದ ಕಾರ್ಯಕರ್ತರು, ಜನಪ್ರತಿನಿಧಿಗಳು, ಮತ್ತು ಸ್ಥಳೀಯ ನಾಯಕರ ನಡುವೆ ಸಮನ್ವಯ ಬೆಳೆಸಬೇಕು,ಎಂದು ಸೂಚಿಸಿದ್ದಾರೆ.

ಐದು ಹೊಸ ಪಾಲಿಕೆಗಳಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಪ್ರಾಬಲ್ಯ ಕಾಯ್ದುಕೊಳ್ಳಲು ಪ್ರಬಲ ಯತ್ನ ನಡೆಸುತ್ತಿದೆ.

ಬಿಜೆಪಿ (BJP) ಮತ್ತು ಜೆಡಿಎಸ್ (JDS) ಪಕ್ಷಗಳೂ ಈ ಚುನಾವಣೆಗಳನ್ನು ಮುಂದಿನ ಅಸೆಂಬ್ಲಿ ಚುನಾವಣೆಗಳ ಮುನ್ನೋಟವಾಗಿ ನೋಡುತ್ತಿವೆ. ಹೀಗಾಗಿ ಸ್ಪರ್ಧೆ ಬಿಗಿಯಾಗುವ ಸಾಧ್ಯತೆ ಇದೆ.

ಸಿಎಂ ಅವರು ಸಚಿವರಿಗೆ ಮತ್ತೊಂದು ಪ್ರಮುಖ ಸಂದೇಶ ನೀಡಿದ್ದು, ಪ್ರಚಾರಕ್ಕಿಂತಲೂ ಜನರೊಂದಿಗೆ ನೇರ ಸಂಪರ್ಕ ಹೆಚ್ಚಿಸುವತ್ತ ಗಮನಹರಿಸಬೇಕೆಂದು.

ಗ್ಯಾರಂಟಿ ಯೋಜನೆಗಳು – ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ, ಯುವ ನಿದಿ ಮುಂತಾದವುಗಳ ಫಲಾನುಭವಿಗಳನ್ನು ಜನತೆಗೆ ನೆನಪಿಸಬೇಕು.

ಈ ಯೋಜನೆಗಳ ಮೂಲಕ ಸರ್ಕಾರ ಜನರಿಗೆ ನೀಡಿದ ಭರವಸೆಯನ್ನು ನೇರವಾಗಿ ತಲುಪಿಸುತ್ತಿದೆ ಎಂಬ ನಂಬಿಕೆ ಮೂಡಬೇಕು.

ನಾವು ಮಾಡಿದ ಕೆಲಸಗಳೆಲ್ಲಾ ಜನರಿಗೆ ತಿಳಿದರೆ ಗೆಲುವು ನಮ್ಮದೇ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಅವರು ಪ್ರಚಾರಕ್ಕಿಂತಲೂ ಕಾರ್ಯನಿರ್ವಹಣೆಯ ಸತ್ಯಾಸತ್ಯತೆಯನ್ನು ಜನರ ಮುಂದೆ ಪ್ರದರ್ಶಿಸುವುದು ಮುಖ್ಯ ಎಂದು ಬಿಂಬಿಸಿದ್ದಾರೆ.

Tags: beginsbengaluruelectionpoliticswards

Related News

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ
Sports

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ

December 15, 2025
ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ
ಪ್ರಮುಖ ಸುದ್ದಿ

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ

December 15, 2025
ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ
ದೇಶ-ವಿದೇಶ

ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ

December 13, 2025
ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ
ಪ್ರಮುಖ ಸುದ್ದಿ

ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ

December 13, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.