ಇದು ರಾಜಧಾನಿ ಬೆಂಗಳೂರಿನ ಸುಂದರ ಕೆರೆಗಳಲ್ಲಿ ಒಂದಾಗಿದ್ದ ವೆಂಗಯ್ಯನ ಕೆರೆ. ಈ ಕೆರೆ ಹತ್ತೂರ ಮಂದಿಗೆ ನೀರುಣಿಸುತ್ತಿದ್ದ ದೊಡ್ಡ ಕೆರೆ.ವೆಂಗಯ್ಯನ ಕೆರೆ 65 ಎಕರೆಗೂ ಹೆಚ್ಚಿನ ವಿಸ್ತೀರ್ಣಕ್ಕೆ ವಿಶಾಲವಾಗಿ ಹಬ್ಬಿತ್ತು.
ಈ ಕೆರೆಯ ಹೆಸರಿನ ಅರ್ಥವೇ ಹಗಲು ಕನಸಿನ ಕರೆ ಅಂತ. ಈ ಕೆರೆ ದಂಡೆಯಲ್ಲಿ ನಿಂತರೆ ನಮ್ಮನ್ನು ನಾವೇ ಮರೆಯುವಷ್ಟು ಸುಂದರವಾಗಿತ್ತು ಈ ಕೆರೆ. ಅಂದದ ಕೆರೆಯ ಚಂದವನ್ನು ಹೆಚ್ಚಿಸಲು ಸುಂದರವಾದ ಉದ್ಯಾನವನವನ್ನು ನಿರ್ಮಿಸಲಾಗಿತ್ತು. ಬೋಟಿಂಗ್ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಈ ಕೆರೆ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ವಾಕಿಂಗ್, ಜಾಗಿಂಗ್ ಮಾಡುವವರ ಹಾಟ್ ಸ್ಪಾಟ್ ಆಗಿತ್ತು. ಮಕ್ಕಳಿಗೆ ಆಟ ಆಡಲು ಮಕ್ಕಳ ಉದ್ಯಾನವನವನ್ನೂ ನಿರ್ಮಿಸಲಾಗಿತ್ತು.
ಈ ಎಲ್ಲಾ ಕತೆಗಳು ಈಗ ಬರೀ ನೆನಪುಗಳಾಗಿ ಉಳಿದಿವೆ. ಇಲ್ಲಿನ ಅಂದ ಚಂದ ಹಗಲುಗನಸಾಗಿ ಉಳಿದಿವೆ. ಯಾಕಂದ್ರೆ ಈಗ ವೆಂಗಯ್ಯನ ಕೆರೆ ಕೊಚ್ಚೆ ಕೊಂಪೆಯಾಗಿದೆ.
ವೆಂಗಯ್ಯಕೆರೆಕಸದ ತೊಟ್ಟಿಯಾಗಿದೆ. ತಾಜ್ಯದಿಂದ ಕಲುಷಿತಗೊಂಡು ದುರ್ವಾಸನೆ ಬೀರುತ್ತಿದೆ. ಇದರಿಂದ ಸಾರ್ವಜನಿಕರು ಇಲ್ಲಿ ಮೂಗು ಬಿಟ್ಟು ಓಡಾಡೋದೇ ಕಷ್ಟ ಆಗಿದೆ.
ಮಕ್ಕಳಆಟ ಆಡೋ ಸಾಮಾಗ್ರಿಗಳು ಕೆಟ್ಟು ನಿಂತಿವೆ. ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ದೋಣಿಗಳು ಹಾಳಾಗಿವೆ. ಕೆರೆ ತುಂಬಾ ಗಿಡಗಂಟಿಗಳು ಬೆಳೆದು ಕೆರೆಯೇ ಮಾಯವಾಗಿದೆ. ಕೆರೆ ಸರಿಯಾದನಿರ್ವಹಣೆಇಲ್ಲದೆಅನೈತಿಕಚಟುವಟಿಕೆಗಳತಾಣವಾಗಿಮಾರ್ಪಟ್ಟಿದೆ.
