Chennai: ಬಿಸಿಸಿಐ ಕ್ರಿಕೆಟ್ ಜಗತ್ತಿನ ಅನಭಿಶಕ್ತ ದೊರೆ ಜಾಗತಿಕ ಕ್ರಿಕೆಟ್ ನ ಶ್ರೀಮಂತ ಬೋರ್ಡ್ ಇಂತಹ ದೊಡ್ಡ ಬೋರ್ಡ್ ತೊರೆಯಲು ಮುಂದಾಗಿರುವ (Muruli Vijay turned to foreign teams) ಟೀಂ ಇಂಡಿಯಾ ಓಪನರ್ ಇದೀಗ ವಿದೇಶಿ ತಂಡಗಳತ್ತ ಮುಖ ಮಾಡಿದ್ದಾರೆ.
ಭಾರತ ತಂಡದಲ್ಲಿ 30+ ವಯಸ್ಸಿನ ಆಟಗಾರರನ್ನು 80 ವರ್ಷದ ವೃದ್ದರಂತೆ ನೋಡಲಾಗುತ್ತದೆ. ಆಗ ಅವಕಾಶಗಳನ್ನು ನೀಡುವುದಿಲ್ಲ.
ಹೀಗಾಗಿ ನಾನು ವಿದೇಶಿ ತಂಡಗಳತ್ತ ಮುಖ ಮಾಡಿದ್ದಾನೆ ಎಂದು ಟೀಮ್ ಇಂಡಿಯಾದ ಆಟಗಾರ ಮುರುಳಿ ವಿಜಯ್ (Muruli Vijay) ಹೇಳಿದ್ದಾರೆ.
ಈ ಕುರಿತು ಮಾದ್ಯಮವೊಂದಕ್ಕೆ ಹೇಳಿಕೆ ನೀಡಿರುವ ಅವರು, ‘ಭಾರತೀಯ ಕ್ರಿಕೆಟ್‌ನಲ್ಲಿ (Indian cricket) ಅವಕಾಶ ಪಡೆಯಲು ನನಗೆ ವಯಸ್ಸು ಅಡ್ಡಿಯಾಗುತ್ತಿದೆ ನಾನು ಬಿಸಿಸಿಐ ಜೊತೆಗಿನ ನನ್ನ ವ್ಯವಹಾರವನ್ನು ಬಹುತೇಕ ಮುಗಿಸಿದ್ದೇನೆ.
ನಾನು ವಿದೇಶದಲ್ಲಿ ನನ್ನ ವೃತ್ತಿ ಜೀವನದ ಮಾರ್ಗಗಳನ್ನು ಕಂಡುಕೊಳ್ಳಲು ಬಯಸುತ್ತೇನೆ. ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ಅನ್ನು (Muruli Vijay turned to foreign teams) ಆಡಲ ಬಯಸುತ್ತೇನೆ ಎಂದು ಹೇಳಿದ್ದಾರೆ.

ಮುರಳಿ ವಿಜಯ್ 27 ಫೆಬ್ರವರಿ 2010 ರಂದು ದಕ್ಷಿಣ ಆಫ್ರಿಕಾ(South Africa) ವಿರುದ್ಧದ ಏಕದಿನ ಪಂದ್ಯದ ಮೂಲಕ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದರು.
ಭಾರತದ ಪರ 61 ಟೆಸ್ಟ್ ಮತ್ತು 17 ಏಕದಿನ ಮತ್ತು 9 ಟಿ20 ಪಂದ್ಯಗಳನ್ನು ಆಡಿರುವ ಅನುಭವಿ ಆರಂಭಿಕ ಆಟಗಾರ ಮುರಳಿ ವಿಜಯ್ ಭಾರತ ತಂಡವನ್ನು ತೊರೆಯುವುದು ಬಹುತೇಕ ಖಚಿತವಾಗಿದೆ.
2018ರಲ್ಲಿ ಆಸ್ಟ್ರೇಲಿಯಾ (Australlia) ವಿರುದ್ಧ ಪರ್ತ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾದಲ್ಲಿ (Team India) ಕಾಣಿಸಿಕೊಂಡಿದ್ದ
ಮುರುಳಿ ವಿಜಯ್ ಬಳಿಕ ತಮಿಳುನಾಡು (Tamil nadu) ಕ್ರಿಕೆಟ್ ಲೀಗ್ ನಲ್ಲಿ ಕಾಣಿಸಿಕೊಂಡಿದ್ದರು.
ಇದೀಗ ಭಾರತ ತಂಡದಲ್ಲಿ ಅವಕಾಶ ಸಿಗದೇ ಇರುವ ಕಾರಣ ಅವರು ವಿದೇಶಿ ತಂಡಗಳತ್ತ ಮುಖ ಮಾಡಿದ್ದಾರೆ.
ಇದನ್ನೂ ಓದಿ: https://vijayatimes.com/rashmika-got-negative-comment/
2020 ರಲ್ಲಿ, ಮುರಳಿ ವಿಜಯ್ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ವೇಳೆ ತಮಿಳುನಾಡು ತಂಡವನ್ನು ಪ್ರತಿನಿಧಿಸಿದ್ದರು. ಇತ್ತೀಚೆಗೆ, ಅವರು ಹವ್ಯಾಸಿ ಗಾಲ್ಫ್ ಪಂದ್ಯಾವಳಿಯಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು.
ಮುರಳಿ ವಿಜಯ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (Indian premiere league) ಡೆಲ್ಲಿ ಡೇರ್‌ಡೆವಿಲ್ಸ್‌ಗೆ ತೆರಳುವ ಮೊದಲು, ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ಆಡಿದರು.
2016 ರಲ್ಲಿ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಬದಲಿಗೆ ಕಿಂಗ್ಸ್ XI ಪಂಜಾಬ್‌ನ(Punjab) ನಾಯಕರಾಗಿ ನೇಮಕಗೊಂಡರು. ಮಣಿಕಟ್ಟಿನ ಶಸ್ತ್ರಚಿಕಿತ್ಸೆಯಿಂದಾಗಿ 2017ರಲ್ಲಿ ಕ್ರಿಕೆಟನಿಂದ ವಿರಾಮ ಪಡೆದುಕೊಂಡಿದ್ದರು.