Visit Channel

ಮುಷ್ಕರ ಹಿನ್ನಲೆ ಖಾಸಗಿ ವಾಹನಗಳ ಬಳಕೆಗೆ ಚಿಂತನೆ

WhatsApp Image 2020-12-12 at 7.25.53 PM

ಬೆಂಗಳೂರು, ಡಿ. 12: ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಭಾನುವಾರದಿಂದ ಸಾರ್ವಜನಿಕರಿಗೆ ಖಾಸಗಿ ವಾಹನಗಳ ವ್ಯವಸ್ಥೆ ಮಾಡಲಾಗುವುದು ಎಂದು ಸಾರಿಗೆ ಸಚಿವರೂ, ಉಪ ಮುಖ್ಯಮಂತ್ರಿಯೂ ಆಗಿರುವ ಲಕ್ಷ್ಮಣ ಸವದಿ ತಿಳಿಸಿದರು.

ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಭಾನುವಾರದಿಂದ ಸರ್ಕಾರಿ ಬಸ್ ಪ್ರಯಾಣ ದರದಲ್ಲೇ ಖಾಸಗಿ ವಾಹನ ವ್ಯವಸ್ಥೆ ಕಲ್ಪಿಸಲಾಗುವುದು. ನಾವು ಪ್ರತಿಭಟನಾನಿರತ ನೌಕರರ ಜತೆ ಚರ್ಚಿಸಲು ಸಿದ್ದವಿದ್ದು, ರಾತ್ರಿ 12 ಗಂಟೆವರೆಗೂ ಕಾಯಲು ಸಿದ್ದನಿದ್ದೇನೆ. ಹಾಗಾಗಿ ನೀವು ಮೊದಲು ಕೆಲಸಕ್ಕೆ ಹಾಜರಾಗಿ ಬಳಿಕ ಮಾತುಕತೆ ನಡೆಸಲು ಬನ್ನಿ. ಸರ್ಕಾರ ನೌಕರರ ಅಹವಾಲುಗಳನ್ನು ಕೇಳಲು ಸಿದ್ದವಿದೆ ಎಂದರು

ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಬೇಕೆಂಬ ಉದ್ದೇಶ ಇಟ್ಟುಕೊಂಡು ಎಲ್ಲಿ ಹೋರಾಟ ನಡೆದರೂ ಹೋಗುತ್ತಾರೆ. ಈಗ ಸಾರಿಗೆ ನೌಕರರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಅವರು ಅವರಷ್ಟಕ್ಕೆ ರಾಜಕೀಯ ಮಾಡಲಿ, ನಾವು ಜನರ ಸಮಸ್ಯೆಯ ಬಗ್ಗೆ ಗಮನ ನೀಡುತ್ತೇವೆ ಎಂದು ಟೀಕಿಸಿದರು.

Latest News

China Ship
ದೇಶ-ವಿದೇಶ

ಶ್ರೀಲಂಕಾ ಬಂದರಿನಲ್ಲಿ ಚೀನಾದ ಹಡಗು ; ಭಾರತದ ಕಳವಳಕ್ಕೆ 5 ಕಾರಣಗಳು ಇಲ್ಲಿವೆ!

ಮೊದಲಿನಿಂದಲೂ ಈ ಹಡಗು ಶ್ರೀಲಂಕಾ ಬಂದರಿಗೆ ಬರುವುದನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ಭಾರತದ ಕಳವಳಕ್ಕೆ ಪ್ರಮುಖ 5 ಕಾರಣಗಳೆಂದರೆ,

bjp
ರಾಜಕೀಯ

ಕಾಂಗ್ರೆಸ್ಸಿಗರಿಗೇಕೆ ಜಿಹಾದಿಗಳ ಮೇಲೆ ಇಷ್ಟೊಂದು ಪ್ರೀತಿ? : ಬಿಜೆಪಿ ಪ್ರಶ್ನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಕ್ಕೆ ಮಸಿ ಬಳಿಯಲು ಯತ್ನಿಸಿದ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲಾಗಿದೆ ಎಂದು ಬಿಜೆಪಿ ತಿಳಿಸಿದೆ.

Pingali
ಮಾಹಿತಿ

ನಮ್ಮ ರಾಷ್ಟ್ರಧ್ವಜವನ್ನು ನಿರ್ಮಿಸಿದ ಪಿಂಗಳಿ ವೆಂಕಯ್ಯ, ಮೊದಲು ಬ್ರಿಟಿಷ್ ಸೈನ್ಯದಲ್ಲಿದ್ದರು ; ಇಲ್ಲಿದೆ ಓದಿ ಅಚ್ಚರಿಯ ಮಾಹಿತಿ

ದೇಶಕ್ಕೊಂದು ಧ್ವಜಕೊಟ್ಟು 100 ವರ್ಷ ಕಳೆದರೂ ಪಿಂಗಳಿ ಅವರ ನೆನಪು ಅಜರಾಮರವಾಗಿದೆ. ಪಿಂಗಳಿ ವೆಂಕಯ್ಯ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಮುಂದೆ ಓದಿ.