ಇನ್ನು ಒಳ ಚರಂಡಿನೀರು ಸಂಸ್ಕರಣೆಯಾಗದೆ, ನೇರವಾಗಿ ಕೆರೆ ಸೇರುತ್ತಿದೆ. ಸೇರುತ್ತಿದೆ. ಕೆರೆಗೆ ಟ್ರೀಟ್ಮಾಡಿದ ನೀರನ್ನು ಬಿಡಬೇಕೆಂದು ವೆಂಗಯ್ಯನ ಕೆರೆ ಮುಂಭಾಗದಲ್ಲಿ ಟ್ರೀಟ್ಮೆಂಟ್ಪ್ಲಾಂಟನ್ನು ನಿರ್ಮಿಸಿದ್ದರು. ಆದ್ರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ.
ಈ ಪ್ಲಾಂಟ್ನಲ್ಲಿ ಟ್ರೀಟ್ಮಾಡುವುದಕ್ಕೆ ಹೆಚ್ಚಿನ ಸಾಮರ್ಥ್ಯ ಇಲ್ಲದಿರುವುದರಿಂದ ರಾಮಮೂರ್ತಿ ನಗರ ಆನಂದಪುರ ಕೆಆರ್ಪುರಂ ಟಿಸಿಪಾಳ್ಯ ಭಾಗದ ಚರಂಡಿ ನೀರು ನೇರವಾಗಿ ಹಗಲುಗನಸಿನಕೆರೆಗೆ ಸೇರಿ ಕಲುಷಿತಗೊಂಡಿದೆ. ಇನ್ನು ಕೆರೆಯ ನೀರು ಸಂಪೂರ್ಣ ಕಲುಷಿತಗೊಂಡಿದ್ದರಿಂದ ಅಂತರ್ಜಲ ಕೂಡ ವಿಷಮಯವಾಗಿದೆ. ಇದರಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ ಅನ್ನೋದು ಜನರ ಆತಂಕ.
ವೆಂಗ್ಯಯನ ಕೆರೆಯಿಂದ ಹರಿಯುವ ನೀರು ಶೀಗೆಹಳ್ಳಿಕೆರೆಗೆತಲುಪುತ್ತದೆ. ಈ ನೀರು ಎಲೆಮಲ್ಲಪ್ಪ ಶೆಟ್ಟಿ ಕೆರೆಗೆ ಸೇರಿ ಹೊಸಕೋಟೆ ಭಾಗಕ್ಕೆ ಹರಿಯುವ ನೀರೂ ಕಲುಷಿತಗೊಳ್ಳುವ ಸಾಧ್ಯತೆಯಿದೆ ಎನ್ನುತ್ತಾರೆ ಅಲ್ಲಿರುವ ಸಾರ್ವಜನಿಕರು.
ನೋಡಿದ್ರಾ, ಹೇಗೆ ಒಂದು ಸುಂದರ ಕೆರೆ ಹಾಡಹಗಲೇ ಕಗ್ಗೊಲೆಯಾಗಿದೆ ಅಂತ. ಪ್ರವಾಸೀತಾಣವಾಗಬೇಕಿದ್ದ ಹಗಲುಕನಸಿನಕೆರೆ ಅಧಿಕಾರಿಗಳ ಮುಸುಕಿನ ಗುದ್ದಾಟದಿಂದ ವಿಷನೀರ ಕೆರೆಯಾಗಿ ಪರಿವರ್ತನೆಯಾಗಿದೆ. ಈಗಲಾದ್ರೂ ಬಿಬಿಎಂಪಿ ಎಚ್ಚೆತ್ತುಕೊಂಡು ಈ ಕೆರೆಯನ್ನು ಪುನರುಜ್ಜೀವನಗೊಳಿಸಲಿ.
ಕೆ.ಆರ್‌ಪುರಂನಿಂದ ಅರ್ಚನಾ ಸಿಟಿಜನ್ ಜರ್ನಲಿಸ್ಟ್, ವಿಜಯಟೈಮ್ಸ್