ಬುಧವಾರ(Wednesday) ಬಾಲಿವುಡ್ ನಟ(Bollywood) ಅಜಯ್ ದೇವಗನ್(Ajay Devgn) ಕನ್ನಡದ ಬಾದ್‍ಷಾ, ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್(Kichcha Sudeep) ಅವರು ನೀಡಿದ್ದ ಹೇಳಿಕೆಯನ್ನು ಉದ್ದೇಶಿಸಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದರು.
ಹಿಂದಿ(Hindi) ನಮ್ಮ ರಾಷ್ಟ್ರಭಾಷೆ ಸುದೀಪ್ ಅವರೇ, ನೀವು ಯಾಕೆ ಹಿಂದಿ ಸಿನಿಮಾವನ್ನು ಹಿಂದಿಯಲ್ಲಿ ಡಬ್ ಮಾಡಿಸುತ್ತೀರಿ? ನಿಮ್ಮ ಮಾತೃಭಾಷೆಯಲ್ಲಿ ಮಾಡಿದ ಸಿನಿಮಾವನ್ನು ಹಿಂದಿಯಲ್ಲಿ ಡಬ್ ಮಾಡಿಸುವ ಅವಶ್ಯಕತೆ ಏನು? ಎಂದು ಟ್ವೀಟ್ ಮಾಡುವ ಮೂಲಕ ಹೇಳಿದರು. ಅಜಯ್ ದೇವಗನ್ ಈ ರೀತಿ ಹೇಳುತ್ತಿದ್ದಂತೆ ಕನ್ನಡಿಗರು ಕೆಂಡಾಮಂಡಲವಾದರು! ಅಜಯ್ ದೇವಗನ್ ಕಿಚ್ಚ ಸುದೀಪ್ ಅವರನ್ನು ಟ್ಯಾಗ್ ಮಾಡಿದ ಹಿನ್ನೆಲೆ, ಸುದೀಪ್ ಅವರು ಕೋಪದಿಂದ ಉತ್ತರಿಸದೇ, ಸೂಕ್ಷವಾಗಿ, ಜಾಣ್ಮೆಯಿಂದ ಸಾಕಷ್ಟು ಸಂಯಮತೆಯಿಂದ ಉತ್ತರಿಸಿದ್ದು,
ನಮಸ್ಕಾರ ಅಜಯ್ ದೇವಗನ್ ಸರ್ ನೀವು ಹಿಂದಿಯಲ್ಲಿ ಕಳಿಸಿದ್ದು ನನಗೆ ಅರ್ಥವಾಯಿತು. ಅದು ಯಾಕಂದರೆ ನಾವು ನಿಮ್ಮ ಭಾಷೆಯನ್ನು ಕಲಿತು, ಪ್ರೀತಿಸಿದ್ದೇವೆ. ತೊಂದರೆ ಇಲ್ಲ ಸರ್, ಆದ್ರೆ ನಾನು ಕನ್ನಡದಲ್ಲಿ ಟೈಪ್ ಮಾಡಿ ಕಳಿಸಿದ್ರೆ ಪರಿಸ್ಥಿತಿ ಹೇಗಿರತ್ತಿತ್ತು ಎಂದು ಊಹಿಸಿಕೊಳ್ಳುತ್ತಿದ್ದೆ! ನಾವೆಲ್ಲರೂ ಭಾರತಕ್ಕೆ ಸೇರುತ್ತೇವೆ ಅಲ್ವಾ ಸರ್? ಎಂದು ಹೇಳುವ ಮೂಲಕ ಸ್ಪಷ್ಟ ಉತ್ತರ ನೀಡಿದರು.
ಕಿಚ್ಚ ಸುದೀಪ್ ಅವರು ಈ ರೀತಿ ಉತ್ತರ ಕೊಡುತ್ತಿದ್ದಂತೆ ಅವರ ಅಭಿಮಾನಿಗಳು ಸೇರಿದಂತೆ, ಕನ್ನಡಿಗರು ಕಿಚ್ಚನ ಬೆಂಬಲಕ್ಕೆ ನಿಂತಿದ್ದಾರೆ. ಹಿಂದಿ ಸಿನಿಮಾವನ್ನು ಕರ್ನಾಟಕದಲ್ಲಿ ಬೆಂಬಲ ನೀಡಿ ಪ್ರೋತ್ಸಾಹಿಸಿದ್ದೇವೆ. ಆದರೂ ಇಂಥ ಹೇಳಿಕೆಗಳು ಅಕ್ಷಮ್ಯ ತಪ್ಪು! ಹಿಂದಿ ರಾಷ್ಟ್ರಭಾಷೆಯಲ್ಲ ಎಂಬುದು ಅವರಿಗೆ ಅರಿವಾಗಬೇಕಿತ್ತು. ಆದ್ರೆ ಅದನ್ನು ಮೀರಿ ಹಿಂದಿ ರಾಷ್ಟ್ರಭಾಷೆ ಎಂದು ಹೇಳುವ ಮೂಲಕ ಹಿಂದಿ ಒತ್ತಾಯ ಹೇರುವ ಪ್ರಯತ್ನ ಮಾಡಿದ್ದಾರೆ ಎಂದು ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ.

ಸದ್ಯ ಈ ಕುರಿತು ರಾಜಕೀಯ ವಲಯದಲ್ಲೂ ಸಾಕಷ್ಟು ಚರ್ಚೆಗಳು ಕೇಳಿಬಂದಿದ್ದು, ಮುರುಗೇಶ್ ನಿರಾಣಿಯನ್ನು ಅಜಯ್ ದೇವಗನ್ ಹೇಳಿಕೆಯ ಕುರಿತು ನಿಮ್ಮ ಪ್ರತಿಕ್ರಿಯೇ ಏನು ಎಂದು ಪ್ರಶ್ನಿಸಿದಾಗ ಅವರು ಕೊಟ್ಟ ಉತ್ತರ, “ಕನ್ನಡ ಪ್ರಾದೇಶಿಕ ಭಾಷೆ, ಹಿಂದಿ ರಾಷ್ಟ್ರ ಭಾಷೆ….ಎಲ್ಲಾ ಭಾಷೆಯೂ ನಮಗೆ ಬೇಕು. ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡಬೇಕು, ತಪ್ಪೇನಿಲ್ಲ ಎಂದು ಹೇಳಿದರು. ಮುರುಗೇಶ್ ನಿರಾಣಿ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ!