- ಕರ್ಬೂಜ ಹಣ್ಣಿಗೆ (Musk Mellon) ಪಿತ್ತ ಮತ್ತು ವಾತ ನಿಯಂತ್ರಿಸುವ ಸಾಮರ್ಥ್ಯವಿದೆ!
- ದೇಹದ ಶಕ್ತಿ ಹೆಚ್ಚಿಸುತ್ತೆ, (Increases body strength) ರಕ್ತದೊತ್ತಡ ನಿಯಂತ್ರಿಸಲೂ ಕರ್ಬೂಜ ಪರಿಣಾಮಕಾರಿ
- ಮೂತ್ರ ಕೋಶದಲ್ಲಿ ಕಾಣಿಸುವ ಕಲ್ಲನ್ನು ಹೋಗಲಾಡಿಸುವ (Musk Mellon Health Benifits) ಗುಣವನ್ನು ಹೊಂದಿದೆ
ಇನ್ನೇನು ಬೇಸಿಗೆ ಕಾಲ ಆರಂಭವಾಯ್ತು ಎನ್ನುವ ಮುನ್ನವೇ ಬಿರು ಬಿಸಿಲು (Hot summer) ಸುಡಲಾರಂಭಿಸಿದೆ.ದಿನದಿಂದ ದಿನಕ್ಕೆ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂಥಾ ಸರ್ಕಸ್ ಜೀವನದ ನಡುವೆ ಆರೋಗ್ಯವನ್ನು (Health) ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.ಬಿಸಿಲ ಬೇಗೆ ತಂಪಾದ ಪಾನೀಯ (Cool drink) ದಾಹ ನೀಗಿಸುತ್ತದೆ.
ಆದರೆ ಕೆಲವು ಪಾನೀಯಗಳು ದೇಹವನ್ನು ತಂಪಾಗಿರಿಸಿದರೂ ಆರೋಗ್ಯಕ್ಕೆ ಪರಿಣಾಮಕಾರಕವಾಗಬಹುದು. ಹಾಗಾಗಿ ಅಂತಹ ಹಾಳುಮೂಳು ಸೇವಿಸುವ ಬದಲು ಕರ್ಬೂಜದ ಹಣ್ಣು ಇಂಥಾ ಸಮಯದಲ್ಲಿ ಬೆಸ್ಟ್. ಇದರಿಂದ ಆರೋಗ್ಯಕ್ಕೂ ಹತ್ತಾರು ಲಾಭವಿದೆ (There are many health benefits).. ಇದು ದೇಹಕ್ಕೂ ಹಿತಕಾರಿಯಾಗಿದೆ.
ಕರ್ಬೂಜ ಹಣ್ಣು ತಂಪು ಗುಣವನ್ನು ಹೊಂದಿದೆ. ಇದಕ್ಕೆ ಪಿತ್ತ(Bile) ಮತ್ತು ವಾತವನ್ನು ನಿಯಂತ್ರಿಸುವ ಸಾಮರ್ಥ್ಯವಿದೆ. ಇವಿಷ್ಟು ಮಾತ್ರವಲ್ಲ, ದೇಹದ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥವನ್ನು ಈ ಹಣ್ಣು ಹೊಂದಿದೆ. ಅಲ್ಲದೆ ಕರ್ಬೂಜ ಮೂತ್ರವನ್ನು ಹೆಚ್ಚಿಸುವ ಗುಣದ ಜೊತೆಗೆ, ಮೂತ್ರ ಕೋಶದಲ್ಲಿ(Urinary tract) ಕಾಣಿಸುವ ಕಲ್ಲನ್ನು ಹೋಗಲಾಡಿಸುವ ಗುಣವನ್ನು ಹೊಂದಿದೆ.

ಮತ್ತೊಂದು ವಿಚಾರವೆಂದರೆ ಇದು ಕರುಳನ್ನು(Intestines) ಸಹ ಸ್ವಚ್ಛ ಮಾಡುತ್ತದೆ.ಮಲ ವಿಸರ್ಜನೆಗೂ(defecation) ಇದು ಸಹಕಾರಿಯಾಗಿ. ಕರ್ಬೂಜ ಹಣ್ಣಿನಲ್ಲಿ ನಾನಾ ಗುಣವಿದ್ದು, ಕೆಲವರಿಗೆ ಮಲ ವಿಸರ್ಜನೆಯಾಗಲು ವೈದ್ಯರು ಈ ಹಣ್ಣನ್ನು ಸೇವಿಸಲು ಹೇಳುತ್ತಾರೆ.
ಮನುಷ್ಯನಿಗೆ ದೇಹದಲ್ಲಿ ರಕ್ತದ ಒತ್ತಡದ (blood pressure) ಸಮಸ್ಯೆ ಹತೋಟಿಗೆ ಬರಬೇಕಾದರೆ ಮೊದಲು ಎಲೆಕ್ಟ್ರೋಲೈಟ್ ಗಳು ಸಮತೋಲನ ಆಗಬೇಕು. ಇದರಿಂದ ರಕ್ತ ಸಂಚಾರ ಸುಗಮವಾಗಿ ದೇಹದಲ್ಲಿ ರಕ್ತದ ಒತ್ತಡ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಪೊಟ್ಯಾಶಿಯಂ ಖನಿಜಾಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ ಯಾವುದೇ ಆಹಾರ ಈ ಕೆಲಸವನ್ನು ಸುಲಭವಾಗಿ ಮಾಡುತ್ತದೆ.
ಇದನ್ನೂ ಓದಿ: http://ಬಿರು ಬೇಸಿಗೆಯಲ್ಲೂ ದೇಹವನ್ನು ತಂಪಾಗಿ ಇರಿಸುತ್ತದೆ ಅತ್ತಿ ಹಣ್ಣುಗಳು
ಕರ್ಬೂಜ ಹಣ್ಣಿನಲ್ಲಿ ಪೊಟ್ಯಾಷಿಯಂ ಅಂಶ ಬಹಳಷ್ಟು ಹೆಚ್ಚಾಗಿದ್ದು, ಇದು ಮನುಷ್ಯನ ದೇಹದಲ್ಲಿ ರಕ್ತದ ಅಸಮರ್ಪಕ ಸಂಚಾರದಿಂದ (Improper blood circulation) ಉಂಟಾಗುವ ಹೃದಯ (Heart)ಸಂಬಂಧಿ ಸಮಸ್ಯೆಗಳು ಮತ್ತು ಪಾರ್ಶ್ವವಾಯು (Paralysis) ಸಮಸ್ಯೆಗಳನ್ನು ಭವಿಷ್ಯದಲ್ಲಿ ಎದುರಾಗದಂತೆ ನೋಡಿಕೊಳ್ಳುತ್ತದೆ. ಹೃದಯ ಸಂಬಂಧ ಕಾಯಿಲೆಯನ್ನು ನಿಯಂತ್ರಿಸುವ ಗುಣ, ಅಧಿಕ ರಕ್ತದೊತ್ತಡ ನಿಯಂತ್ರಿಸುವ ಶಕ್ತಿ ಹಾಗೂ ಉರಿ ಬೇಸಿಗೆಯಲ್ಲಿ (Musk Mellon Health Benifits) ದೇಹದಲ್ಲಿ ನೀರಿನ ಅಂಶ ಹೆಚ್ಚಿಸಲು ಕರ್ಬೂಜ ಜ್ಯೂಸ್ ಮಾಡಿ ಸೇವಿಸಿದರೆ ಉತ್ತಮ.