ರಾಜ್ಯದಲ್ಲಿ ಉಂಟಾಗಿದ್ದ ಹಿಜಾಬ್(Hijab) ಸಂಘರ್ಷದಲ್ಲಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ಮಂಡ್ಯದ ಪಿಇಎಸ್ ಕಾಲೇಜಿನ ವಿದ್ಯಾರ್ಥಿನಿ ಮಸ್ಕಾನ್(Muskan) ಬಗ್ಗೆ ಬುಧವಾರ ಅಲ್‍ಖೈದಾ(Al-Khaidha) ಮುಖ್ಯಸ್ಥರು ಮುಸ್ಲಿಂ ಯುವತಿ ಮಸ್ಕಾನ್ ಅಷ್ಟು ಜನ ಯುವಕರು ಕೇಸರಿ ಹಿಡಿದು ನಿಂತಾಗ ದೈರ್ಯದಿಂದ ಹೆದರದೆ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿ ತಾನೊಬ್ಬಳು ದೈರ್ಯಶಾಲಿ ಎಂಬುದನ್ನು ವಿಶ್ವಕ್ಕೆ ಪರಿಚಯಿಸಿದ್ದಾಳೆ.

ಇಡೀ ಭಾರತಕ್ಕೆ ಮಸ್ಕಾನ್ ಮಾದರಿಯ ಹೆಣ್ಣುಮಗಳು, ಭಾರತದ ಉದಾತ್ತ ಮಹಿಳೆ. ಹಿಜಾಬ್ ನಡುವಿನ ಸಂಘರ್ಷದಲ್ಲಿ ಮಸ್ಕಾನ್ ತೋರಿದ ಧೈರ್ಯಕ್ಕೆ ನಮ್ಮ ಮೆಚ್ಚುಗೆಯಿದೆ. ಮುಸ್ಲಿಮರು ಅದೇ ರೀತಿ ಧೈರ್ಯಶಾಲಿಗಳಾಗಬೇಕು ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯೂ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಈ ಸಂಗತಿ ಮಸ್ಕಾನ್ ತಂದೆಗೆ ತಲುಪಿದೆ. ಈ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಸ್ಕಾನ್ ತಂದೆ, ” ನೋಡಿ ಸರ್, ಅವರು ಯಾರೋ ನನಗೆ ಗೊತ್ತಿಲ್ಲ.

ನನಗೆ ಈ ವಿಷಯ ಟಿವಿಯಲ್ಲಿ ಬರುತ್ತಿದೆ ಎಂದು ಬೆಳಗ್ಗೆ 11 ಗಂಟೆಗೆ ಸ್ನೇಹಿತರೊಬ್ಬರು ಹೇಳಿದರು. ಅಲ್‍ಖೈದಾ ಅಂದ್ರೆ ಏನು ಎಂಬುದು ಗೊತ್ತಿಲ್ಲ, ಅವರೇನೋ ಇಷ್ಟ ಬಂದ ಹಾಗೇ ಹೇಳಿಕೆ ಕೊಡುತ್ತಾರೆ. ಆದ್ರೆ ನಾವು ಇಲ್ಲಿ ನರಳಾಡುತ್ತೀವಿ, ನಾವೆಲ್ಲರೂ ಇಲ್ಲಿ ಹೇಗೋ ನೆಮ್ಮದಿಯಿಂದ ಚೆನ್ನಾಗಿದ್ದೇವೆ. ಇವರು ತಮ್ಮ ಮನಬಂದಂತೆ ಹೇಳಿಕೆ ಕೊಟ್ಟು ನಮಗೆ ಇಲ್ಲಿ ತೊಂದರೆ ಮಾಡುವುದು ಸರಿಯಲ್ಲ” ಎಂದು ಮಸ್ಕಾನ್ ತಂದೆ ಪ್ರತಿಕ್ರಿಯೇ ನೀಡಿದ್ದಾರೆ.