ದೇಶದಲ್ಲಿ ಒಂದು ತಿಂಗಳ ಹಿಂದೆ ದೊಡ್ಡ ಮಟ್ಟದ ವಿವಾದ, ಚರ್ಚೆಯಾಗಿದ್ದ ಹಿಜಾಬ್ ಪ್ರಕರಣ ಬಿಗಿ ಸಂಚಲವನ್ನೇ ಸೃಷ್ಟಿಸಿತ್ತು. ಹಿಜಾಬ್ ಧರಿಸಿ ಕಾಲೇಜಿಗೆ ಹೋಗುವುದಕ್ಕಿಂತ ತರಗತಿಗೆ ಪ್ರವೇಶಿಸುವುದು, ಪರೀಕ್ಷೆ ಬರೆಯುವುದಕ್ಕೆ ಅನುಮತಿ ಇಲ್ಲ ಎಂಬ ವಾದಗಳು ನಡೆಯುತ್ತಲೇ ಇತ್ತು. ಒಂದೆಡೆ ಹಿಜಾಬ್ ಧರಿಸಿಯೇ ತರಗತಿಗೆ ಪ್ರವೇಶಿಸಿ ಪರೀಕ್ಷೆ ಬರೆಯುತ್ತೀವಿ ಎಂದು ಮುಸ್ಲಿಂ ವಿದ್ಯಾರ್ಥಿಗಳು ಪಟ್ಟುಹಿಡಿದು ಕುಳಿತರೇ, ಶಿಕ್ಷಣ ಇಲಾಖೆ ಹಿಜಾಬ್ ಧರಿಸಿದರೇ ಪ್ರವೇಶ ಇಲ್ಲ ಎಂಬ ವಾದ ಪ್ರತಿಪಾದಿಸಿತ್ತು.
ಈ ವಿಷಯ ಉಡುಪಿಯ ಒಂದು ಪುಟ್ಟ ಕಾಲೇಜಿನಲ್ಲಿ ಉದ್ಭವಗೊಂಡು, ದೇಶದ ಪ್ರಮುಖ ಸುದ್ದಿಗೆ ತಲುಪಿತು. ಈ ಕುರಿತು ಹೈಕೋರ್ಟ್ ತೀರ್ಪಿಗಾಗಿ ಕೂಡ ಹಠ ಹಿಡಿದು ಕುಳಿತುಕೊಳ್ಳುವಂತ ಪರಿಸ್ಥಿತಿ ಎದುರಾಯಿತು. ಈ ವಾದ-ವಿವಾದಗಳ ನಡುವೆ ಮಂಡ್ಯ ಜಿಲ್ಲೆಯ ಪಿಇಎಸ್ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಮುಸ್ಕಾನ್ ಎಂಬ ಯುವತಿ, ತನ್ನ ಸುತ್ತ ಸುತ್ತುವರೆದಿದ್ದ ಯುವಕರ ವಿರುದ್ಧ ಅಲ್ಲಾಹು ಅಕ್ಬರ್ ಎಂದು ಮೂರು ಬಾರಿ ಘೋಷಣೆ ಕೂಗುವ ಮೂಲಕ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾದರು.
ಈ ಘಟನೆಯಾದ ಬಳಿಕ ಮುಸ್ಕಾನ್ ಮನೆಗೆ ಅನೇಕ ಮುಸ್ಲಿಂ ಮುಖಂಡರು ಭೇಟಿ ಕೊಟ್ಟು ತಮ್ಮ ಮನಸ್ಸಿಗೆ ಬಂದ ಉಡುಗೊರೆಯನ್ನು ಕೊಟ್ಟು ಘೋಷಣೆಗೆ ಬೆಂಬಲ ಸೂಚಿಸಿ ಆಕೆಯನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಿದರು. ಇದು ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿ ಪರಿವರ್ತಿನೆಗೊಂಡಿತ್ತು. ಸದ್ಯ ಈಗ ಮತ್ತೆ ಅದೇ ರೀತಿಯ ಘಟನೆ ನಡೆದಿದ್ದು, ಈ ಬಾರಿ ಬಿನ್ ಲಾಡನ್ ಆಪ್ತರಾದ ಅಲ್‍ಖೈದ ಮುಖ್ಯಸ್ತ ಅಯಾಮನ್ ಅವರು ಹಿಜಾಬ್ ವಿವಾದದಲ್ಲಿ ಮುಸ್ಕಾನ್ ಎಂಬ ಯುವತಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದು ನಿಜಕ್ಕೂ ಶ್ಲಾಘನೀಯ.
ಅಷ್ಟು ಜನ ಕೇಸರಿ ಹಿಡಿದ ಹಿಂದೂ ಯುವಕರ ನಡುವೇ ಆಕೆ ಒಬ್ಬಳೇ ನಿಂತು ಅಲ್ಲಾಹು ಅಕ್ಬರ್ ಎಂದು ಕೂಗಬೇಕು ಎಂದರೇ ಎಷ್ಟು ಧೈರ್ಯವಿರಬೇಕು! ಮುಸ್ಕಾನ್ ಧೈರ್ಯಕ್ಕೆ ನನ್ನ ಮೆಚ್ಚುಗೆ ಇದೆ, ಈಕೆ ಭಾರತದ ಉದಾತ್ತ ಮಹಿಳೆ ಎಂದು ಅಲ್‍ಖೈದಾ ಮುಖ್ಯಸ್ಥ ಹೇಳಿದ್ದಾರೆ.